ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಮಹಿಳಾ ಕಾಲೇಜು ನಿರ್ಮಾಣ ವಿರೋಽಸಿ ಎಬಿವಿಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಕುಬೇರ, ಚರಣ್, ಕನಕರಾಜ್‌ಕೋಡಿಹಳ್ಳಿ, ಸುದರ್ಶನ್, ಜೀವನ್, ವಂಶಿ, ಯಶವಂತ್, ರಘು, ಹರೀಶ್, ಮನೋಜ್ ಇದ್ದರು.
- ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
- ಮರಗಳ ಕಡಿತಲೆಗೂ ಆಕ್ಷೇಪ
- ಪಾರಂಪರಿಕ ಕಟ್ಟಡ ಘೋಷಣೆಗೆ ಆಗ್ರಹ
ಚಿತ್ರದುರ್ಗ: ನಗರದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಸರ್ಕಾರಿ ಮಹಿಳಾ ಕಾಲೇಜು ನಿರ್ಮಾಣ ವಿರೋಽಸಿ ಎಬಿವಿಪಿ ಕಾರ್ಯಕರ್ತರು , ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಽಕಾರಿಗೆ ಮನವಿ ಸಲ್ಲಿಸಿದರು.
ಮಹಿಳಾ ಕಾಲೇಜು ನಿರ್ಮಾಣಕ್ಕೆ ವಿರೋಧವಿಲ್ಲ. ಮಹಿಳಾ ಶಿಕ್ಷಣಕ್ಕೆ ಸಂಪೂರ್ಣ ಬೆಂಬಲವಿದೆ. ಆದರೆ ಸೈನ್ಸ್ ಕಾಲೇಜು ಆವರಣದ ಬದಲು ಬೇರೊಂದು ಸ್ಥಳದಲ್ಲಿ ಮಹಿಳಾ ಕಾಲೇಜು ಕಟ್ಟಡ ನಿರ್ಮಿಸುವಂತೆ ಆಗ್ರಹಿಸಿದರು.
ಕಾಲೇಜಿನ ಆವರಣದಲ್ಲಿ ೪೦-೫೦ ವರ್ಷಗಳಿಂದ ಇರುವ ಮರಗಳನ್ನು ಕಡಿಯುವುದರಿಂದ ಪರಿಸರಕ್ಕೆ ಧಕ್ಕೆಯಾಗಲಿದೆ. ಅಭಿವೃದ್ಧಿ ಹೆಸರಲ್ಲಿ ಒಂದು ಶೈಕ್ಷಣಿಕ ಸಂಸ್ಥೆಯ ಮೂಲ ಸೌಕರ್ಯ ನಾಶಪಡಿಸಿ ಮತ್ತೊಂದನ್ನು ನಿರ್ಮಿಸುವುದು ಯುಕ್ತವಲ್ಲ. ಅಂದಾಜು ೭೫ ವರ್ಷ ತಿಹಾಸವುಳ್ಳ ವಿಜ್ಞಾನ ಕಾಲೇಜನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಬೇಕು. ಸೂಕ್ತ ಅನುದಾನದೊಂದಿಗೆ ಸಂಶೋಧನೆ, ಮೂಲ ಸೌಕರ್ಯ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಚುನಾವಣಾ ಕಾರ್ಯಗಳಿಗೆ ಕಾಲೇಜು ಕಟ್ಟಡ ಬಳಸಿಕೊಳ್ಳಬಾರದು ಎಂದು ಆಗ್ರಹಿಸಿದರು.
ಚುನಾವಣಾ ಕಾರ್ಯಕ್ಕೆ ಬೇರೊಂದು ಕಟ್ಟಡ ಗುರುತಿಸಬೇಕು ಅಥವಾ ನಿರ್ಮಿಸಬೇಕು. ತಾತ್ಕಾಲಿಕವಾಗಿ ಇಲ್ಲಿ ಆರಂಭಿಸಿರುವ ಕೇಂದ್ರೀಯ ವಿದ್ಯಾಲಯವನ್ನು ಶೀಘ್ರ ಬೇರೆಡೆಗೆ ಸ್ಥಳಾಂತರಿಸಬೇಕೆAದು ಆಗ್ರಹಿಸಿದರು.
ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಕುಬೇರ, ಚರಣ್, ಕನಕರಾಜ್ ಕೋಡಿಹಳ್ಳಿ, ಸುದರ್ಶನ್, ಜೀವನ್, ವಂಶಿ, ಯಶವಂತ್, ರಘು, ಹರೀಶ್, ಮನೋಜ್ ಇತರರು ಇದ್ದರು.