ಚಿತ್ರದುರ್ಗದ ದಾವಣಗೆರೆ ರಸ್ತೆಯ ಎಂಪಿಎAಸಿ ತಿರುವು ಪಡೆಯುವ ಮಾರ್ಗದ ತೆರೆದ ರಾಜಕಾಲುವೆ. 
ಚಿತ್ರದುರ್ಗ

ಅನಾಹುತಕ್ಕೆ ಎಡೆಮಾಡಿಕೊಡಲಿವೆ ತೆರೆದ ರಾಜಕಾಲುವೆಗಳು

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಮುಂಗಾರು ಮಳೆಗೆ ಸಜ್ಜಾಗದ ಆಡಳಿತ ವರ್ಗ
  • ವಿವಿಧೆಡೆ ಸಾರ್ವಜನಿಕರ ಅಸಹಕಾರ
  • ರಾಜಕಾಲುವೆಗಳು
ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ
ಎರಡನೇ ಊಟಿ ಎಂದೇ ಕರೆಸಿಕೊಳ್ಳುವ ಜೋಗಿಮಟ್ಟಿ ಗಿರಿಧಾಮ, ಬೃಹತ್ ಬಂಡೆ, ಏಳುಸುತ್ತಿನ ಕಲ್ಲಿನ ಕೋಟೆಯಿಂದಾಗಿ ಚಿತ್ರದುರ್ಗ ಒಂದೆಡೆ ಎತ್ತರದಲ್ಲಿದ್ದರೆ, ಮತ್ತೊಂದೆಡೆ ತಗ್ಗು ಪ್ರದೇಶದೊಂದಿಗೂ ಬೆಸೆದುಕೊಂಡಿದೆ. ಮಳೆ ನೀರು ಸಂರಕ್ಷಣೆಗೂ ನಗರ ಮಾದರಿಯಾಗಿದೆ.
ಅದಕ್ಕಾಗಿ ನಿರ್ಮಿತವಾದ ರಾಜಕಾಲುವೆಗಳು ಒತ್ತುವರಿಯಾಗಿದ್ದು, ವಿವಿಧೆಡೆ ತೆರೆದಿರುವ ಕಾರಣ ಅನಾಹುತಕ್ಕೆ ಎಡೆಮಾಡಿ ಕೊಡುವಂತಿವೆ...
ದುರ್ಗವನ್ನಾಳಿದ ಪಾಳೆಗಾರರು ಎತ್ತರದ ಪ್ರದೇಶಗಳಲ್ಲಿ ಬೀಳುವ ಮಳೆ ನೀರನ್ನು ಹೊಂಡ, ಪುಷ್ಕರಣಿಗಳ ನಂತರ ಕೆರೆಗಳ ಒಡ ಲು ಸೇರುವಂತೆ ವ್ಯವಸ್ಥಿತವಾದ ರಾಜಕಾಲುವೆಗಳನ್ನು ನಿರ್ಮಿಸಿದ್ದಾರೆ. ಆದರೆ, ಅವುಗಳನ್ನು ಸುಸ್ಥಿತಿಯಲ್ಲಿಡುವಲ್ಲಿ ನಗರಸಭೆ ವಿ-Àಲವಾಗಿದೆ. ಹೀಗಾಗಿ ಮಳೆ ನೀರಿನೊಂದಿಗೆ ಕೊಳಚೆ ಮಿಶ್ರಣಗೊಂಡು ದೊಡ್ಡ ಚರಂಡಿಗಳಾಗಿ ಮಾರ್ಪಟ್ಟಿವೆ.
ರಾಜಕಾಲುವೆಗಳು ಮಾತ್ರವಲ್ಲ. ನಗರಸಭೆ ನಿರ್ಮಿಸಿದ ಚರಂಡಿಗಳು ಕೂಡ ಒತ್ತುವರಿಯಾಗಿ ಅವುಗಳ ಜಾಗದಲ್ಲಿ ಕಟ್ಟಡಗಳು ತಲೆ ಎತ್ತಿವೆ. ತೆರವು ಕಾರ್ಯ ದೊಡ್ಡ ಸವಾಲಾಗಿದೆ. ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳು ಇಂತಹ ಸಮಸ್ಯೆಯಿಂದ ಹೊರ ತಾಗಿಲ್ಲ.
ಚಿತ್ರದುರ್ಗ ಜಿಲ್ಲೆ ಕಡಿಮೆ ಮಳೆ ಬೀಳುವ ಪ್ರದೇಶವೆಂಬ ಮಾತನ್ನು ಕಳೆದ ನಾಲ್ಕೆÊದು ವರ್ಷದಿಂದಲೂ ವರುಣ ಸುಳ್ಳಾಗಿಸಿದ್ದಾನೆ. ದುರ್ಗದಲ್ಲಿ ಮಳೆ ಸೃಷ್ಟಿಸುವ ಅವಾಂತರಗಳ ಕುರಿತು ನಗರಸಭೆ ಅಽಕಾರಿಗಳಿಗೆ ಸ್ಪಷ್ಟತೆಯಿದ್ದರೂ ಮುಂಜಾಗ್ರತಾ ಕ್ರಮದ ಲೋಪದಿಂದ ನಗರದ ವಿವಿಧ ಪ್ರದೇಶಗಳು ಸಂಕಷ್ಟಕ್ಕೆ ಸಿಲುಕುತ್ತವೆ.
ಈ ವರ್ಷವೂ ಮಳೆಯ ತೀವ್ರತೆ ಹೆಚ್ಚಿದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನಗರಸಭೆ ನಿರ್ಲಕ್ಷಿಸಿದಂತೆ ಕಾಣುತ್ತಿದೆ. ಮೇ ೧೮ರ ರಾತ್ರಿ ನಗರದಲ್ಲಿ ಸುರಿದ ಮಳೆಯಿಂದ ಸಾರ್ವಜನಿಕರು ತತ್ತರಿಸಿದ ನಿದರ್ಶನವಿದೆ.
ಕೊಳಚೆ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸಧಾನ್ಯ, ದಿನಬಳಕೆ ವಸ್ತುಗಳು ಹಾಗೂ ವಿದ್ಯಾರ್ಥಿಗಳ ಪಠ್ಯಪುಸ್ತಕಗಳು ನೀರು ಪಾಲಾಗಿವೆ. ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ರಾತ್ರಿಯಿಡೀ ಹರಸಾಹಸ ಪಟ್ಟಿದ್ದಾರೆ. ನಗರದಲ್ಲಿ ಈ ಹಿಂದೆಯೂ ಇಂತಹ ಅವಾಂತರಗಳಾಗಿದ್ದವು.
ಮುAಗಾರು ಮಳೆ ಆರಂಭವಾಗಿದ್ದು, ಅದು ಹರ್ಷದಾಯಕವಾಗಿರಬೇಕು. ಭೀತಿ ಹುಟ್ಟಿಸುವಂತೆ ಆಗಬಾರದು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ, ನಗರಸಭೆ ಮಳೆಗಾಲ ಎದುರಿಸಲು ಸಜ್ಜಾಗುವಂತೆ ನಾಗರಿಕರು ಮನವಿ ಮಾಡಿದ್ದಾರೆ.
ಪ್ರಾಣಾಪಾಯದ ಭೀತಿ
ದಾವಣಗೆರೆ ರಸ್ತೆ ಎಂಪಿಎAಸಿಗೆ ತಿರುವು ಪಡೆಯುವ ಮಾರ್ಗ, ಕನಕ ವೃತ್ತ ಸಮೀಪ, ಜೋಗಿಮಟ್ಟಿ ರಸ್ತೆ ಸೇತುವೆ ಬಳಿ ತೆರೆದ ದೊಡ್ಡ ರಾಜಕಾಲುವೆಗಳಿವೆ. ಇತ್ತೀಚೆಗೆ ಸುರಿದ ಮಳೆಗೆ ಬಿ.ಡಿ. ರಸ್ತೆಯಲ್ಲೇ ಕೆಲವರು ದ್ವಿಚಕ್ರ ವಾಹನದಿಂದ ನೆಲಕ್ಕುರುಳಿದ್ದಾರೆ. ನಿಯಂತ್ರಣಕ್ಕೆ ಸಿಗದೆ ಕೆಲವರು ರಾಜಕಾಲುವೆಗೆ ವಾಹನ ಸಮೇತ ಬಿದ್ದಿರುವ ನಿದರ್ಶನ ಬೇರೆ ಜಿಲ್ಲೆಗಳಲ್ಲಿವೆ.
ಮಳೆಯ ಪ್ರಮಾಣ ತೀವ್ರವಾಗಿದ್ದರೆ ನೀರಿನೊಂದಿಗೆ ಕೊಚ್ಚಿ ಹೋದರೂ ಅಚ್ಚರಿಪಡುವಂತಿಲ್ಲ. ಹೀಗಾಗಿ ಪ್ರಾಣಾಪಾಯದ ಭೀತಿಯೂ ಇದೆ.
ಕಾಲುವೆಗಳಿಗೆ ಅಡ್ಡಲಾಗಿ ತಡೆಗೋಡೆ, ಸಾಲಾಗಿ ಕಬ್ಬಿಣದ ರಾಡ್‌ಗಳನ್ನು ನೆಡುವುದು, ಇನ್ನಿತರೆ ಯಾವುದೇ ಸುರಕ್ಷತಾ ಕ್ರಮಕ್ಕೂ ಈವರೆಗೆ ಜಿ¯್ಲÁಡಳಿತವಾಗಲೀ, ನಗರಸಭೆಯಾಗಲಿ ಗಮನ ಹರಿಸಿಲ್ಲ. ಅಪಾಯದ ಬಳಿಕ ಎಚ್ಚೆತ್ತುಕೊಳ್ಳುವ ಮುನ್ನ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ.
ಮಕ್ಕಳು ಜೋಪಾನ
ತೆರೆದ ಚರಂಡಿಗಳೂ ನಗರ ವ್ಯಾಪ್ತಿಯಲ್ಲಿ ಸಾಕಷ್ಟಿವೆ. ಆಟವಾಡಲಿಕ್ಕೆ ಚಿಣ್ಣರು ಮನೆ ಮುಂಭಾಗ ಅಥವಾ ಹೊರಗಡೆ ಹೋಗುವುದು ಸಾಮಾನ್ಯ. ಕ್ರಿಕೆಟ್ ಆಡುವಾಗ ಚೆಂಡು ಚರಂಡಿಯೊಳಗೆ ಬಿದ್ದರೆ, ೪ರಿಂದ ೬ವರ್ಷದೊಳಗಿನ ಮಕ್ಕಳು ಇಳಿಯುವುದು ಅಪಾಯ. ಬೀದಿ ನಾಯಿಗಳ ದಾಳಿಯಿಂದಲೂ ಹೊರ ಜಿಲ್ಲೆಗಳಲ್ಲಿ ಮಕ್ಕಳು ಚರಂಡಿಗೆ ಬಿದ್ದ ನಿದರ್ಶನಗಳಿವೆ. ಆದ್ದರಿಂದ ಪಾಲಕರೇ ಎಚ್ಚರವಹಿಸಬೇಕಾದ ಅಗತ್ಯವಿದೆ.
ಜಲಾವೃತವಾಗುವ ರಸ್ತೆಗಳು
ನಗರದ ಒನಕೆ ಓಬವ್ವ ಕ್ರೀಡಾಂಗಣ ರಸ್ತೆಯ ಬುದ್ಧನಗರ, ಬಾಬು ಜಗಜೀವನ್ ರಾಂ ನಗರ, ಸಾದಿಕ್ ನಗರ, ಜೆಸಿಆರ್ ಬಡಾವಣೆ, ಕೆಳಗೋಟೆ, ತುರುವನೂರು, ಬಿ.ಡಿ.ರೋಡ್ ಹಾಗೂ ಮೆದೇಹಳ್ಳಿ ರಸ್ತೆಗಳು ಪ್ರತಿ ಮಳೆಗೂ ಜಲಾವೃತವಾಗುತ್ತವೆ. ಹೀಗಾಗಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಸಹಕರಿಸದ ಸಾರ್ವಜನಿಕರು
ಮಳೆಗಾಲ ಆರಂಭಕ್ಕೂ ಮುನ್ನ ರಾಜಕಾಲುವೆ, ಚರಂಡಿಗಳ ಸ್ವಚ್ಛತೆಗೆ ನಗರಸಭೆ ಗಮನ ಹರಿಸುವುದಿಲ್ಲ ಎನ್ನುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುವುದು ಸಾಮಾನ್ಯ. ಆದರೆ, ಮನೆ ಬಾಗಿಲಿಗೆ ನಿತ್ಯ, ಎರಡು ದಿನಕ್ಕೊಮ್ಮೆ ನಗರಸಭೆ ವಾಹನಗಳು ಬಂದರೂ ರಾತ್ರಿ ವೇಳೆ ಚರಂಡಿಗಳಲ್ಲಿ, ರಸ್ತೆ ಪಕ್ಕದಲ್ಲಿ ತ್ಯಾಜ್ಯದ ಪ್ಲಾಸ್ಟಿಕ್ ಕವರ್‌ಗಳನ್ನು ಎಸೆಯುವುದು ತಪ್ಪಿಲ್ಲ. ಇದರೊಟ್ಟಿಗೆ ಮದ್ಯದ ಬಾಟಲಿಗಳು ಇರುತ್ತವೆ.
ಬಿರುಸಿನ ಮಳೆಯಾದಾಗ ಚರಂಡಿ ತುಂಬಿ ತ್ಯಾಜ್ಯ ಕೆಲವರ ಮನೆಗೂ ನುಗ್ಗಿರುವ, ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿರುವ, ದುರ್ವಾಸನೆ ಸಹಿಸಲಾಗದೆ ಸ್ಥಳೀಯರು ನಿದ್ದೆಗೆಟ್ಟಿರುವ ನಿದರ್ಶನಗಳಿವೆ. ಹೀಗಾಗಿ ಸ್ವಚ್ಛತೆ ವಿಚಾರದಲ್ಲಿ ಪ್ರತಿ ನಾಗರಿಕರೂ ನಗರಸಭೆ ಜತೆ ಕೈಜೋಡಿಸಬೇಕಾದ ಅಗತ್ಯವಿದೆ.
ಪೌರಕಾರ್ಮಿಕರು ಹೈರಾಣು
ಬಿರುಸಿನ ಮಳೆಯಾದಾಗಲೆಲ್ಲ ನಗರ ಸೇರಿ ವಿವಿಧೆಡೆ ಚರಂಡಿಗಳು ತುಂಬಿ ರಭಸವಾಗಿ ಹರಿಯುವುದು ಸಾಮಾನ್ಯ. ಇದರ ಪರಿಣಾಮ ಚರಂಡಿ, ರಸ್ತೆ ಮೇಲೆಲ್ಲ ತ್ಯಾಜ್ಯದ ರಾಶಿ ಚೆಲ್ಲಾಪಿಲ್ಲಿಯಾಗಿ ಬೀಳುತ್ತದೆ. ಅಂತಹ ಸಂದರ್ಭದಲ್ಲಿ ಮುಂಜಾನೆ ರಸ್ತೆ ಗಿಳಿಯುವ ಪೌರ ಕಾರ್ಮಿಕರು ಸ್ವಚ್ಛಗೊಳಿಸುವಲ್ಲಿ ಹೈರಾಣಾಗುತ್ತಾರೆ.
ಮರಗಳ ತೆರವು ಕಾರ್ಯಾಚರಣೆ
ಕಳೆದ ಎರಡು ವರ್ಷಗಳಲ್ಲಿ ವರುಣನ ಆರ್ಭಟಕ್ಕೆ ಸಾಲು ಸಾಲು ಮರಗಳು ನೆಲಕ್ಕುರುಳಿ ಕೆಲ ಬಡಾವಣೆ ನಿವಾಸಿಗಳು ಕತ್ತಲಲ್ಲಿ ರಾತ್ರಿ ಕಳೆದಿz್ದÁರೆ. ಬೆಸ್ಕಾಂ, ಅರಣ್ಯ ಇಲಾಖೆ ಸಿಬ್ಬಂದಿ ಮಳೆಯಲ್ಲೇ ಕೆಲ ಸಮಯ ಮರಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದ್ದಾರೆ.
ವಿದ್ಯುತ್ ಕಂಬಗಳು ರಸ್ತೆಯಲ್ಲೇ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡ ನಿದರ್ಶನಗಳಿವೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಬೆಸ್ಕಾಂ ಮುಂಗಾರು ಆಗಮನದ ಹಿನ್ನೆಲೆಯಲ್ಲಿ ಕಳೆದ ೧೫ ದಿನಗಳಿಂದ ಉರುಳಿ ಬೀಳಬಹುದಾದ ಮರಗಳ ತೆರವು ಕಾರ್ಯಾ ಚರಣೆಯಲ್ಲಿ ತೊಡಗಿದೆ ಎಂಬ ಮಾಹಿತಿ ಇದೆ.