ಚಿತ್ರದುರ್ಗದ ಸಂತೆಹೊAಡ ಸಮೀಪದ ಮಾರುಕಟ್ಟೆಯಲ್ಲಿ ಗ್ರಾಹಕರು ತರಕಾರಿ ಖರೀದಿಗೆ ಮುಂದಾದ ದೃಶ್ಯ.
- ಜನಸಾಮಾನ್ಯರ ಜೇಬಿಗೆ ಕತ್ತರಿ
- ಆವಕ ಕೊರತೆ, ನಿತ್ಯ ಏರುಪೇರು
- ಇಳುವರಿ ಕುಂಠಿತವಾದರೂ ದರದಲ್ಲಿ ವ್ಯತ್ಯಾಸ
ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ
ಅಮೆರಿಕ-ಇರಾನ್ ನಡುವಿನ ಯುದ್ಧದ ಕಾರಣದಿಂದ ತೈಲ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ೨-೩ ವಾರಗಳ ಹಿಂದಷ್ಟೇ ತಗ್ಗಿದ್ದ ತರ ಕಾರಿ ಬೆಲೆ ಮತ್ತೆ ಏರಿಕೆ ಕಂಡಿದ್ದು, ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ವಿವಿಧ ಕಾರಣಗಳಿಂದಾಗಿ ವರ್ಷಪೂರ್ತಿ ಹಣ್ಣು-ತರಕಾರಿ ಬೆಲೆ ಹೆಚ್ಚುತ್ತಲೇ ಇದೆ. ಇದರ ಜತೆಗೆ ಆಹಾರ ಪದಾರ್ಥಗಳು ಕೈಗೆಟುಕ ದಂತಾಗಿದ್ದು, ಬಡ ಹಾಗೂ ಮಧ್ಯಮ ವರ್ಗದವರ ಜೀವನ ನಿರ್ವಹಣೆ ಹೇಗೆಂಬ ಪ್ರಶ್ನೆ ಎದುರಾಗಿದೆ.
ಕಳೆದೊಂದು ತಿಂಗಳಿAದ ಬೀನ್ಸ್ ದರ ಕೆ.ಜಿ.ಗೆ ೮೦, ೧೨೦, ೧೫೦ರ ಅಸುಪಾಸಿನಲ್ಲಿದ್ದರೆ, ಬಟಾಣಿ ೨೦೦-೨೪೦ ರೂ.. ಕ್ಯಾಪ್ಸಿ ಕಂ, ಸೀಮೆ ಬದನೆ ತಲಾ ೮೦ ರೂ., ಹಸಿ ಮೆಣಸಿನಕಾಯಿ ೬೦ ರೂ., ಬದನೆಕಾಯಿ ೬೦-೮೦ ರೂ., ಮೂಲಂಗಿ, ಬೆಂಡೆಕಾಯಿ ತಲಾ ೫೦-೬೦ ರೂ. ಇದೆ.
ಅಲ್ಲದೆ, ಪ್ರತಿ ದಿನ ಅಡುಗೆಗೆ ಅಗತ್ಯವಾಗಿ ಬಳಸುವ ಟೊಮ್ಯಾಟೊ ಬೆಲೆ ಕೂಡ ದಿನೇ ದಿನೆ ಏರಿಕೆ ಯಾಗುತ್ತಿದ್ದು, ೫೦ ರಿಂದ ೬೦ ರೂ.ಗೆ ಏರಿದ್ದು, ೮೦ರ ಗಡಿ ದಾಟುವ ಸಾಧ್ಯತೆ ಇದೆ. ಸೊಪ್ಪುಗಳ ದರವೂ ದುಬಾರಿಯಾಗಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
-ೆಬ್ರವರಿಯಿಂದಲೇ ಆರಂಭವಾದ ಬಿಸಿಲ ತಾಪಮಾನ ಮಾರ್ಚ್, ಏಪ್ರಿಲïನಲ್ಲಿ ತುತ್ತ ತುದಿಗೆ ತಲುಪಿತ್ತು. ಅಽಕ ತಾಪಮಾನ ಒಂ ದೆಡೆಯಾದರೆ, ಮತ್ತೊಂದೆಡೆ ಮಳೆಯ ಅಭಾವದಿಂದ ನೀರಿನ ಸಮಸ್ಯೆ ಎದುರಾಗಿ ತರಕಾರಿ ಬೆಲೆ ಹೆಚ್ಚಾಗಿತ್ತು. ಕಡಿಮೆ ಆಗುತ್ತಿದೆ ಎನ್ನುವಷ್ಟರಲ್ಲಿ ಇಳುವರಿ ಕುಂಠಿತ, ಕೆಲ ಬೆಳೆಗಳಿಗೆ ಹಾನಿ ಉಂಟಾಗಿ ಮೇ ತಿಂಗಳ ಬಳಿಕವೂ ಬೀನ್ಸ್, ಹಸಿ ಮೆಣಸಿನಕಾಯಿ, ಹೀರೇಕಾಯಿ, ಚಪ್ಪರದವರೆ, ಸೊಪ್ಪಿನ ದರ ಪುನಃ ಹೆಚ್ಚಳವಾಯಿತು.
ಯುಗಾದಿ ಹಬ್ಬ, ಜಾತ್ರೆ, ಉತ್ಸವಗಳ ವೇಳೆ ೧೦೦ ರೂ.ವರೆಗೂ ಏರಿಕೆ ಕಂಡಿದ್ದ ಬಾಳೆ ಹಣ್ಣು ದರದಲ್ಲೀಗ ಸ್ಥಿರತೆ ಕಂಡುಬAದಿ ದೆ. ಏಲಕ್ಕಿ ಬಾಳೆ ೬೦-೮೦ ರೂ. ಇದೆ. ಜೊತೆಗೆ ಮದುವೆ, ಗೃಹ ಪ್ರವೇಶದಂತಹ ಕಾರ್ಯಕ್ರಮಗಳು ನಡೆಯುತ್ತಿರುವ ಕಾರಣ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ.
ನಾಟಿ ಕೊತ್ತಂಬರಿ ಸೊಪ್ಪು ಏರಿಕೆ
ಏಪ್ರಿಲ್-ಮೇ ತಿಂಗಳಲ್ಲಿ ದಿಢೀರ್ ಏರಿಕೆ ಕಂಡಿದ್ದ ಸೊಪ್ಪುಗಳ ಬೆಲೆ ಇಳಿಕೆಯಾಗುವ ಲಕ್ಷಣ ಕಂಡು ಬರುತ್ತಿಲ್ಲ. ಮೆಂತ್ಯ ಸೊಪ್ಪು ಒಂದು ಕಟ್ಟಿಗೆ ೧೫ ರೂ. ದರವಿದೆ. ಇನ್ನಿತರೆ ಸೊಪ್ಪುಗಳೂ ಅಽಕ ಬೆಲೆಗೆ ಮಾರಾಟವಾಗುತ್ತಿವೆ.
ಆವಕ ಹೆಚ್ಚಳ ನೇರಳೆ ಬೆಲೆ ಕುಸಿತ
ಕಳೆದ ೨೦ ದಿನಗಳ ಹಿಂದೆಯಷ್ಟೇ ೧ ಕೆ.ಜಿಗೆ ೨೦೦ ರೂ. ಇದ್ದ ನೇರಳೆ ಹಣ್ಣಿನ ದರವೀಗ ೧೦೦-೧೨೦ ರೂ. ಆಗಿದೆ. ಒಂದು ವಾರದಿಂದಲೂ ಜಿಲ್ಲಾದ್ಯಂತ ಆವಕ ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಸ್ಥರು.
ಸದ್ಯ ಈರುಳ್ಳಿ, ಆಲೂಗಡ್ಡೆ, ಹೀರೆಕಾಯಿ ಹೊರತು ಪಡಿಸಿ ಯಾವ ತರಕಾರಿಯೂ ೬೦ ರೂ.ಗಿಂತ ಕಡಿಮೆಯಿಲ್ಲ. ಕೆಲವು ೧೨೦- ೧೫೦ ರೂ. ವರೆಗೆ ಏರಿಕೆಯಾಗಿವೆ. ಸೀಸನ್ ಅಲ್ಲದ ಕಾರಣ ಬಟಾಣಿ ದರ ೨೦೦ರ ಗಡಿ ದಾಟಿದೆ. ಆಷಾಢದಲ್ಲಿ ಬೆಲೆಗಳು ಸ್ವಲ್ಪ ಇಳಿಕೆಯಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಬೆಲೆ ಏರಿಕೆ ಮುಂದುವರಿಯುತ್ತದೆ ಎನ್ನುತ್ತಾರೆ ಸಗಟು ವ್ಯಾಪಾರಸ್ಥರು.
ತಾಲೂಕುವಾರು ಹಣ್ಣು - ತರಕಾರಿ ವಿಸ್ತೀರ್ಣ ಹೆಕ್ಟೇರ್‌ಗಳಲ್ಲಿ
"
"
ತರಕಾರಿ, ಹಣ್ಣು, ಸೊಪ್ಪು ಯಾವುದರಲ್ಲೇ ಇಳುವರಿ ಕುಂಠಿತವಾಗಲಿ, ಆವಕ ಕಡಿಮೆಯಾಗಲಿ ಆ ವೇಳೆ ಬೆಲೆ ಏರಿಕೆ ಸಾಮಾನ್ಯ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಾಗ ದರ ಕುಸಿಯಲಿದೆ.
— ಸವಿತಾ, ಜಂಟಿ ತೋಟಗಾರಿಕೆ ನಿರ್ದೇಶಕಿ
"
ಅನೇಕ ವರ್ಷಗಳಿಂದ ತರಕಾರಿ ವ್ಯಾಪಾರದಿಂದಲೇ ಕುಟುಂಬ ನಡೆಸುತ್ತಿದ್ದೇವೆ. ಆದರೆ, ಬೆಲೆ ಏರಿಕೆಯಿಂದ ಜನರು ಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಕೆಲವೊಮ್ಮೆ ಹಾಕಿದ ಬಂಡವಾಳ ಹಿಂದಿರುಗುವುದಿಲ್ಲ. ದರ ಹೆಚ್ಚಾದ ವೇಳೆ ಗ್ರಾಹಕರು ತರಕಾರಿ ಖರೀದಿಸುವ ಪ್ರಮಾಣ ಕಡಿಮೆ.
— ಅರುಣ್, ತರಕಾರಿ ವ್ಯಾಪಾರಿ