ಚಿತ್ರದುರ್ಗ: ನಗರದ ಸರಸ್ವತಿ ವಿದ್ಯಾಸಂಸ್ಥೆಯ, ಸರಸ್ವತಿ ಕಾನೂನು ಕಾಲೇಜು ವಜ್ರಮಹೋತ್ಸವ ಹಾಗೂ ೨೦೨೬-೨೭ನೇ ಶೈಕ್ಷಣಿಕ ವರ್ಷದಿಂದ ಸಂವಿಧಾನ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಕಾನೂನು ಪದವಿ ಕೋರ್ಸ್(ಎಲ್ಎಲ್ಎಂ)ಉದ್ಘಾಟನಾ ಸಮಾರಂಭ ಅ.೨೪ರ ಬೆಳಗ್ಗೆ ೧೧ಕ್ಕೆ ನಗರದ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ವಿದ್ಯಾಸಂಸ್ಥೆ ಅಧ್ಯಕ್ಷ ಫಾತ್ಯರಾಜನ್ ಹೇಳಿದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಲೆ ಉದ್ಘಾಟಿಸುವರು. ಹೈಕೋರ್ಟ್ ನ್ಯಾಯಮೂರ್ತಿಗಳಾದ ಸುನೀಲ್ದತ್ ಯಾದವ್, ಜಿ.ಬಸವರಾಜ ಹಾಗೂ ಟಿ.ವೆಂಕಟೇಶ್ ನಾಯಕ್ ಅತಿಥಿಗಳಾಗಿ ಭಾಗವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಽÃಶ ಜಿ.ಡಿ. ಮಹಾವರ್ಕರ್, ಪ. ಪಂಗಡ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ, ಸಂಸದ ಗೋವಿಂದ ಎಂ. ಕಾರಜೋಳ, ಹುಬ್ಬಳ್ಳಿ ಕೆಎಸ್ಎಲ್ಯು ಉಪ ಕುಲಪತಿ ಪ್ರೊ.ರತ್ನ ಆರ್. ಭರಮಗೌಡರ್ ಆಗಮಿಸಲಿದ್ದಾರೆ. ಕಾಲೇಜಿನ ಹಿಂದಿನ ವಿದ್ಯಾರ್ಥಿಗಳು, ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ನ್ಯಾಯಾಽÃಶರು, ಸರ್ಕಾರಿ ಅಭಿಯೋಜಕರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.
೬೦ ವರ್ಷಗಳ ಸಂಭ್ರಮ:
ಚಿತ್ರದುರ್ಗ ಸುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಾನೂನು ಶಿಕ್ಷಣ ಒದಗಿಸುವ ಮಹತ್ವದ ಉದ್ದೇಶದಿಂದ ೧೯೬೪ರಲ್ಲಿ ನಗರದಲ್ಲಿ ಸ್ಥಾಪಿಸಿದ ವಿದ್ಯಾಸಂಸ್ಥೆ, ಈ ಕಾಲೇಜಿಗೆ ೧೯೬೫ರಲ್ಲಿ ಅಂದಿನ ಉಪ ಪ್ರಧಾನಿ ಮುರಾರ್ಜಿ ದೇಸಾಯಿ ಚಾಲನೆ ನೀಡಿದ್ದರು. ೩ ವರ್ಷದ ಕಾನೂನು ಪದವಿ, ೧೯೮೪ರಿಂದ ೫ ವರ್ಷದ ಇಂಟಿಗ್ರೇಟೆಡ್ ಬಿಎ, ಎಲ್ಎಲ್ಬಿ ಪದವಿ ಜತೆಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಲ್ಎಲ್ಎಂ ಪ್ರಾರಂಭಿಸಲಾಗಿದೆ. ಆರಂಭದಲ್ಲಿ ಮೈಸೂರು ವಿವಿ, ನಂತರದಲ್ಲಿ ಕುವೆಂಪು ವಿವಿ ಸಂಯೋಜನೆಗೆ ಒಳಪಟ್ಟಿದ್ದ ಈ ಕಾಲೇಜು ೨೦೦೯ರಿಂದ ಹುಬ್ಬಳ್ಳಿಯ ರಾಜ್ಯಕಾನೂನು ವಿವಿ ಶಾಶ್ವತ ಸಂಯೋಜನೆ ಪಡೆದಿದೆ ಎಂದರು.
ಸAಸ್ಥೆ ಸ್ಥಾಪಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುವಲ್ಲಿ ಸಂಸ್ಥಾಪಕ ಕರ್ಯದರ್ಶಿ ಟಿ.ಎ. ರೆಡ್ಡಿ, ಉಪಾಧ್ಯಕ್ಷ ವೆಂಕಟರAಗನ್ ವೆಂಕೋಬರಾವ್, ಹನುಮಯ್ಯ ಮತ್ತು ಮೊಹಮದ್ ಸೈಫುದ್ದೀನ್ ಸಹಿತ ಸ್ಥಳೀಯ ಪ್ರಮು ಖರ ಪಾತ್ರ ಹಿರಿದಾಗಿದೆ. ಕಾಲೇಜಿಗೆ ೧೯೮೫-೮೬ರಲ್ಲಿ ಸ್ವಂತ ಕಟ್ಟಡ ಹಾಗೂ ೧೯೯೮ರಲ್ಲಿ ಕಾಲೇಜಿನ ಬೆ ಳ್ಳಿ ಹಬ್ಬದ ಅಂಗವಾಗಿ ಸಭಾಂಗಣ ಸ್ಥಾಪಿಸಲಾಗಿದೆ. ೨೦೧೫ರಲ್ಲಿ ಕಾಲೇಜಿನ ಸುವರ್ಣ ಮಹೋತ್ಸವ ಸ ಮಾರಂಭವನ್ನು ಅಂದಿನ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಚ್.ಎಲ್. ದತ್ತು ಅವರು ಉದ್ಘಾಟಿ ಸಿದ್ದರು. ೨೦೧೫ ಆಗಸ್ಟ್ನಿಂದ ಈ ಕಾಲೇಜಿಗೆ ರಾಜ್ಯಸರ್ಕಾರದಿಂದ ವೇತನಾನುದಾನದ ಆದೇಶ ವಾಗಿದೆ ಎಂದರು.
ಎಚ್. ಹನುಮಂತಪ್ಪ ಅವರ ಸೇವೆ ಸ್ಮರಣೀಯ
೬ ದಶಕಗಳ ಸಾರ್ಥಕ ಸೇವೆಯಲ್ಲಿ ಈ ಮಹಾವಿದ್ಯಾಲಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಾನೂನು ಪದವಿ ಪಡೆದಿದ್ದಾರೆ. ಹಳೆಯ ವಿದ್ಯಾರ್ಥಿಗಳಲ್ಲಿ ಜನಪ್ರತಿನಿಽಗಳು, ವಕೀಲರು, ನ್ಯಾಯಾಽÃಶರು, ನ್ಯಾಯ ಮೂರ್ತಿಗಳಾಗಿ, ಸರ್ಕಾರಿ ಅಽಕಾರಿಗಳಾಗಿದ್ದಾರೆ. ಕಾಲೇಜನ್ನು ಅಭಿವೃದ್ಧಿಪಡಿಸುವಲ್ಲಿ ರಾಜ್ಯಸಭಾ ಸದಸ್ಯ ರಾಗಿದ್ದ ದಿ.ಎಚ್. ಹನುಮಂತಪ್ಪ ಅವರ ಸೇವೆ ಸ್ಮರಣೀಯ.
ನುರಿತ ವಕೀಲರು ಕೂಡ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಉತ್ತಮ -ÀಲಿತಾಂಶದೊAದಿಗೆ, ಈವರೆಗೆ ೧೦೨ ರ್ಯಾಂಕ್ ಕಾಲೇಜಿಗೆ ಬಂದಿವೆ. ನಾನಾ ಶೈಕ್ಷಣಿಕ ಪೂರಕ ಚಟುವಟಿಗಳಿಗೂ ನಮ್ಮ ಈ ಕಾಲೇಜು ಗುರುತಿಸಿಕೊಂಡಿದೆ ಎಂದು ಫಾತ್ಯರಾಜನ್ ವಿವ ರಿಸಿದರು. ವಿದ್ಯಾಸಂಸ್ಥೆ ಕರ್ಯದರ್ಶಿ ಡಿ.ಕೆ. ಶೀಲಾ, ಪ್ರಾಚಾರ್ಯೆ ಪ್ರೊ.ಎಂ.ಎಸ್. ಸುಧಾದೇವಿ, ಡಾ.ಎನ್.ಡಿ. ಗೌಡ ಇದ್ದರು.