NSS ಚಳ್ಳಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕ್ರೀಡಾ, ಸಾಂಸ್ಕೃತಿಕ ಮತ್ತು ಎನ್‌ಎಸ್‌ಎಸ್ ಘಟಕಗಳ ಸಮಾರೋಪ ಸಮಾರಂಭವನ್ನು ಶಾಸಕ ಟಿ. ರಘುಮೂರ್ತಿ ಉದ್ಘಾಟಿಸಿದರು. 
ಚಿತ್ರದುರ್ಗ

NSS:ವಿದ್ಯಾರ್ಥಿಗಳಿಗೆ ಇರಲಿ ಸಾಧಕರಾಗುವ ಸಂಕಲ್ಪ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಟಿ. ರಘುಮೂರ್ತಿ ಸಲಹೆ
  • ಎನ್‌ಎಸ್‌ಎಸ್ ಘಟಕಗಳ ಸಮಾರೋಪ
  • ಶಿಕ್ಷಣದಿಂದ ಬದುಕು ರೂಪಿಸಿಕೊಳ್ಳಬೇಕು
ಚಳ್ಳಕೆರೆ: ಸಮಸ್ಯೆಗಳ ನಡುವೆ ಸಾಧಕರಾಗುವ ಸಂಕಲ್ಪ ವಿದ್ಯಾರ್ಥಿಗಳಿಗೆ ಇರಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.NSS
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕ್ರೀಡೆ, ಸಾಂಸ್ಕೃತಿಕ ಮತ್ತು ಎನ್‌ಎಸ್‌ಎಸ್ ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಳೆದ ವರ್ಷದ ಶೇ.71ರಷ್ಟು ಫಲಿತಾಂಶ ತೃಪ್ತಿ ನೀಡಿಲ್ಲ. ಶೇ.100 ಫಲಿತಾಂಶಕ್ಕೆ ಪ್ರಯತ್ನ ಮಾಡಬೇಕು. ಇಲ್ಲಿ ಬಡ ಕುಟುಂಬದ ಮಕ್ಕಳ ದಾಖಲಾತಿ ಇದ್ದು, ಶಿಕ್ಷಣದಿಂದ ಬದುಕು ರೂಪಿಸಿಕೊಳ್ಳಬೇಕು. ಪ್ರಾದೇಶಿಕ ಅಸಮಾನತೆ ಶಿಕ್ಷಣದಿಂದ ಸರಿಯಾಗಬೇಕಿದೆ. ಈ ದೂರದೃಷ್ಟಿಯಿಂದ ಕ್ಷೇತ್ರದಲ್ಲಿ ಇಂಜಿನಿಯರಿಂಗ್ ಕಾಲೇಜ್, ಜಿಟಿಟಿಸಿ ವೃತ್ತಿ ತರಬೇತಿ ಸಂಸ್ಥೆ ಸ್ಥಾಪನೆ ಸೇರಿ ಶಾಲಾ,ಕಾಲೇಜುಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಸ್ಥಳೀಯ ಜನರ ಬದುಕಿನ ಸುಧಾರಣೆಗೂ ವೇದಾವತಿ ನದಿಗೆ ಚೆಕ್ ಡ್ಯಾಮ್ಗಳ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯ ಹೊಸದುರ್ಗ, ಹಿರಿಯೂರಿನಂತೆ ಭೌಗೋಳಿಕವಾಗಿ ಅರೆ ಮಲೆನಾಡು ಮಾಡುವ ದೃಷ್ಟಿಯಿಂದ ವೇದಾವತಿಯ ಸೌಲಭ್ಯ ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಉತ್ತಮ ಬದುಕಿಗೆ ಶಿಕ್ಷಣ ಆಧಾರ ಆಗಬೇಕು. ಪರಿಶ್ರಮದಿಂದ ಕಲಿಯುವ ಗುರಿ ಇರಬೇಕು. ಪ್ರತಿದಿನ ಹಾಜರಾತಿ ಇರದ, ನೋಟ್ಸ್ ಬರೆಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಡಿ. ಸ್ಪರ್ಧಾತ್ಮಕ ಸಮಾಜದಲ್ಲಿ ಸಾಧಕರಾಗುವ ಅವಕಾಶಗಳಿವೆ. ಶಿಕ್ಷಣದ ಜತೆಗೆ ಹಿರಿಯರಿಗೆ ಗೌರವ ಕೊಡುವ ರೀತಿಯ ಮೌಲ್ಯತೆ ಬೆಳೆಸಿಕೊಳ್ಳಬೇಕು.ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ. ತಿಮ್ಮಯ್ಯ ವಿಶೇಷ ಉಪನ್ಯಾಸ ನೀಡಿದರು. ಪ್ರಾಚಾರ್ಯ ಕೆ.ಎಚ್. ರಾಜು ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಸಿ.ಟಿ. ವೀರೇಶ್, ನಾಗರಾಜ್ ಬೆಳಗಟ್ಟ, ಎಚ್.ಆರ್. ಕುಮಾರಸ್ವಾಮಿ, ಎನ್. ಈರಣ್ಣ, ಶ್ರೀನಿವಾಸ, ಜಬೀವುಲ್ಲಾ ಇತರರಿದ್ದರು.
ನನ್ನಿವಾಳ ಗ್ರಾಮದ ರಂಗಭೂಮಿ ಕಲಾವಿದ ಹನುಮಂತಪ್ಪ ಪೂಜಾರ್ ಮತ್ತು ಕಳೆದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.