ಚಿತ್ರದುರ್ಗದಲ್ಲಿ ಎಸ್‌ಐಆರ್ ಪ್ರಕ್ರಿಯೆ ಹಕ್ಕು ಮತ್ತು ಆಕ್ಷೇಪಣೆಗಳ ಕುರಿತಂತೆ ಜಿಲ್ಲಾಽಕಾರಿ ಎಸ್. ರಮ್ಯಾ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಽಗಳ ಸಭೆ ನಡೆಯಿತು. ಬಿ.ಟಿ. ಕುಮಾರಸ್ವಾಮಿ, ಬೀಬೀ -Áತಿಮಾ ಇತರರು ಇದ್ದರು.
- ಜಿಲ್ಲಾಽಕಾರಿ ರಮ್ಯಾ ಮಾಹಿತಿ
- ರಾಜಕೀಯ ಪಕ್ಷಗಳ ಪ್ರತಿನಿಽಗಳ ಸಭೆ
- ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ
ಚಿತ್ರದುರ್ಗ: ಮತದಾರರ ನೋಂದಣಿ, ಪರಿಶೀಲನಾ ನಮೂನೆಗಳಲ್ಲಿರುವ ಹೆಸರು, ತಂದೆ ಹೆಸರು ಹಾಗೂ ಆಧಾರ್ ಕಾರ್ಡ್ ಸೇರಿ ಇತರೆ ದಾಖಲೆಗಳ ವಿವರಗಳಲ್ಲಿ ವ್ಯತ್ಯಾಸಗಳಿರುವ ಚಿತ್ರದುರ್ಗ ನಗರ ವ್ಯಾಪ್ತಿಯ ೩೦ ಸಾವಿರಕ್ಕೂ ಹೆಚ್ಚು ಪ್ರಕರಣಗಳ ತಿದ್ದುಪಡಿಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಚುನಾವಣಾಽಕಾರಿ, ಡಿಸಿ ಎಸ್. ರಮ್ಯಾ ತಿಳಿಸಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ರಾಜಕೀಯ ಪಕ್ಷಗಳ ಸಭೆಯಲ್ಲಿ ಮಾತನಾಡಿದರು.
ನಿಯಮಾವಳಿ ಪ್ರಕಾರ ಕನಿಷ್ಠ ಶೇ.೬೦ರಷ್ಟು ಹೆಸರು ಹೊಂದಾಣಿಕೆಯಾಗದಿದ್ದಲ್ಲಿ ತಾಂತ್ರಿಕವಾಗಿ ತಡೆ ಹಿಡಿಯಲಾಗುತ್ತದೆ. ಇಂತಹÀ ವ್ಯತ್ಯಾಸಗಳಿರುವ ಪ್ರಕರಣಗಳನ್ನು ಗುರುತಿಸಿ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಪಟ್ಟಿ ಕಳುಹಿ ಸಲಾಗಿದೆ. ಚಿತ್ರದುರ್ಗ ನಗರ ವ್ಯಾಪ್ತಿಯಲ್ಲೇ ಇಂಥ ೩೦ ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ತಿಳಿಸಿದರು.
ಮ್ಯಾಪಿಂಗ್ ಆಗದೇ ಇರುವ, ಮತದಾರರ ವಿವರ ತಪ್ಪಾಗಿರುವ ಮತಪಟ್ಟಿ ತಿದ್ದುಪಡಿಗೆ ೬೮,೭೫೨ ನೋಟಿಸ್‌ಗಳನ್ನು ಸೃಜಿಸಿ, ೫೧,೨೧೯ನ್ನು ಜಾರಿ ಮಾಡಲಾಗಿದೆ. ಸಹಾಯಕ ಮತದಾರ ನೋಂದಣಾಽಕಾರಿಗಳು ಸೆ.೬ರಿಂದ ಆರಂಭಿಸಿರುವ ವಿಚಾರಣೆಯನ್ನು ಅಕ್ಟೋಬರ್ ೧೨ ರವರೆಗೆ ನಡೆಸಲಿದ್ದಾರೆ.
ಈ ಹಂತದಲ್ಲಿ ಜಿಲ್ಲಾದ್ಯಂತ ೧೦೨ ಸಹಾಯಕ ಮತದಾರ ನೋಂದಣಾಽಕಾರಿಗಳು ಮತ್ತು ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಽಕಾರಿಗಳನ್ನು ನೇಮಿಸಲಾಗಿದೆ ಎಂದರು.
ಅರ್ಹ ಮತದಾರರು ಹಕ್ಕಿನಿಂದ ವಂಚಿತರಾಗಬಾರದು. ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು ತಮ್ಮ ವ್ಯಾಪ್ತಿಯಲ್ಲಿ ವ್ಯತ್ಯಾಸಗಳಿರುವ ಮತದಾರರನ್ನು ಸಂಪರ್ಕಿಸಿ, ದಾಖಲೆಗಳೊಂದಿಗೆ ತಾಲೂಕು ಕಚೇರಿ ಅಥವಾ ನಿಗದಿತ ಕೇಂದ್ರಗಳಲ್ಲಿ ನಡೆಯುವ ವಿಚಾರಣೆಗೆ ಹಾಜರಾಗುವಂತೆ ಜಾಗೃತಿ ಮೂಡಿಸಬೇಕು ಎಂದರು.
ಚುನಾವಣಾ ತಹಸೀಲ್ದಾರ್ ಬೀಬೀ -Áತಿಮಾ, ಗ್ರೇಡ್೨ ತಹಸೀಲ್ದಾರ್ ಮಲ್ಲಿಕಾರ್ಜುನ ನಾಯಕ, ಜೆಡಿಎಸ್ ಜಿಲ್ಲಾ ಮಹಾ ಪ್ರ ಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಎಎಪಿ ಜಿಲ್ಲಾ ಕಾರ್ಯದರ್ಶಿ ಎಂ. ರಾಮಪ್ಪ, ಸಿಪಿಐ(ಎಂ)ಡಿಒಸಿ ಸಿ.ಕೆ. ಗೌಸ್‌ಪೀರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಚ್. ಮೋಹನ್‌ಕುಮಾರ್, ಕಾರ್ಯದರ್ಶಿ ಪ್ರಕಾಶ್, ಕಾರ್ಯಕಾರಿಣಿ ಸದಸ್ಯ ಯಶವಂತಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎನ್. ಮೈಲಾರಪ್ಪ, ಕೆ.ಪಿ. ಸಂಪತ್‌ಕುಮಾರ್, ಕಾರ್ಯದರ್ಶಿ ಸಿ.ಜೆ. ನಾಸಿರುದ್ದೀನ್, ಬಿಎಸ್‌ಪಿ ಜಿಲ್ಲಾಧ್ಯಕ್ಷ ಪ್ರಕಾಶ್ ಮತ್ತಿತರರು ಇದ್ದರು.
ಜಾಗೃತಿ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಒಬ್ಬ ಅರ್ಹ ಮತದಾರನೂ ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ವಿಚಾರಣೆಗೆ ಹಾಜರಾಗಲು ಪೂರ್ವಭಾವಿಯಾಗಿ ನೋಟಿಸ್ ನೀಡಲಾಗುತ್ತಿದ್ದು, ಮತದಾರ ಅಥವಾ ಅವರ ಕುಟುಂಬಸ್ಥರು ಸೂಕ್ತ ದಾಖಲೆಗಳೊಂದಿಗೆ ಆಗಮಿಸಬೇಕು. ಒಂದು ವೇಳೆ ನಿಗದಿತ ದಿನದಂದು ಬರಲಾಗದಿದ್ದರೆ, ಮತ್ತೊಂದು ಅವಕಾಶ ಕಲ್ಪಿಸಲಾ ಗುವುದು. ಜಾತಿ ಆದಾಯ ಪ್ರಮಾಣಪತ್ರ, ಆಧಾರ್ ಹಾಗೂ ಪಾನ್‌ಕಾರ್ಡ್ಗಳನ್ನು ನಿವಾಸಿ ದಾಖಲೆಯಾಗಿ ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಾಲೇಜುಗಳಲ್ಲಿ ಜಾಗೃತಿ ಶಿಬಿರ
ಜಿಲ್ಲೆಯಲ್ಲಿ ನಮೂನೆ -೬ರಡಿ ೧೮೦೦೦ ಯುವ ಮತದಾರರ ನೋಂದಣಿ ಗುರಿ ಇದೆ. ಇದುವರೆಗೆ ೯,೮೮೭ ಅರ್ಜಿಗಳು ಸ್ವೀಕೃತವಾಗಿವೆ. ಇನ್ನುಳಿದ ೫೦೦೦ಕ್ಕೂ ಹೆಚ್ಚು ಯುವ ಮತದಾರರ ಸೇರ್ಪಡೆಗೆ ಕಾಲೇಜುಗಳಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.