ಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೆÊಮಾಸಿಕ ಸಮನ್ವಯ ಸಮಿತಿ ಪ್ರಗತಿ ಪರಿಶೀಲನಾ ಸಭೆ 
ಚಿತ್ರದುರ್ಗ

ತಂಬಾಕು ಸೇವನೆ ಕಡಿವಾಣಕ್ಕೆ ಕಚೇರಿಗಳಲ್ಲಿ ನೋಡಲ್ ಅಽಕಾರಿ ನೇಮಕ

ಜಿಲ್ಲಾಽಕಾರಿ ಎಸ್.ರಮ್ಯಾ ಹೇಳಿಕೆ

ಚಿತ್ರದುರ್ಗ: ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕೆಲಸದ ವೇಳೆ ಅಽಕಾರಿ, ನೌಕರರು ತಂಬಾಕು ಸೇವನೆ ಮಾಡದಂತೆ ನಿಗಾಕ್ಕೆ ನೋಡಲ್ ಅಽಕಾರಿಗಳನ್ನು ನೇಮಿಸುವಂತೆ ಜಿಲ್ಲಾಽಕಾರಿ ಎಸ್. ರಮ್ಯಾ ಸೂಚಿಸಿದರು.

ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಡಿಸಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೆÊಮಾಸಿಕ ಸಮನ್ವಯ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾದ್ಯಂತ ಎಲ್ಲ ದೇವಾಲಯಗಳು, ಪ್ರವಾಸಿ ತಾಣಗಳನ್ನು ತಂಬಾಕು ಮುಕ್ತ ಪ್ರದೇಶವೆಂದು ಘೋಷಿಸಲಾಗಿದೆ. ಸರ್ಕಾರಿ ಅಽಕಾರಿಗಳು ಇತರರಿಗೆ ಮಾದರಿಯಾಗಿರಬೇಕು. ಆದರೆ, ಅಽಕಾರಿ ಹಾಗೂ ನೌಕರರು ಸಹ ಪಾನ್ ಹಾಗೂ ತಂಬಾಕು ಸೇವಿಸುವುದನ್ನು ಗಮನಿಸಿದ್ದೇನೆ. ಇದಕ್ಕೆ ಕಡಿವಾಣ ಹಾಕಬೇಕು. ಕಾಯ್ದೆ ಪ್ರಕಾರ ಪ್ರತಿ ಕಚೇರಿಗಳಲ್ಲಿ ನೋಡಲ್ ಅಽಕಾರಿಗಳನ್ನು ನೇ ಮಿಸಿ, ಈ ಬಗ್ಗೆ ದೃಢೀಕರಣ ನೀಡಬೇಕು ಎಂದರು.

ಎಎಸ್‌ಪಿ ಡಾ. ಶಿವಕುಮಾರ್, ಡಿಎಚ್‌ಒ ಡಾ.ಎಂ.ಸಿ. ಸುನೀಲ್‌ಕುಮಾರ್, ಆರ್‌ಸಿಎಚ್‌ಒ ಡಾ. ಅಭಿನವ್, ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕ ಮಹಾಂತೇಶ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ. ಪ್ರಭುದೇವ್, ಹಿರಿಯ ಅಽಕಾರಿಗಳು ಇದ್ದರು.

ಅಂಗಡಿಗಳ ಮೇಲೆ ದಾಳಿ

ತಾಲೂಕು ಮಟ್ಟದಲ್ಲಿ ಕೋಟ್ಪಾ ಕಾಯ್ದೆಯನ್ನು ಕಟ್ಟುನಿಟ್ಟಿನ ಜಾರಿಗೆ ತರಬೇಕು. ತಹಸೀಲ್ದಾರ್‌ಗಳ ಅಧ್ಯಕ್ಷತೆಯಲ್ಲಿ ನಿಯಮಿತವಾಗಿ ಸಮಿತಿ ಸಭೆಗಳನ್ನು ನಡೆಸಬೇಕು. ತಂಬಾಕು ಕಾರ್ಯಾಚರಣೆಗೆ ತಾಲೂಕುವಾರು ಗುರಿನಿಗದಿಪಡಿಸಿ ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ಪದೇ ಪದೆ ದಾಳಿ ನಡೆಸಬೇಕು. ಕಾಯ್ದೆ ಉಲ್ಲಂಘನೆ ಕಂಡುಬAದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ವ್ಯಾಪಾರಿಗಳಿಗೆ ನಿರ್ಬಂಧ

ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ಅಽಕಾರಿಗಳು ಪರವಾನಗಿ ನೀಡುವಾಗ ಶಾಲಾ-ಕಾಲೇಜಿನ ಸುತ್ತ ಮುತ್ತ ತಂಬಾಕು ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ನಿರ್ಬಂಧ ವಿಽಸಬೇಕು. ನಿಯಮಮೀರಿ ಮಾರಾಟ ಮಾಡುವುದು ಕಂಡು ಬಂದರೆ ದಂಡ ವಿಽಸುವುದರೊಂದಿಗೆ ಪರವಾನಗಿ ರದ್ದುಗೊಳಿಸಲು ಕ್ರಮವಹಿಸಬೇಕು ಎಂದರು.

ಜಿಲ್ಲೆಯಲ್ಲಿ ೭೩೭ ಪ್ರಕರಣ, ೮೨,೫೫೦ ರೂ. ದಂಡ

ಜಿಲ್ಲೆಯಲ್ಲಿ ೨೦೨೬ರ ಜೂನ್‌ನಿಂದ ಅಕ್ಟೋಬರ್ ೨೦೨೬ರವರೆಗೆ ತಂಬಾಕು ಕಾರ್ಯಾಚರಣೆಗೆ ಸಂಬAಽಸಿAತೆ ೧೨೦ ಗುರಿ ನಿಗದಿಪಡಿಸಲಾಗಿದ್ದು, ೫೫ ಪ್ರಗತಿ ಸಾಽಸಲಾಗಿದೆ. ಒಟ್ಟು ೭೩೭ ಪ್ರಕರಣಗಳು ದಾಖಲಾಗಿದ್ದು, ೮೨,೫೫೦ ರೂ. ದಂಡ ವಿಽಸಲಾಗಿದೆ ಎಂದರು.