ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಹಾಗೂ ಸಾಂಸ್ಕೃತಿಕ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೆ. ನಾಗರಾಜ್ ಅವರನ್ನು ಗೌರವಿಸಲಾಯಿತು. ಜೆ.ಎಸ್. ರವಿಕುಮಾರ್, ಎಸ್.ಬಿ. ರವಿಶಂಕರ್ ಇತರರು ಇದ್ದರು. 
ಚಿತ್ರದುರ್ಗ

ವಾಲ್ಮೀಕಿ ನಾಯಕ ನೌಕರರ ಸಂಘಕ್ಕೆ ನೂತನ ಪದಾಽಕಾರಿಗಳ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಹಾಗೂ ಸಾಂಸ್ಕೃತಿಕ ಸಂಘ
  • ನೂತನ ಅಧ್ಯಕ್ಷರಾಗಿ ಲೋಕೋಪಯೋಗಿ ಇಲಾಖೆಯ ಕೆ.ನಾಗರಾಜ್ ಅವಿರೋಧ ಆಯ್ಕೆ
  • ನೂತನ ಪದಾಽಕಾರಿಗಳ ಆಯ್ಕೆ
ಚಿತ್ರದುರ್ಗ: ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಹಾಗೂ ಸಾಂಸ್ಕೃತಿಕ ಸಂಘದ ನೂತನ ಅಧ್ಯಕ್ಷರಾಗಿ ಲೋಕೋಪಯೋಗಿ ಇಲಾಖೆಯ ಕೆ.ನಾಗರಾಜ್ ಅವಿರೋಧ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷರಾಗಿದ್ದ ಡಾ.ಎಚ್.ಗುಡ್ಡದೇಶ್ವರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ಆರ್. ನಾಗೇಂದ್ರಬಾಬು ಅವರ ವಯೋನಿವೃತ್ತಿಯಿಂದ ತೆರವಾದ ಸ್ಥಾನಗಳಿಗೆ ಇತ್ತೀಚೆಗೆ ನಗರದ ಪ್ರವಾಸಿ ಮಂದಿರದಲ್ಲಿ ನೂತನ ಪದಾಽಕಾರಿಗಳ ಆಯ್ಕೆ ನಡೆಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಸಣ್ಣ ನೀರಾವರಿ ಇಲಾಖೆ ಎಸ್.ಬಿ. ರವಿಶಂಕರ್, ಖಜಾಂಚಿಯಾಗಿ ಜೆ.ಎಸ್.ರವಿಕುಮಾರ್ (ಪೊಲೀಸ್‌ರವಿ) ಅವರನ್ನು ನೇಮಕ ಮಾಡಲಾಗಿದೆ.
ಸಂಸ್ಥಾಪಕ ಅಧ್ಯಕ್ಷರಾಗಿ ಸಿ.ಜೆ. ಶ್ರೀನಿವಾಸ್ ಮುಂದುವರಿದಿದ್ದು, ಗೌರವಾಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಬಿ. ವಿಮಲಾಕ್ಷಿ, ಉಪಾಧ್ಯಕ್ಷರಾಗಿ ಪಿಆರ್‌ಇಡಿ ಕೆ. ಹರೀಶ್, ಜಂಟಿ ಕಾರ್ಯದರ್ಶಿಯಾಗಿ ಕÊಷಿ ಇಲಾಖೆ ಟಿ.ಪಿ. ರಂಜಿತಾ, ಆಂತರಿಕ ಲೆಕ್ಕ ಪರಿಶೋಧಕರಾಗಿ ಜಲಸಂಪನ್ಮೂಲ ಇಲಾಖೆಯ ಎನ್.ಎಚ್. ಚಂದ್ರಪ್ಪ, ಕೆ. ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ಇದೇ ಇಲಾಖೆಯ ಎಚ್.ಡಿ. ಸುಮಂತ್, ಶಿಕ್ಷಣ ಇಲಾಖೆಯ ಕೆ.ಕೆ. ಓಬಳಪ್ಪ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.