ಚಿತ್ರದುರ್ಗದಲ್ಲಿ ಶುಕ್ರವಾರ ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸೋಮಶೇಖರ್,ದೇವರಾಜ್, ಸುರೇಶ್, ಮೀನಾಕ್ಷಮ್ಮ, ಡಿ.ಎನ್.ಮೈಲಾರಪ್ಪ ಇದ್ದರು.  
ಚಿತ್ರದುರ್ಗ

ಚಿತ್ರದುರ್ಗಕ್ಕೆ ಶೀಘ್ರ ಹೊಸ ಮಾಸ್ಟರ್‌ಪ್ಲ್ಯಾನ್

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿಕೆ
  • ನಗರಾಭಿವೃದ್ಧಿ ಸಚಿವ ಬಿ.ಎ.ಸುರೇಶ್
  • ರಿಂಗ್‌ರೋಡ್
ಚಿತ್ರದುರ್ಗ: ನಗರದ ಹೊಸ ಮಾಸ್ಟರ್‌ಪ್ಲಾನ್ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈವರೆಗೆ ೨೦೦೯ರಲ್ಲಿ ಅನುಮೋದನೆ ಆಗಿದ್ದ ಮಾಸ್ಟರ್ ಪ್ಲ್ಯಾನ್ ಜಾರಿಯಲ್ಲಿದ್ದು, ಹೊಸ ಅನುಮೋದನೆ ಸಂಬAಧ ನಗರಾಭಿವೃದ್ಧಿ ಸಚಿವ ಬಿ.ಎ.ಸುರೇಶ್ ಅವರೊಂದಿಗೆ ನಿಯೋಗದಲ್ಲಿ ತೆರಳಿ ಚರ್ಚಿಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರು ಈ ನಿಟ್ಟಿನಲ್ಲಿ ಜವಾಬ್ದಾರಿ ತೆಗೆದುಕೊಂಡಿದ್ದು, ಇದಕ್ಕೆ ಅನುಮತಿ ದೊರೆತರೆ ಐತಿಹಾಸಿಕ ಕೋಟೆ ಸಂಪರ್ಕಿಸುವ ರಿಂಗ್‌ರೋಡ್ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಪ್ರಾಽಕಾರದಿಂದ ಯಾವುದೇ ಲೇಔಟ್ ಅಭಿವೃದ್ಧಿಪಡಿಸಿಲ್ಲ. ಶೇ.೫೦:೫೦ ಅನುಪಾತದಲ್ಲಿ ಅಭಿವೃದ್ಧಿಗೆ ಜಮೀನಿನ ಮಾಲೀಕರು ಮುಂದೆ ಬರುತ್ತಿಲ್ಲ. ಸದ್ಯ ೭೦:೩೦ ಅನುಪಾತದಲ್ಲಿ ಖಾಸಗಿಯವರು ಬಡಾವಣೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದರು.
ನಾನು ಅಽಕಾರ ವಹಿಸಿಕೊಂಡ ಬಳಿಕ ನಗರದ ಹಲವು ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕೆರೆಗಳ ಪುನಃಶ್ಚೇತನಕ್ಕೆ ಆದ್ಯತೆ ನೀಡಲಾಗಿದೆ. ಅರಸನ ಕೆರೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿ ೨ನೇ ಹಂತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.
ಸಾರ್ವಜನಿಕರು ಉದ್ಯಾನÀಗಳಲ್ಲಿ ವಾಕಿಂಗ್ ಮಾಡಬೇಕು. ಅಲ್ಲಿಯ ಸ್ವಚ್ಛತೆ, ಪಾರ್ಕ್ ರಕ್ಷಣೆಗೆ ಸಹಕರಿಸಬೇಕು. ಈ ಸ್ಥಾನ ಬಯಸದೇ ಬಂದ ಭಾಗ್ಯ. ಎಐಸಿಸಿ, ಕೆಪಿಸಿಸಿ ತೀರ್ಮಾನದಂತೆ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ತೃಪ್ತಿ ವ್ಯಕ್ತಪಡಿಸಿದರು.
ಕುಡಾ ಆಯುಕ್ತ ಸೋಮಶೇಖರ್, ಸದಸ್ಯರಾದ ದೇವರಾಜ್, ಸುರೇಶ್ ಹಾಗೂ ಮೀನಾಕ್ಷಮ್ಮ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಽಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಇದ್ದರು.