ದುಸ್ಥಿತಿಗೆ ತಲುಪಿರುವ ಚಿತ್ರದುರ್ಗದ ಜಿಲ್ಲಾ ಗುರುಭವನ
- ಶಿಥಿಲಾವಸ್ಥೆ ತಲುಪಿದ ಹಳೆಯ ಕಟ್ಟಡ
- ಅಂದಾಜು ಪಟ್ಟಿ ಸಲ್ಲಿಸದ ಅಽಕಾರಿಗಳು
- ಸೂಚನೆ ನೀಡಿ ತಿಂಗಳು ಕಳೆದರೂ ಮುನ್ನಡೆಯಿಲ್ಲ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಜಿ¯್ಲೆಯ ಶಿಕ್ಷಕರಿಗಾಗಿ ಹೊಸ ಗುರುಭವನ ನಿರ್ಮಿಸುವ ಕನಸು, ಸಚಿವರ ಭರವಸೆ ಮತ್ತು ಸ್ಥಳ ಪರಿಶೀಲನೆಗೇ ಸೀಮಿತವಾಗುವ ಲಕ್ಷಣಗಳು ಕಾಣಿಸುತ್ತಿವೆ.
ಹಳೆಯ ಶಿಥಿಲ ಕಟ್ಟಡವನ್ನು ಕೆಡವಿ, ನೂತನ 'ಜಿ+೨' (ನೆಲ ಮಹಡಿ ಸೇರಿದಂತೆ ಎರಡು ಅಂತಸ್ತು) ಕಟ್ಟಡ ನಿರ್ಮಾಣಕ್ಕೆ ಅಂದಾ ಜು ಪಟ್ಟಿ ಸಿದ್ಧಪಡಿಸುವಂತೆ ಜಿ¯್ಲÁ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಲೋಕೋಪಯೋಗಿ ಇಲಾಖೆ ಅಽಕಾರಿಗಳಿಗೆ ತಾಕೀತು ಮಾಡಿ ಸುಮಾರು ಎರಡು ತಿಂಗಳು ಸಮೀಪಿಸುತ್ತಿದ್ದರೂ, ಇನ್ನೂ ಪ್ರಸ್ತಾವನೆ ಸಲ್ಲಿಕೆಯಾಗದಿರುವುದು ಶಿಕ್ಷಕರ ವಲಯ ದಲ್ಲಿ ನಿರಾಸೆ ಮೂಡಿಸಿದೆ.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿರುವ, ಸಂಪೂರ್ಣ ಪಾಳು ಬಿದ್ದಿರುವ ಈ ಗುರುಭವನಕ್ಕೆ ಸೆಪ್ಟೆಂಬರ್ ೨೨ ರಂ ದು ಸಚಿವರು ಭೇಟಿ ನೀಡಿ, ಶೀಘ್ರದ¯್ಲÉÃ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ, ಅಽಕಾರಿ ಗಳ ವಿಳಂಬ ಧೋರಣೆಯಿಂದಾಗಿ ಈ ಮಹತ್ವದ ಯೋಜನೆಗೆ ಗ್ರಹಣ ಹಿಡಿದಿದೆ.
ಕಳೆದ ಸೆ. ೫ ರ ಶಿಕ್ಷಕರ ದಿನಾಚರಣೆಯಂದೇ ಈ ವಿಷಯ ಪ್ರಸ್ತಾಪವಾಗಿತ್ತು. ಅಂದು ಜಿ¯್ಲÁ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಹೊಸ ಭವನಕ್ಕೆ ೨ ಕೋಟಿ ರೂಪಾಯಿ ಅನುದಾನದ ಭರವಸೆ ನೀಡಿದ್ದರು. ಇದೇ ವೇಳೆ, ಎಂಎಲ್‌ಸಿ ಕೆ.ಎಸ್. ನವೀನ್ ಅವರು ೫ ಕೋಟಿ ರೂಪಾಯಿಗಳ ಅನುದಾನಕ್ಕೆ ಒತ್ತಾಯಿಸಿದ್ದರು.
ನಂತರ ಸೆ. ೨೨ ರಂದು ಸಚಿವ ಸುಧಾಕರ್ ಅವರು ಶಾಸಕ ಟಿ. ರಘುಮೂರ್ತಿ ಹಾಗೂ ಸಂಬAಽತ ಅಽಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಟ್ಟಡದ ದುಸ್ಥಿತಿ ಕಂಡು, ಅದನ್ನು ಸಂಪೂರ್ಣವಾಗಿ ಕೆಡವಿ, ಅದೇ ಜÁಗದಲ್ಲಿ 'ಜಿ+೨' ಮಾದರಿಯ ಸುಸಜ್ಜಿತ ಕಟ್ಟಡ ನಿರ್ಮಿಸಲು ಅಂದಾಜು ವೆಚ್ಚ ಸಿದ್ಧಪಡಿಸುವಂತೆ ಲೋಕೋಪಯೋಗಿ ಇಲಾಖೆ (PUಈ) ಅಽಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಈ ಸೂಚನೆಗೆ ಅಽಕಾರಿಗಳು ಇನ್ನೂ ಸ್ಪಂದಿಸಿಲ್ಲ.
ಸಚಿವರ ಭರವಸೆ, ಶಾಸಕರ ಒತ್ತಾಯದ ನಡುವೆಯೂ ಅಽಕಾರಿಗಳ ವಿಳಂಬ ಧೋರಣೆಯಿಂದಾಗಿ, ಜಿ¯್ಲÁ ಹೊಸ ಗುರುಭವನ ದ ಕನಸು ನನಸಾದೀತೆ? ಎಂಬ ಪ್ರಶ್ನೆ ಶಿಕ್ಷಕರ ವಲಯದಲ್ಲಿ ಹಾಗೆಯೇ ಉಳಿದಿದೆ.
೧೯೯೩ರಲ್ಲಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ೧೦೦*೧೦೦ ವಿಸ್ತೀರ್ಣದಲ್ಲಿ ಈ ಭವನವನ್ನು ನಿರ್ಮಿಸಲಾಗಿತ್ತು. ಜಿ¯್ಲÉಯ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರ ತರಬೇತಿ, ಸಾಂಸ್ಕೃತಿಕ ಚಟು ವಟಿಕೆಗಳು, ಶೈಕ್ಷಣಿಕ ಕಾರ್ಯಾಗಾರ ಮತ್ತು ಶಿಬಿರಗಳಿಗೆ ಇದು ಆಸರೆಯಾಗಬೇಕಿತ್ತು. ಆದರೆ, ಕಳೆದ ಏಳೆಂಟು ವರ್ಷಗಳ ಹಿಂ ದೆ ಜಿ¯್ಲÁ ಚುನಾವಣಾ ಆಯೋಗವು ಈ ಕಟ್ಟಡವನ್ನು ತನ್ನ ವಶಕ್ಕೆ ಪಡೆದು, ಇವಿಎಂ ಮತ್ತು ಇತರ ಚುನಾವಣೆ ಪರಿಕರಗಳನ್ನು ಇಡುವ ಗೋದಾಮನ್ನಾಗಿ ಪರಿವರ್ತಿಸಿತ್ತು.
ನಿರ್ವಹಣೆಯಿಲ್ಲದೆ ಪಾಳು ಬಿದ್ದ ಭವನ
ಚುನಾವಣಾ ಆಯೋಗದ ವಶದಲ್ಲಿದ್ದರೂ, ಕಟ್ಟಡಕ್ಕೆ ಕನಿಷ್ಠ ನಿರ್ವಹಣೆಯೂ ಇರಲಿಲ್ಲ. ಇದರಿಂದಾಗಿ, ಭವನವು ಸಂಪೂರ್ಣ ಶಿಥಿಲ ಗೊಂಡು, ಇದೀಗ ದುರಸ್ತಿ ಮಾಡಲು ಅಸಾಧ್ಯವಾದ ಸ್ಥಿತಿಗೆ ತಲುಪಿದೆ. ಇತ್ತೀಚೆಗೆ ನಗರದ ಹೊರವಲಯದ ಕುಂಚಿಗನಾಳ್ ಬಳಿ ಚುನಾವಣಾ ಆಯೋಗಕ್ಕೆ ನೂತನ ಗೋದಾಮು ನಿರ್ಮಾಣವಾದ ನಂತರ, ಇಲ್ಲಿಂದ ಇವಿಎಂಗಳನ್ನು ಸ್ಥಳಾಂತರಿಸಲಾಗಿದೆ.
ಇದೀಗ ಭವನ ಖಾಲಿಯಾಗಿದ್ದರೂ, ಅದು ಬಳಕೆಗೆ ಬಾರದಂತಾಗಿದೆ.
ಜಿ¯್ಲÁ ಕೇಂದ್ರದ¯್ಲÉÃ ಶಿಕ್ಷಕರ ಚಟುವಟಿಕೆಗಳಿಗೆ ಸೂಕ್ತವಾದ ಭವನದ ಕೊರತೆ ತೀವ್ರವಾಗಿ ಕಾಡುತ್ತಿದೆ. ವಿಪರ್ಯಾಸವೆಂದ ರೆ, ಇಷ್ಟು ವರ್ಷಗಳ ಕಾಲ ಇವಿಎಂ ಇರಿಸಲು ಬಳಸಿದ್ದ ಈ ಕಟ್ಟಡಕ್ಕೆ ಚುನಾವಣಾ ಆಯೋಗ ಬಾಡಿಗೆಯನ್ನೂ ಪಾವತಿಸಿಲ್ಲ. ಬಾ ಡಿಗೆ ಪಾವತಿಸುವಂತೆ ಕೋರಿ ರಾಜ್ಯ ಆಯೋಗಕ್ಕೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ.
ಗುರುಭವನಕ್ಕೆ ಶಾಸಕರ ನಿಽಯಡಿ ಅನುದಾನ ಮಂಜೂರು ಮಾಡಲು ಸಿದ್ಧನಿದ್ದೇನೆ. ಹೊಸ ಕಟ್ಟಡಕ್ಕೆ ಸಚಿವರು ಕನಿಷ್ಠ ೫ ಕೋಟಿ ರೂ.ಗಳನ್ನಾದರೂ ಬಿಡುಗಡೆ ಮಾಡಿಸಬೇಕು.
ಜಿಲ್ಲಾ ಉಸ್ತುವಾರಿ ಸಚಿವರು, ಹೊಸ ಕಟ್ಟಡಕ್ಕೆ ಎಸ್ಟಿಮೇಟ್ ಸಲ್ಲಿಸುವಂತೆ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಅಽಕಾರಿಗಳಿಗೆ ೧೫ ದಿನದೊಳಗೆ ಅಂದಾಜು ವೆಚ್ಚದ ವಿವರ ಸಲ್ಲಿಸುವ ಸಾಧ್ಯತೆ ಇದೆ. ಸರ್ಕಾರದ ಅನುದಾನದೊಂದಿಗೆ ಶಿಕ್ಷಕರ, ಉಪನ್ಯಾಸಕರ ದೇಣಿಗೆ ಸಂಗ್ರಹದ ನಿರೀಕ್ಷೆ ಇದೆ.
ಈಗಿರುವ ಕಟ್ಟಡ ರಿಪೇರಿ ಸಾಧ್ಯವಿಲ್ಲ, ಹೊಸದನ್ನು ನಿರ್ಮಿಸಬೇಕಿದೆ. ಸರ್ಕಾರದ ಅನುದಾನ, ವಂತಿಗೆಯೊAದಿಗೆ ಹೊಸ ಗುರುಭ ವವನ್ನು ನಿರ್ಮಾಣ ಮಾಡಬೇಕಿದೆ.
ಅನೇಕ ವರ್ಷಗಳಿಂದ ಭವನ ಶಿಕ್ಷಕರಿಗೆ ಸಿಗದಂತಾಗಿದೆ. ಸಚಿವರು ಭರವಸೆ ಕೊಟ್ಟಿದ್ದಾರೆ. ೧೦ ಕೋಟಿ ರೂ.ಅನುದಾನದೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ.
ಜಿಲ್ಲಾ ಗುರುಭವನವನ್ನು ಹೊಸದಾಗಿ ನಿರ್ಮಿಸಿ ಶಿಕ್ಷಕರು, ಉಪನ್ಯಾಸಕರಿಗೆ ಅನುಕೂಲ ಮಾಡಿಕೊಡಬೇಕಿದೆ. ಹೊಸ ಭವನ ನಿರ್ಮಾ ಣಕ್ಕೆ ಅನೇಕ ಮನವಿಗಳನ್ನು ಸಲ್ಲಿಸಲಾಗಿದೆ. ಈಗಾಲಾದರೂ ಜಿಲ್ಲಾಡಳಿತ ವಿಶೇಷ ನಿಗಾ ವಹಿಸಬೇಕಿದೆ.