ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆಗೆ ಒತ್ತಾಯಿಸಿ ಚಿತ್ರದುರ್ಗದಲ್ಲಿ ಸೋಮವಾರ ಸಂಸದ ಗೋವಿಂದ ಎಂ. ಕಾರ ಜೋಳ ಅವರ ಕಚೇರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟಿಸಿದರು. ಈಚಘಟ್ಟದ ಸಿದ್ದವೀರಪ್ಪ, ಕೆ.ಟಿ. ತಿಪ್ಪೇಸ್ವಾಮಿ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಬಿ.ಎಸ್. ರಂಗಸ್ವಾಮಿ, ವೈ.ಟಿ. ನಾಗೇಂದ್ರಪ್ಪ, ರೆಡ್ಡಿಹಳ್ಳಿವೀರಣ್ಣ ಇತರರು ಇದ್ದರು. 
ಚಿತ್ರದುರ್ಗ

`ಭದ್ರೆ' ಅನುದಾನಕ್ಕೆ ಹೊಸ ದಿಲ್ಲಿ ಚಲೋ ಎಚ್ಚರಿಕೆ

ಪ್ರಮುಖ ಮುಖ್ಯಾಂಶಗಳು

  • ಸಂಸದರ ಮನೆಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ
  • ಕೆಂದ್ರ ಸರ್ಕಾರದ ಮೌನಕ್ಕೆ ತೀವ್ರ ಅಸಮಾಧಾನ
  • ಹೊಸದಿಲ್ಲಿ ಚಲೋ
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿರುವ ೫೩೦೦ ಕೋಟಿ ರೂ. ಅನುದಾನ ಬಿಡುಗಡೆಗೆ ಒತ್ತಾಯಿಸಿ ರೈತರು ಸೋಮವಾರ ನಗರದ ಸಂಸದ ಗೋವಿಂದ ಎಂ. ಕಾರಜೋಳ ಅವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಅನುದಾನ ಬಿಡುಗಡೆ ಮಾಡದ ಕೇಂದ್ರದ ನಿಲುವು ವಿರೋಽಸಿದ ಪ್ರತಿಭಟನಾ ನಿರತರು ಮಾರ್ಚ್ವೊಳಗೆ ಹಣ ಬಾರದದಿದ್ದರೆ ಏಪ್ರಿಲ್‌ನಲ್ಲಿ ಹೊಸದಿಲ್ಲಿ ಚಲೋ ನಡೆಸುವುದಾಗಿ ಎಚ್ಚರಿಸಿದರು.
೨೦೨೨-೨೩ರ ಬಜೆಟ್‌ನಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ೫೩೦೦ ಕೋಟಿ ರೂ. ಪ್ರಕಟಿಸಿದ್ದರು. ಆದರೆ, ಅನುದಾನ ಇಷ್ಟು ವರ್ಷಗಳಾದರೂ ಬಿಡುಗಡೆಯಾಗದೆ ಬಹು ನಿರೀಕ್ಷಿತ ನೀರಾವರಿ ಯೋಜನೆ ಕುಂಠಿತಗೊAಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಅಂತರ್ಜಲ ಬಳಕೆ ಅಪಾಯಕಾರಿ ಮಟ್ಟ ತಲುಪಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತಿದ್ದು, ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ಚುನಾವಣೆ ಸಂದರ್ಭದಲ್ಲಿ ಆಯ್ಕೆಯಾದ ೩ ತಿಂಗಳ ಒಳಗೆ ಅನುದಾನ ಕೊಡಿಸುವ ಭರವಸೆ ಈಡೇರಿಲ್ಲವೆಂದು ಗೋವಿಂದ ಕಾರಜೋಳ ಅವರಿಗೆ ನೆನಪಿಸಿದರು. ಜಿಲ್ಲಾಧ್ಯಂತ ಹೋರಾಟಗಳು ನಡೆಯುತ್ತಿದ್ದರೂ ಮೌನ ವಹಿಸಿರುವ ಕೇಂದ್ರದ ನಡೆಯನ್ನು ಖಂಡಿಸಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಬಿ.ಎಸ್. ರಂಗಸ್ವಾಮಿ, ವೈ.ಟಿ. ನಾಗೇಂದ್ರಪ್ಪ, ರೆಡ್ಡಿಹಳ್ಳಿವೀರಣ್ಣ, ರಾಜಣ್ಣ, ಟಿ. ಗಂಗಾಧರ್, ಎಚ್. ಗಂಗಾಧರ್, ಸಿದ್ದರಾಮಣ್ಣ, ಪಿ.ಸಿ.ನಾಗರಾಜ್, ತಿಮ್ಮಣ್ಣ, ಜಯಣ್ಣ, ಎಚ್. ರಾಮಯ್ಯ, ಕೆ.ಸಿ. ಪರಮೇಶ್ವರಪ್ಪ, ಜಿ. ರಾಜಪ್ಪ, ಸಣ್ಣಪಾಲಯ್ಯ ಇತರರು ಇದ್ದರು.