ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಗಾಯತ್ರಿ ಶಿವರಾಂ, ಡಾ.ಬಿ.ಜಿ. ಕುಮಾರಸ್ವಾಮಿ,ಪ್ರೊ.ಬಸಂತಕುಮಾರಿ, ಪ್ರೊ. ಬೀನಾಶೆರಿಲ್, ಪ್ರೊ.ಎನ್. ಪವಿತ್ರಾ ಇತರರು ಇದ್ದರು.
- ವನಿತೆಯರಿಗೆ ಗಾಯತ್ರಿ ಶಿವರಾಂ ಸಲಹೆ
- ಎಸ್‌ಜೆಎಂಐಟಿಯಲ್ಲಿ ಮಹಿಳಾ ದಿನಾಚರಣೆ
- ಆಧುನಿಕ ತಂತ್ರಜ್ಞಾನ
ಚಿತ್ರದುರ್ಗ: ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ ಎಂದು ಸಮಾಜ ಸೇವಕಿ ಗಾಯತ್ರಿ ಶಿವರಾಂ ಹೇಳಿದರು.
ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಮಹಿಳಾ ಘಟಕ, ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಮನೆ ನಿರ್ವಹಣೆಯಿಂದ ಹಿಡಿದು ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಜಗತ್ತಿನವರೆಗೆ ಮಹಿಳೆ ತನ್ನ ಸಾಮರ್ಥ್ಯ ತೋರಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಸಮಾಜದ ಅಭಿವೃದ್ಧಿಯಲ್ಲಿ ಅವರ ಪಾತ್ರ ಅತ್ಯಂತ ಹಿರಿದಾಗಿದೆ ಎಂದರು.
ಪ್ರತಿ ಮಹಿಳೆಯೂ ದೃಢ ಮನೋಬಲ, ಆತ್ಮವಿಶ್ವಾಸ ಹಾಗೂ ಸಂಕಲ್ಪದೊAದಿಗೆ ಜೀವನ ಎದುರಿಸಬೇಕು. ಯಾವುದೇ ಸವಾಲುಗಳು ಎದುರಾದರೂ ಇಚ್ಛಾಶಕ್ತಿ, ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಶಿಕ್ಷಣ, ತಂತ್ರಜ್ಞಾನ ಮತ್ತು ಹೊಸ ಅವಕಾಶ ಬಳಸಿಕೊಂಡು ಜೀವನ ಮತ್ತಷ್ಟು ಉತ್ತಮಪಡಿಸಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಬಿ.ಜಿ.ಕುಮಾರಸ್ವಾಮಿ, ಪ್ರೊ.ಬಸಂತಕುಮಾರಿ, ಪ್ರೊ. ಬೀನಾಶೆರಿಲ್, ಪ್ರೊ. ಎನ್. ಪವಿತ್ರಾ ಇತರರು ಇದ್ದರು. ಪ್ರೊ.ಎಂ.ಕೆ.ಶ್ರುತಿ ಸಂವಿಧಾನ ಪೀಠಿಕೆ ಬೋಽಸಿದರು. ತ್ರಿಶಾ ಪ್ರಾರ್ಥಿಸಿದರು. ಬಿ.ಬಿ. ಹಾಜಿರಾ ಸ್ವಾಗತಿಸಿ, ಅದ್ಬಿಯಾ ಅಂಜುಮ್ ವಂದಿಸಿದರು. ಯಶಸ್ವಿನಿ ನಿರೂಪಿಸಿದರು. ಅಮೂಲ್ಯಚಂದ್ರ ಅ ತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.