ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಜಿಲ್ಲೆಯ ೩ ಡಿವೈಎಸ್ಪಿ ಕಚೇರಿಗಳ(ಸಿವಿಲ್) ಸಂಖ್ಯೆಯನ್ನು ೪ಕ್ಕೆ ಹೆಚ್ಚಿಸಬೇಕೆಂಬ ಜಿಲ್ಲಾ ಪೊಲೀಸ್ ಇಲಾಖೆ ಕೋರಿಕೆಗೆ ರಾಜ್ಯ ಸರ್ಕಾರವಿನ್ನೂ ಸ್ಪಂದಿಸಿಲ್ಲ.
ಸದ್ಯ ಜಿಲ್ಲೆಯಲ್ಲಿ ಚಿತ್ರದುರ್ಗ, ಚಳ್ಳಕೆರೆ ಹಾಗೂ ಹಿರಿಯೂರು ಪೊಲೀಸ್ ಉಪ ವಿಭಾಗ ಕಚೇರಿಗಳಿದ್ದು, ಚಿತ್ರದುರ್ಗ ಪೊಲೀಸ್ ಉಪವಿಭಾಗ ಪ್ರತ್ಯೇಕ ಮಾಡಿ ಹೊಸ ಡಿವೈಎಸ್ಪಿ ಕಚೇರಿ ಮಂಜೂರು ಮಾಡಬೇಕೆಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಸ್ತಾವನೆ ಸಲ್ಲಿಸಿ ವರ್ಷವಾಗುತ್ತಾ ಬಂದಿದ್ದರೂ ಸರ್ಕಾರದ ಒಪ್ಪಿಗೆ ಮಾತ್ರ ಇನ್ನೂ ಸಿಕ್ಕಿಲ್ಲ.
ಡಿವೈಎಸ್ಪಿ ಹುದ್ದೆ ಹೊರತುಪಡಿಸಿ ಸಿಬ್ಬಂದಿ, ಕಟ್ಟಡ ಇತ್ಯಾದಿ ಮೂಲ ಸೌಕರ್ಯಗಳ ಬಿಟ್ಟರೆ, ಶೂನ್ಯವೆಚ್ಚದಲ್ಲಿ ಚಿತ್ರದುರ್ಗಕ್ಕೆ ಮತ್ತೊಂದು ಹೊಸ ಪ್ರತ್ಯೇಕ ಡಿವೈಎಸ್ಪಿ ಕಚೇರಿ ಆರಂಭಿಸಬೇಕಿದೆ ಎಂದು ಪ್ರಸ್ತಾವನೆ, ಮರು ಪ್ರಸ್ತಾವನೆ ನೀಡಿದ್ದರೂ ಇನ್ನೂ ಆರ್ಥಿಕ ಇಲಾಖೆ ಮನ್ನಣೆ ನೀಡಿಲ್ಲ.
ಚಿತ್ರದುರ್ಗ ನಗರ, ಕೋಟೆ, ಬಡಾವಣೆ, ಗ್ರಾಮಾಂತರ, ಮಹಿಳಾ, ಸಂಚಾರ, ಸಿಇಎನ್ ಠಾಣೆಗಳು, ಚಿತ್ರದುರ್ಗ ತಾಲೂಕಿನ ತುರುವನೂರು, ಭರಮಸಾಗರ, ಹೊಳಲ್ಕೆರೆ ತಾಲೂಕು ಸರ್ಕಲ್ ಇನ್ಸ್ಪೆಕ್ಟರ್, ಹೊಳಲ್ಕೆರೆ, ಚಿತ್ರಹಳ್ಳಿ ಗೇಟ್ ಹಾಗೂ ಚಿಕ್ಕಜಾಜೂರು ಠಾಣೆಗಳು ಸಹ ಈಗಿರುವ ಚಿತ್ರದುರ್ಗ ಡಿವೈಎಸ್ಪಿ ಕಚೇರಿ ವ್ಯಾಪ್ತಿಯಲ್ಲಿವೆ.
ಚಿತ್ರದುರ್ಗ ಡಿವೈಎಸ್ಪಿ ಕಚೇರಿಯನ್ನು ಚಿತ್ರದುರ್ಗ ಎ ಮತ್ತು ಬಿ ಎಂದು ಪ್ರತ್ಯೇಕಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಅನುಮತಿ ದೊರೆತರೆ ಚಿತ್ರದುರ್ಗ ಡಿವೈಎಸ್ಪಿ ಕಚೇರಿ(ಎ)ವ್ಯಾಪ್ತಿಯಲ್ಲಿ ಚಿತ್ರದುರ್ಗ ಗ್ರಾಮಾಂತರ(ಬಿ)ಡಿವೈಎಸ್ಪಿ ಕಚೇರಿ ಎಂದು ಕರ್ತವ್ಯ ನಿರ್ವಹಣೆ ಹಂಚಿಕೆಯಾಗಲಿದೆ.
ಹೊಸ ಕಚೇರಿಯನ್ನು ಚಿತ್ರದುರ್ಗ ನಗರ ಅಥವಾ ಹೊಳಲ್ಕೆರೆ ಪಟ್ಟಣದಲ್ಲಿ ಸ್ಥಾಪಿಸುವ ಇರಾದೆ ಜಿಲ್ಲಾ ಪೊಲೀಸ್ ಇಲಾಖೆಗೆ ಇದೆ. ಹೊಸದಾಗಿ ಸೃಜಿಸುವ ಡಿವೈಎಸ್ಪಿ ಹುದ್ದೆಗೆ ಆರ್ಥಿಕ ಹೊರೆಯಾಗದಂತೆ ಜಿಲ್ಲೆಯ ೩ ಠಾಣೆಗಳಿಂದ ತಲಾ ಒಂದೊAದರAತೆ, ೩ ಕಾನ್ಸ್ಟೇಬಲ್ ಹುದ್ದೆ ಸರಂಡರ್ ಮಾಡುವುದಾಗಿ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆೆ.
------
ಒಬ್ಬ ಡಿವೈಎಸ್ಪಿಯಿಂದ ಕಷ್ಟ
ಜಿಲ್ಲಾ ಕೇಂದ್ರದ ಡಿವೈಎಸ್ಪಿ ಕಚೇರಿ ಮೇಲೆ ಗಂಭೀರ ಸ್ವರೂಪ ಪ್ರಕರಣಗಳ ತನಿಖಾ ಜವಾಬ್ದಾರಿ ಸಹಿತ, ಸಭೆ-ಸಮಾರಂಭಗಳ ಬಂದೋಬಸ್ತ್, ವಿವಿಐಪಿ ಮೂವ್ಮೆಂಟ್ ಮೊದಲಾದ ಕರ್ತವ್ಯ ಬಾಹುಳ್ಯ ಅಽಕವಾಗುತ್ತಿದೆ. ಈ ಕಚೇರಿ ವ್ಯಾಪ್ತಿ ದೊಡ್ಡದಾಗಿರುವುದರಿಂದಾಗಿ ಒಬ್ಬ ಅಽಕಾರಿಯ (ಡಿವೈಎಸ್ಪಿ) ಕರ್ತವ್ಯ ನಿರ್ವಹಣೆ ಕ್ಲಿಷ್ಟಕರವಾಗುತ್ತಿದೆ. ಅಪರಾಧ ಪ್ರಕರಣಗಳ ತನಿಖೆ ಚುರುಕುಗೊಳಿಸಿ, ಶಿಕ್ಷೆ ಪ್ರಮಾಣ ಹೆಚ್ಚಿಸಲು ಚಿತ್ರದುರ್ಗ ಡಿವೈಎಸ್ಪಿ ಕಚೇರಿ ಪ್ರತ್ಯೇಕಗೊಳಿಸುವುದು ಅನಿವಾರ್ಯವೆಂಬ ಪ್ರತಿಪಾದನೆ ಇದೆ.
--
ಹೊಸ ಠಾಣೆಗಳು
ಜಿಲ್ಲೆಯ ೨೨ ಠಾಣೆಗಳೊಂದಿಗೆ ಹೊಸದಾಗಿ ಚಳ್ಳಕೆರೆ ಗ್ರಾಮಾಂತರ, ಚಳ್ಳಕೆರೆ ಸಂಚಾರ ಠಾಣೆ ಆರಂಭಿಸಬೇಕೆAಬ ಬೇಡಿಕೆ ಇದೆ. ವಿಶೇಷವಾಗಿ ಚಳ್ಳಕೆರೆ ಗ್ರಾಮಾಂತರ ಠಾಣೆ ಅಗತ್ಯವಿದೆ ಎಂಬುದು ನಾಗರಿಕರ ಒತ್ತಾಸೆ. ಚಳ್ಳಕೆರೆ ತಾಲೂಕಿನಲ್ಲಿ ಇಸ್ರೋ, ಡಿಆರ್ಡಿಒ, ಬಾರ್ಕ್, ಐಐಎಸ್ಸಿನಂಥ ೪ ರಾಷ್ಟಿçÃಯ ಸಂಸ್ಥೆಗಳಿದ್ದು, ಚಳ್ಳಕೆರೆ ಗ್ರಾಮಾಂತರ ಠಾಣೆ ಬೇಡಿಕೆ ಬಹಳ ದಿನಗಳಿಂದ ಹಾಗೇ ಉಳಿದಿದೆ. ಹಿರಿಯೂರಿನಲ್ಲಿ ಸಂಚಾರ ಠಾಣೆ ಆರಂಭಿಸಲು ಒಪ್ಪಿಗೆ ದೊರೆತಿದ್ದರೂ ಅದಿನ್ನೂ ಕಾರ್ಯಾರಂಭ ಮಾಡಿಲ್ಲ. ೮೮ ವರ್ಷಗಳ ಹಿಂದೆ ಆರಂಭವಾಗಿದ್ದ ಭರಮಸಾಗರ, ಚಿತ್ರದುರ್ಗ ಗ್ರಾಮಾಂತರ, ಹೊಸದುರ್ಗ ಠಾಣೆ, ಹಿರಿಯೂರು ಮತ್ತಿತರ ಜಿಲ್ಲೆಯ ಪೊಲೀಸ್ ಠಾಣೆಗಳ ಮೇಲೂ ಕಾರ್ಯಭಾರ ಹೆಚ್ಚಾಗುತ್ತಿದೆ. ವರ್ಷಕ್ಕೆ ೫೦೦-೬೦೦ ಪ್ರಕರಣಗಳ ದಾಖಲಾಗುವ ಈ ಠಾಣೆ ವಿಭಜಿಸಿ ಹೊಸ ಠಾಣೆ ಪ್ರಾರಂಭಿಸಬೇಕೆAಬ ಬೇಡಿಕೆ ಕೂಡ ಇದೆ.
ಕೋಟ್
ಚಿತ್ರದುರ್ಗ ಡಿವೈಎಸ್ಪಿ ಕಚೇರಿ ಪ್ರತ್ಯೇಕ ಮಾಡಿ, ಹೊಸ ಡಿವೈಎಸ್ಪಿ ಕಚೇರಿ ಸ್ಥಾಪನೆಯಾದರೆ ಹಾಗೂ ಪ್ರಕರಣಗಳ ಒತ್ತಡ ಹೆಚ್ಚಿರುವ ಜಿಲ್ಲೆಯ ವಿವಿಧ ಠಾಣೆ ವಿಭಜಿಸಿ ಹೊಸ ಠಾಣೆಗಳನ್ನು ಆರಂಭಿಸಿದರೆ ಮತ್ತಷ್ಟು ಉತ್ತಮ ಪೊಲೀಸ್ ಸೇವೆ ಕೊಡಲು ಸಾಧ್ಯವಾಗಲಿದೆ.