ಮೈಸೂರು-ಬೆAಗಳೂರು ರಾ.ಹೆ. ಶ್ರೀರಂಗಪಟ್ಟಣ ಬಳಿ ನಿರ್ಮಿಸಿರುವ ಎಲಿಫೆಂಟ್ ಒವರ್‌ಪಾಸಿಂಗ್(ಸಾAದರ್ಭಿಕ ಚಿತ್ರ)
- ಜೋಗಿಮಟ್ಟಿ ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚಿದ ಅಪಘಾತ
- ಕಾರಿಡಾರ್ ನಿರ್ಮಾಣಕ್ಕೆ ಎನ್‌ಎಚ್‌ಎಐ ಕಣ್ಣಾಮುಚ್ಚಾಲೆ
- ಅರಣ್ಯ ಇಲಾಖೆ ನೋಟಿಸ್‌ಗಳಿಗೆ ಇಲ್ಲ ಬೆಲೆ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ರಾಷ್ಟಿçÃಯ ಹೆದ್ದಾರಿ ೪೮ ಸೇರಿದಂತೆ ಜಿಲ್ಲೆಯಲ್ಲಿ ಹಾದು ಹೋಗಿರುವ ರಾ.ಹೆ.ನಿರ್ಮಾಣ ವೇಳೆ ವನ್ಯಜೀವಿಗಳ ಮುಕ್ತ ಸಂಚಾ ರಕ್ಕೆ ಪೂರಕವಾಗಿ ಕಾರಿಡಾರ್(ಅಂಡರ್‌ಪಾಸ್, ಮೇಲ್ಸೇತುವೆ)ನಿರ್ಮಿಸದೆ ತೋರಿದ ನಿರ್ಲಕ್ಷ್ಯದಿಂದಾಗಿ, ಜಿಲ್ಲೆಯಲ್ಲಿ ರಸ್ತೆ ದಾ ಟುವ ವೇಳೆ ಅಪಘಾತಕ್ಕೀಡಾಗಿ ವನ್ಯಜೀವಿಗಳು ಜೀವ ಕಳೆದುಕೊಳ್ಳುತ್ತಿವೆ.
ಚಿತ್ರದುರ್ಗ ಹೊರವಲಯದ ತಮಟಕಲ್ಲು ಸಮೀಪ ಎನ್‌ಎಚ್ ೪೮ರಲ್ಲಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ೨ ವರ್ಷದ ಕರ ಡಿ ಮÊತಪಟ್ಟಿರುವುದು ಹೆದ್ದಾರಿ ಪ್ರಾಽಕಾರದ ಹೊಣೆೆಗೇಡಿತನಕ್ಕೆ ಇತ್ತೀಚಿನ ನಿದರ್ಶನ.
ಜೋಗಿಮಟ್ಟಿ ವನ್ಯಜೀವಿಧಾಮ ಘೋಷಣೆಯಾದ ನಂತರ ಚಿರತೆ,ಕರಡಿ ಮುಂತಾದ ಪ್ರಾಣಿಗಳ ಸಂತತಿ ಹೆಚ್ಚಿದೆ. ಜೋಗಿಮಟ್ಟಿ, ನಾ ಗೇನಹಳ್ಳಿ, ತಮಟಕಲ್ಲು, ಜಿ.ಆರ್.ಹಳ್ಳಿ ಗುಡ್ಡ, ಜಗಳೂರು, ಬೊಮ್ಮನಾಯಕನಹಳ್ಳಿ, ತುರುವನೂರು, ನಾಯಕನಹಟ್ಟಿ, ರಾಮದುರ್ಗ, ಬಾಳೇದಹಳ್ಳಿ, ಕಮರಕಾವಲು ಅರಣ್ಯ ಪ್ರದೇಶ ಹಾಗೂ ಇಂಗಳದಾಳು.
ಬುರುಜನರೊಪ್ಪ ಸೇರಿದಂತೆ ಜಿಲ್ಲೆಯ ಹಲವೆಡೆ ಕಾಡು ಪ್ರಾಣಿ ಗಳ ನಿರಂತರ ಓಡಾಟವಿದೆ. ಆದರೆ ಇವುಗಳಿಗೆ ಸುರಕ್ಷಿತ ಸಂಚಾರ ಮಾರ್ಗವಿಲ್ಲದೆ ಹೆದ್ದಾರಿ ದಾಟುವಾಗ ಭೀಕರ ಅಪಘಾತಗಳಿಗೆ ತುತ್ತಾಗುತ್ತಿವೆ.
ಜೋಗಿಮಟ್ಟಿ ವಲಯದಲ್ಲಿ ಹೊಸ ಎನ್‌ಎಚ್ ೪೮ ನಿರ್ಮಾಣದ ವೇಳೆ ಪ್ರಾಣಿಗಳ ಓಡಾಟಕ್ಕೆ ಕಾರಿಡಾರ್ ನಿರ್ಮಿಸುವಂತೆ ಅರಣ್ಯ ಇಲಾಖೆ ಸಲ್ಲಿಸಿದ್ದ ಮನವಿಯನ್ನು ರಾಷ್ಟಿçÃಯ ಹೆದ್ದಾರಿ ಪ್ರಾಽಕಾರ(ಎನ್‌ಎಚ್‌ಎಐ) ಸಂಪೂರ್ಣ ನಿರ್ಲಕ್ಷಿಸಿತ್ತು.
ಪ್ರಾಣಿಗಳ ಸಾವು ಹೆಚ್ಚಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆಯು ಎನ್‌ಎಚ್‌ಎಐಗೆ ಹಲವು ಬಾರಿ ಅಽಕÊತ ನೋಟಿಸ್ ಗಳನ್ನು ಜಾರಿ ಮಾಡಿತ್ತು. ಅದಕ್ಕೆ ಸ್ಪಂದಿಸದೇ ಇದ್ದ ಎನ್‌ಎಚ್‌ಐ ಅಽಕಾರಿಗಳು ಈಚೆಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆಂದು ಗೊತ್ತಾಗಿದೆ.
ಪರಿಸರ ಸೂಕ್ಷ÷್ಮವಲಯಕ್ಕೂ ತಪ್ಪದ ಧಕ್ಕೆ
ಜೋಗಿಮಟ್ಟಿ ವನ್ಯಜೀವಿಧಾಮದ ಸುತ್ತಲಿನ ೧ ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ÷್ಮ ವಲಯ ಎಂದು ಘೋಷಿಸಲಾಗಿದೆ. ಇಲ್ಲಿ ನಾಗರಿಕ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ನಿಯಂತ್ರಣ ಹೇರಬೇಕೆಂಬ ನಿಯಮವಿದ್ದರೂ,ಕಟ್ಟುನಿಟ್ಟಿನ ಜಾರಿಯಾಗದೆ ಕಾಗದದಲ್ಲೇ ಉಳಿದಿದೆ ಎಂಬುದು ಅರಣ್ಯ ಇಲಾಖೆ ಅಸಮಾಧಾನ.
೧೫ಕ್ಕೂ ಹೆಚ್ಚು ವನ್ಯಜೀವಿಗಳ ಬಲಿ
ಚಿತ್ರದುರ್ಗ, ಮೊಳಕಾಲ್ಮುರು, ಹೊಸದುರ್ಗ, ಹೊಳಲ್ಕೆರೆ ಹಾಗೂ ಚಳ್ಳಕೆರೆ ವಲಯ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಕರಡಿ,ಚಿರತೆ, ನರಿ, ಮೊಲ, ಕÊಷ್ಣಮÊಗ ಸೇರಿದಂತೆ ೧೫ಕ್ಕೂ ಹೆಚ್ಚು ಕಾಡುಪ್ರಾಣಿಗಳು ಅಪಘಾತದಲ್ಲಿ ಅಸುನೀಗಿವೆ.
ಮೇಗಳಹಳ್ಳಿಯಲ್ಲಿ ಸೆರೆ ಹಿಡಿದ ತಾಯಿ,ಮರಿ ಕರಡಿಗಳನ್ನು ಬನ್ನೇರುಘಟ್ಟಕ್ಕೆ ಹಾಗೂ ಕೋಟೆ ಬಳಿ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದ ಮುಷ್ಯಾವನ್ನು ಶಿವಮೊಗ್ಗ ಲಯನ್ ಸ-Áರಿಗೆ ಸ್ಥಳಾಂತರಿಸಲಾಗಿದೆ. ಹೊಸದುರ್ಗದಲ್ಲಿ ಚಿರತೆ ಹಾಗೂ ನವಿಲು ವಿದ್ಯುತ್ ಶಾಕ್‌ಗೆ ಬಲಿಯಾಗಿದ್ದರೆ, ಹೊಳಲ್ಕೆರೆಯಲ್ಲಿ ತಾಯಿಯಿಂದ ಅಗಲಿದ ೨ ಚಿರತೆ ಮರಿಗಳನ್ನು ಆಡುಮಲ್ಲೇಶ್ವರ ಕಿರು ಮÊಗಾಲಯಕ್ಕೆ ಸೇರಿಸಲಾಗಿದೆ.
"
ಚಿತ್ರದುರ್ಗ ಅರಣ್ಯ ವಲಯ ವ್ಯಾಪ್ತಿಯ ಹೆದ್ದಾರಿಯಲ್ಲಿ ವನ್ಯಜೀವಿ ಕಾರಿ ಡಾರ್(Wildlife Mitigation plan) ನಿರ್ಮಾಣಗೊಂಡರೆ ಮಾತ್ರ ಅಪಘಾತಗಳಿಂದ ಸಂಭವಿಸುವ ಪ್ರಾಣಿಗಳ ಸಾವುಗಳ ನಿಯಂತ್ರಣ ಸಾಧ್ಯವಾಗಲಿದೆ.
— ಆರ್.ವಸಂತಕುಮಾರ್, ವಲಯ ಅರಣ್ಯಾಽಕಾರಿ, ಚಿತ್ರದುರ್ಗ.