ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಎಸ್‌ಐಆರ್‌ನಲ್ಲಿ ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾಽಕಾರಿ ಎಸ್. ರಮ್ಯಾ ಹೇಳಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಎಸ್‌ಐಆರ್ ಕುರಿತಂತೆ ರಾಜಕೀಯ ಪಕ್ಷಗಳ ಪ್ರತಿನಿಽಗಳ ಸಭೆಯಲ್ಲಿ ಮಾತನಾಡಿ, ಯಾರಾದರೂ ದುರುದ್ದೇಶಪೂರ್ವಕವಾಗಿ, ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಿ, ಸುಳ್ಳು ಮಾಹಿತಿ ನೀಡಿ -Áರಂ೭(ಹೆಸರು ಕೈಬಿಡಲು ಆಕ್ಷೇಪಣೆ ಅರ್ಜಿ)ಸಲ್ಲಿಸಿದ್ದರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಎ-ïಐಆರ್ ದಾಖಲಿಸಲಾಗುವುದು ಎಂದರು.
ಆಕ್ಷೇಪಣೆ, ತಿದ್ದುಪಡಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತಂತೆ ಪ್ರತಿ ಅರ್ಜಿದಾರರಿಗೂ ನೋಟಿಸ್ ಜಾರಿ ಮಾಡಿ, ದಾಖಲೆಗಳ ಸಹಿತ ಪರಿಶೀಲನೆ ನಡೆಸಲಾಗುತ್ತದೆ. ಸದ್ಯ ಸಲ್ಲಿಕೆಯಾಗಿರುವ ಅಂದಾಜು ೨೩೭೨ ಆಕ್ಷೇಪಣೆ ಅರ್ಜಿಗಳನ್ನು ಸಹಾಯಕ ಮತದಾರರ ನೋಂದಣಾಽಕಾರಿಗಳು ಪರಿಶೀಲಿಸಲಿದ್ದಾರೆ. ದಾಖಲೆಗಳು ಸರಿಯಾಗಿದ್ದರೆ ಅಂಗೀಕರಿಸಲಾಗುವುದು, ಇಲ್ಲವಾದಲ್ಲಿ ತಿರಸ್ಕರಿಸಲಾಗುವುದು ಎಂದರು.
ನಗರದ ಕೆಲ ವಾರ್ಡ್ಗಳಲ್ಲಿ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ದುರುದ್ದೇಶದಿಂದ ಕೆಲವು -Áರಂ೭ ಸಲ್ಲಿಸಲಾಗುತ್ತಿದೆ. ವಿಶೇಷವಾಗಿ ಅಲ್ಪಸಂಖ್ಯಾತರು ಹಾಗೂ ನಿರ್ದಿಷ್ಟ ಸಮುದಾಯಗಳ ಮತದಾರರನ್ನು ಗುರಿಯಾಗಿಸಿ ಸುಳ್ಳು ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್. ಮೈಲಾರಪ್ಪ, ಶಬ್ಬೀರ್ ಆತಂಕ ವ್ಯಕ್ತಪಡಿಸಿ, ಇಂತಹ ಅರ್ಜಿಗಳ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಯಾವುದೇ ಅರ್ಹ ಮತದಾರರ ಹೆಸರನ್ನು ಅನಗತ್ಯವಾಗಿ ಪಟ್ಟಿಯಿಂದ ಕೈಬಿಡಲು ಅವಕಾಶ ನೀಡುವುದಿಲ್ಲ. ಪ್ರತಿ ಅರ್ಜಿಯನ್ನು ಅಽಕಾರಿಗಳು ಖುದ್ದು ಪರಿಶೀಲಿಸಲಿದ್ದಾರೆ. ಯಾವುದೇ ವ್ಯಕ್ತಿಗಳು ಚುನಾವಣಾ ಸಿಬ್ಬಂದಿಗೆ ತಪ್ಪು ಮಾಹಿತಿ ನೀಡಿರುವುದು ದೃಢಪಟ್ಟರೆ ಅವರ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಭರವಸೆ ನೀಡಿದರು.
ಎಸಿ ಡಾ.ಕೆ.ಜೆ. ಕಾಂತರಾಜ್, ಚುನಾವಣಾ ತಹಸೀಲ್ದಾರ್ ಬೀಬೀ -Áತಿಮಾ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ಗೋಪಾಲಸ್ವಾಮಿ ನಾಯಕ, ಜೆಡಿಎಸ್‌ನ ಸೈಯದ್ ನಸುರುಲ್ಲಾ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಪ್ರಕಾಶ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಟಿ. ಯಶವಂತ್ ಕುಮಾರ್, ಸಿಪಿಐ(ಎಂ)ಡಿಒಸಿ ಸಿ.ಕೆ. ಗೌಸ್‌ಪೀರ್ ಇದ್ದರು.
ಶೇ.೯೯ ನೋಟಿಸ್‌ಗಳ ವಿಚಾರಣೆ ಪೂರ್ಣ
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ವ್ಯತ್ಯಾಸಗಳಿಗೆ ಸಂಬಂಽಸಿದಂತೆ ಕೊಟ್ಟಿದ್ದ ನೋಟಿಸ್‌ಗಳ ಪೈಕಿ ಶೇ.೯೯ ನೋಟಿಸ್‌ಗಳ ವಿಚಾರಣೆ ಪೂರ್ಣವಾಗಿದೆ ಎಂದು ಡಿಸಿ ಎಸ್.ರಮ್ಯಾ ಹೇಳಿದರು.
ಜಿಲ್ಲಾಽಕಾರಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಯಾಗಿದ್ದ ೬೮,೭೫೦ ನೋಟಿಸ್‌ಗಳ ವಿಚಾರಣೆಗೆ ಚುನಾವಣಾ ಆಯೋಗದಿಂದ ೧೦೨ ಹೆಚ್ಚುವರಿ ಮತದಾರರ ನೋಂದಣಾಽಕಾರಿಗಳನ್ನು ನೇಮಕ ಮಾಡಲಾಗಿತ್ತು. ೬೬,೬೮೯ ನೋಟಿಸ್‌ಗಳ ವಿಚಾರಣೆ ಪೂರ್ಣಗೊಂಡಿದೆ. ಕಾಯಂ ಆಗಿ ಬೇರೆಡೆ ಸ್ಥಳಾಂತರವಾಗಿರುವ ಅಥವಾ ಮೃತರನ್ನು ಪರಿಶೀಲನೆ ಬಳಿಕ ಅನರ್ಹರೆಂದು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಇದರ ಆಧಾರದ ಮೇಲೆ ಇದುವರೆಗೂ ೬೨೬ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
-Áರ್ಮ್ ೬ ಅಡಿ ೧೬,೬೫೬, -Áರ್ಮ್ ೬ಎ ಅಡಿ ೯, -Áರ್ಮ್ ೭ ಅಡಿ ೨,೬೩೮, -Áರ್ಮ್ ೮ರಡಿ ೨೦,೩೮೭ ಸೇರಿ ಒಟ್ಟು ೩೯,೬೯೧ ನಮೂನೆಗಳು ಸ್ವೀಕÊತವಾಗಿವೆ. ಬಿಎಲ್‌ಎ ಹಾಗೂ ಸಾರ್ವಜನಿಕರು ಸಲ್ಲಿಸಿರುವ ಆಕ್ಷೇಪಣೆಗಳನ್ನು ಕೂಲಂಕಷ ಪರಿಶೀಲಿಸಿ ಕ್ರಮ ಕೈ ಗೊಳ್ಳಲಾಗುವುದು ಎಂದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಡಾ.ಕೆ.ಜೆ. ಕಾಂತರಾಜ್, ಚುನಾವಣೆ ತಹಸೀಲ್ದಾರ್ ಬೀಬೀ -Áತೀಮಾ ಇತರರು ಇದ್ದರು.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ
ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದ್ದು, ಅ.೬ ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ. ೭ರಂದು ನಾಮಪತ್ರ ಪರಿಶೀಲನೆ, ೨೩ ರಂದು ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ೩೩ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಡಿಸಿ ತಿಳಿಸಿದರು.
ಈ ಹಿಂದೆ ಜಿಲ್ಲೆಯಲ್ಲಿ ೨೨ ಮತಗಟ್ಟೆಗಳಿದ್ದವು. ಈಗ ಹೆಚ್ಚುವರಿಯಾಗಿ ೩೩ನ್ನು ಸ್ಥಾಪಿಸಲಾಗಿದೆ. ಒಟ್ಟು ಮತಗಟ್ಟೆಗಳ ಸಂಖ್ಯೆ ೫೫ಕ್ಕೆ ಏರಿಕೆಯಾಗಿದೆ. ಪದವಿಧರ ಕ್ಷೇತ್ರದ ಮತಪಟ್ಟಿ ಪರಿಷ್ಕರಣೆ ವೇಳೆ ಹೊಸದಾಗಿ ಹೆಸರು ಸೇರಿಸಲು ೨,೪೧೮ ಜನರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ೨,೩೯೧ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ೨೭ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ೨೬ ಅರ್ಜಿದಾರರ ಹೆಸರು ಎರಡು ಕಡೆ ಇರುವ ಕಾರಣ, ಒಂದು ಅರ್ಜಿ ಪದವಿ ಮುಗಿದು ೩ ವರ್ಷ ಪೂರ್ಣಗೊಳ್ಳದ ಕಾರಣಕ್ಕಾಗಿ ತಿರಸ್ಕೃತಗೊಂಡಿವೆ.
ಪದವಿಧರ ಕ್ಷೇತ್ರಕ್ಕೆ ಸಂಬಂಽಸಿದಂತೆ ಜಿಲ್ಲೆಯಲ್ಲಿ ೨೪,೦೩೧ ಪುರುಷ, ೧೭,೩೨೭ ಮಹಿಳಾ ಮತದಾರರು ಸೇರಿ ೪೧,೩೫೮ ಮತದಾರರು ಇದ್ದಾರೆ. ೨೭ರಂದು ಮತ ಎಣಿಕೆ ನಡೆಯಲಿದ್ದು, ೩೧ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಽಕಾರಿ ತಿಳಿಸಿದರು.
೪ರಂದು ಕೇಂದ್ರ ತಂಡ
ಬರಪೀಡಿತ ಪ್ರದೇಶಗಳ ಪರಶೀಲನೆಗೆ ಕೇಂದ್ರ ತಂಡ ಅ.೪ರಂದು ಜಿಲ್ಲೆಗೆ ಆಗಮಿಸಲಿದೆ. ಮೊದಲ ಹಂತದಲ್ಲಿ ಬರಪೀಡಿತ ತಾಲೂಕುಗಳು ಎಂದು ಘೋಷಣೆ ಆಗಿದ್ದ ಮೂರು ತಾಲೂಕುಗಳ ಪೈಕಿ ಹಿರಿಯೂರು, ಚಳ್ಳಕೆರೆ ತಾಲೂಕುಗಲ್ಲಿ ಪರಿಶೀಲನೆ ನಡೆಸುವ ತಂಡ ನಂತರ ದಾವಣಗೆರೆಗೆ ತೆರಳಲಿದೆ ಎಂದು ಡಿಸಿ ಮಾಹಿತಿ ನೀಡಿದರು.
ಎಸ್‌ಐಆರ್ ಪೂರ್ಣಗೊಂಡ ಬಳಿಕವೇ ಹಿರಿಯೂರು ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ ಇದೆ ಎಂದು ತಿಳಿಸಿದರು.
...ಕೋಟ್..
ಮತದಾರರ ಪಟ್ಟಿಯ ಶುದ್ಧೀಕರಣ ಹಾಗೂ ಪರಿಶೀಲನೆ ಸಂದರ್ಭದಲ್ಲಿ ಅರ್ಹ ಮತದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಪ್ರತಿ ಹಂತದಲ್ಲೂ ರಾಜಕೀಯ ಪಕ್ಷಗಳ ಪ್ರತಿನಿಽಗಳೊಂದಿಗೆ ಪಾರದರ್ಶಕವಾಗಿ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ.
|ಬಿ.ಟಿ. ಕುಮಾರಸ್ವಾಮಿ, ಎಡಿಸಿ.