ಚಿತ್ರದುರ್ಗದಲ್ಲಿ ಗುರುವಾರ ಜರುಗಿದ ಜಿಲ್ಲಾ ಪ್ರವಾಸೋದ್ಯ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಡಿಸಿ ಟಿ. ವೆಂಕಟೇಶ್, ಬಿ.ಟಿ. ಕುಮಾರಸ್ವಾಮಿ, ದಿವಾಕರ್, ಎನ್. ಮಂಜುನಾಥ ರೆಡ್ಡಿ, ಪಿ. ಸುದೀರ್, ಬಿ.ಎಸ್. ಹರೀಶ್‌ಕುಮಾರ್ ಮತ್ತಿತರರು ಇದ್ದರು. 
ಚಿತ್ರದುರ್ಗ

ಕೋಟೆ ಸಮೀಪ ೧೦ ಕೋಟಿ ರೂ.ವೆಚ್ಚದಲ್ಲಿ ವಸ್ತು ಸಂಗ್ರಹಾಲಯ

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತಾವನೆಗೆ ಜಿಲ್ಲಾಽಕಾರಿ ಟಿ.ವೆಂಕಟೇಶ್ ನಿರ್ದೇಶನ
  • ಜಿಲ್ಲಾ ಪ್ರವಾಸೋದ್ಯಮ ಅಭಿವÊದ್ಧಿ ಸಮಿತಿ ಸಭೆ
  • ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ
ಚಿತ್ರದುರ್ಗ: ನಗರದ ಕೋಟೆ ಸಮೀಪ ಫಿಲ್ಟರ್‌ಹೌಸ್ ಬಳಿ ೧೦ ಕೋಟಿ ರೂ.ವೆಚ್ಚದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಪುರಾತತ್ವ ಇಲಾಖೆ ಅಽಕಾರಿಗಳಿಗೆ ಡಿಸಿ ಟಿ. ವೆಂಕಟೇಶ್ ನಿರ್ದೇಶಿಸಿದರು.
ಜಿಲ್ಲಾಽಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪೂರಕವಾಗಿ ಈ ವಸ್ತು ಸಂಗ್ರಹಾಲಯ ನಿರ್ಮಾಣ ಅಗತ್ಯವಿದೆ ಎಂದರು.
ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಶೌಚಗೃಹ ಸಹಿತ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಡಿಎಂಎ-ï ಅನುದಾನ ಒದಗಿಸಲಾಗುವುದು. ಶೀಘ್ರದಲ್ಲೇ ಡಿಪಿಆರ್ ಸಿದ್ಧಪಡಿಸುವಂತೆ ಪ್ರವಾಸೋದ್ಯಮ ಅಽಕಾರಿಗಳಿಗೆ ಸೂಚಿಸಿದರು.
ಹೊಳಲ್ಕೆರೆ ತಾಲೂಕಿನ ಹೊರಕೆದೇವರಪುರದ ಶ್ರೀ ಲಕ್ಷಿ÷್ಮÃನರಸಿಂಹ ದೇವಸ್ಥಾನ ಹಾಗೂ ಸಾಸಲು ಭೂತಪ್ಪನ ದೇವಸ್ಥಾನದ ಬಳಿ ನಿರ್ಮಿಸಿರುವ ಯಾತ್ರಿ ನಿವಾಸಗಳ ನಿರ್ವಹಣೆಯನ್ನು ಅರ್ಹ ಸಂಸ್ಥೆಗಳಿಗೆ ಹಸ್ತಾಂತರಿಸುವAತೆ ನಿರ್ದೇಶಿಸಿದರು.
ಹಿರಿಯೂರು ತಾಲೂಕು ವಿವಿ ಸಾಗರ ಮಾರಿಕಾಂಬ ದೇವಾಲಯ ಬಳಿ ನಿರ್ಮಿಸಿರುವ ೧೦ ವಾಣಿಜ್ಯಮಳಿಗೆ, ಪಾರ್ಕ್, ಸಾರ್ವಜ ನಿಕ ಶೌಚಗೃಹವನ್ನು ಶ್ರೀ ಕಣಿವೆ ಮಾರಮ್ಮ ದೇವಿ ದೇವಸ್ಥಾನ ಸಮಿತಿಗೆ ಹಸ್ತಾಂತರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿ ತು.
ವಿ.ವಿ.ಸಾಗರ ಹಾಗೂ ಚಂದ್ರವಳ್ಳಿಯಲ್ಲಿ ಜಲ ಕ್ರೀಡೆಗಳು ಹಾಗೂ ಪ್ರವಾಸೋದ್ಯಮಕ್ಕೆ ಇಂಬು ನೀಡುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾ ಸೋದ್ಯಮ ನೀತಿ ರೂಪಿಸಲಾಗಿದೆ. ಈಗಾಗಲೇ ವಿವಿಸಾಗರ ಹಿನ್ನೀರಿನಲ್ಲಿ ಜನರಲ್ ತಿಮ್ಮಯ್ಯ ರಾಷ್ಟಿçÃಯ ಸಾಹಸ ಅಕಾಡೆ ಮಿಯಿಂದ ಜಲಕ್ರೀಡೆಗಳನ್ನು ನಡೆಸಲಾಗುತ್ತದೆ. ಇದಕ್ಕೆ ಕ್ರಮಬದ್ಧ ಅನುಮತಿ ಕುರಿತು ಪರಿಶೀಲನೆ ನಡೆಸಲು ಸಮಿತಿ ರಚಿಸಬೇಕು.
ಚಂದ್ರವಳ್ಳಿಯಲ್ಲಿರುವ ಐತಿಹಾಸಿಕ ದವಳಪ್ಪನ ಬೆಟ್ಟದ ಅಭಿವೃದ್ಧಿಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಅನುದಾನ ನೀಡು ವುದಾಗಿ ತಿಳಿಸಿದ್ದಾರೆ. ಆದ್ದರಿಂದ ಬೆಟ್ಟದ ಅಭಿವÊದ್ಧಿಗೆ ಶೀಘ್ರವೇ ಯೋಜನೆ ರೂಪಿಸಬೇಕಿದೆ ಎಂದು ಡಿಸಿ ಸೂಚಿಸಿದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಽಕಾರಿ ದಿವಾಕರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎನ್. ಮಂಜುನಾಥರೆಡ್ಡಿ, ಪುರಾತತ್ವ ಇಲಾಖೆ ಪಿ. ಸುದೀರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಬಿ.ಎಸ್. ಹರೀಶ್‌ಕುಮಾರ್ ಮತ್ತಿತರ ಅಽಕಾರಿಗಳು ಇದ್ದರು.