- ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಾಂಪಿಟೇಷನ್
- ಪ್ರತ್ಯೇಕ ೫ ವಿಭಾಗಳಲ್ಲಿ ಜಯಶಾಲಿಗಳಾದ ತಲಾ ಮೂವರು
- ಬಸವ ಜಯಂತಿ
ಚಿತ್ರದುರ್ಗ : ಬಸವ ಜಯಂತಿ ಅಂಗವಾಗಿ ಮುರುಘಾಮಠದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಸ್ಪಽðಗಳು ಭಾಗವಹಿಸಿದ್ದರು.
ಪ್ರತ್ಯೇಕ ಐದು ವಿಭಾಗಳಲ್ಲಿ ಸ್ಪರ್ಧೆ ಜರುಗಿತು. ಮಾಧ್ಯಮಿಕ ತರಗತಿ ಹಂತದ ವಿಭಾಗದಲ್ಲಿ ವಿಶ್ವಗುರು ಬಸವಣ್ಣ ನನಗೇಕೆ ಇಷ್ಟ ವಿಷಯದ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಕೊಳಾಳ್ ಅರುಣೋದಯ ವಿದ್ಯಾಸಂಸ್ಥೆಯ ಎಲ್. ಯಶಸ್ವಿನಿ(ಪ್ರ), ಹೊಸದುರ್ಗ ಎಸ್‌ಎನ್‌ಐಎಸ್ ಶಾಲೆಯ ಎಚ್.ಎನ್. ನಲ್ಮೆ (ದ್ವಿ)ಹಾಗೂ ದಾವಣಗೆರೆ ಎಸ್‌ಜೆಎಂ ಆಂಗ್ಲಮಾಧ್ಯಮ ಶಾಲೆಯ ಪಿ.ಬಿ. ನಿಖಿತಾ ತೃತೀಯ ಸ್ಥಾನ ಗಳಿಸಿದ್ದಾರೆ.
ಪ್ರೌಢಶಾಲೆ-ಬಸವಣ್ಣನವರ ಮೌಢ್ಯ ವಿರೋಧ ನಿಲುವು: ದಾವಣಗೆರೆ ಜಿಲ್ಲೆ ಕಕ್ಕರಗೊಳ್ಳ ಸರ್ಕಾರಿ ಪ್ರೌಢಶಾಲೆಯ ಕೆ.ಆರ್. ವೇದಾ(ಪ್ರ), ದಾವಣಗೆರೆ ಎಸ್‌ಜೆಎಂ ಪ್ರೌಢಶಾಲೆಯ ಎನ್. ಲೀಲಾವತಿ (ದ್ವಿ)ಮತ್ತು ಚಿತ್ರದುರ್ಗ ಇಂಡಿಯನ್ ಇಂಟ ರ್ ನ್ಯಾಷನಲ್ ಸ್ಕೂಲ್‌ನ ಎಚ್.ವಿ.ಅನನ್ಯ(ತÊ).
ಪಿಯುಸಿ, ಡಿಪ್ಲೋಮಾ-ಬಸವಣ್ಣನವರ ಸಮ ಸಮಾಜ: ಚಿತ್ರದುರ್ಗ ಎಸ್‌ಜೆಎಂ ಪ.ಪೂ. ಕಾಲೇಜಿನ ಅರ್ಚನಾ(ಪ್ರ), ಚಾಮರಾಜ ನಗರ ಜಿಲ್ಲೆ ಮರಿಯಾಲ ಎಸ್‌ಜೆಎಂ ಕಾಲೇಜಿನ ದೀಪಿಕಾ(ದ್ವಿ)ಹಾಗೂ ಭರಮಸಾಗರದ ಸಿ.ಜೆ. ವೀರೇಶ (ತೃ).
ಪದವಿ-ಸಮಕಾಲೀನ ಶರಣರು ಕಂಡ ಬಸವಣ್ಣ:ಹಾವೇರಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಬಸವಣ್ಣೆಮ್ಮ
ಕಾಡಪ್ಪನವರ್(ಪ್ರ), ವಿಜಯಪುರ ಎಆರ್‌ಎಸ್ ಇನಾಮದಾರ ಮಹಾವಿದ್ಯಾಲಯದ ಕೀರ್ತಿ ಆರಾಣಿ(ದ್ವಿ), ಹಾವೇರಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಯದ ಕಾವೇರಿ ಪ. ಹಳ್ಳದ (ತೃ).
ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಬಸವಣ್ಣನವರ ಚಿಂತನೆಗಳಲ್ಲಿ ಭಾರತೀಯ ಸಂವಿಧಾನ ವಿಷಯದ ಕುರಿತ ಪ್ರಬಂಧ ಸ್ಪರ್ಧೆ ಯಲ್ಲಿ ಮೈಸೂರಿನ ಬೂದೇಶ ಬಸಪ್ಪ ಮಜ್ಜಿಗುಡ್ಡ (ಪ್ರ), ಕೊಪ್ಪಳದ ಮೋನಿಕಾ(ದ್ವಿ)ಮತ್ತು ಚಿತ್ರದುರ್ಗ ಸರಸ್ವತಿ ಕಾನೂನು ಮಹಾವಿದ್ಯಾಲಯದ ಕಿರಣ್‌ಕುಮಾರ್ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.