ಚಿತ್ರದುರ್ಗದಲ್ಲಿ ಸೋಮವಾರ ವಿದ್ಯಾರ್ಥಿಗಳ ಕಲಿಕೆಗೆ ನಿರ್ಣಯ ಮತ್ತು ಮೌಲ್ಯಮಾಪನ ತಂತ್ರಗಳ ಕುರಿತ ಕಾರ್ಯಾಗಾರದಲ್ಲಿ ಪ್ರೊ.ಎಸ್.ಆರ್.ನಿರಂಜನ್, ಡಾ. ಬಸವಕುಮಾರ ಸ್ವಾಮೀಜಿ, ಪ್ರೊ.ಕೆ.ಬಿ. ಗುಡಸಿ,ಪ್ರೊ.ಎಚ್. ಕೇಶವ, ಮಹೇಶ್ ಮಾಸಾಳ್, ಡಾ. ಗಣಾಚಾರಿ ಇತರರು ಇದ್ದರು.
- ಪ್ರೊ. ನಿರಂಜನ್ ಅಭಿಪ್ರಾಯ
- ಕಲಿಕೆಗಾಗಿ ನಿರ್ಣಯ,
- ಮೌಲ್ಯಮಾಪನ ತಂತ್ರಗಳ ಕುರಿತ ಕಾರ್ಯಾಗಾರ
ಚಿತ್ರದುರ್ಗ: ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಬಹುಶಿಸ್ತೀಯ ಅಧ್ಯಯನ ಅಳವಡಿಸಿಕೊಳ್ಳುವ ಮೂಲಕ ಕಲಿಕೆ ವಿಸ್ತರಿಸಿ ಅಗತ್ಯವಿರುವ ನಾನಾ ತರಹದ ಕೌಶಲಗಳನ್ನೂ ಕಲಿಸಬೇಕಾಗಿದೆ ಎಂದು ರಾಜ್ಯ ಉನ್ನತ ಶಿP್ಷÀಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ್ ಹೇಳಿದರು.
ಶಿವಮೊಗ್ಗದ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ, ರಾಜ್ಯ ಉನ್ನತ ಶಿP್ಷÀಣ ಪರಿಷತ್, ಪಿಎಂ ಉ ಷಾ ಯೋಜನೆ(ರುಸಾ), ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ಚಿತ್ರದುರ್ಗ,ದಾವಣಗೆರೆ ಜಿ¯್ಲೆಗಳ ಸ ರ್ಕಾರಿ,ಅನುದಾನಿತ, ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರಿಗೆ, ಚಿತ್ರದುರ್ಗದ ಎಸ್‌ಜೆಎಂ ದಂತ ವೈದ್ಯ ಕೀಯ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಪ್ರಾದೇಶಿಕ ಮಟ್ಟದ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ `ವಿದ್ಯಾರ್ಥಿಗಳ ಕಲಿಕೆಗಾಗಿ ನಿರ್ಣಯ ಮತ್ತು ಮೌಲ್ಯಮಾಪನ ತಂತ್ರಗಳ ಕುರಿತ' ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತ ನಾಡಿದರು.
ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ, ಅಧ್ಯಯನಗಳಿಂದ ರೂಪಿಸಿದ ಪಠ್ಯಗಳನ್ನು ಬೋಽಸಬೇಕಿದೆ. ಎಲ್ಲ ಹಾಗಾದಾಗ ಮಾತ್ರ ಅಧ್ಯಯನ ಪೂರೈಸುವ ಪದವೀಧರರು ಜಗತ್ತನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಲಿದೆ. ಏಕಶಿಸ್ತೀಯ ಬದಲು ಬಹುಶಿಸ್ತೀಯ ಪಠ್ಯ ಬೋಧನೆ, ಕೌಶಲ ಕಲಿಸುವುದು ಅಗತ್ಯವಿದೆ ಎಂದರು.
ದೇಶದ ಬಡತನದ ನಿವಾರಣೆ, ೨೦೩೫ರ ತನಕ ಅಹಾರ ಭದ್ರತೆ ರಕ್ಷಣೆಗೆ ತಂತ್ರe್ಞÁನ ಅಭಿವೃದ್ಧಿ ಆಗಿದ್ದರೂ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಶಿಕ್ಷಣ ಕಲಿಸುವಲ್ಲಿ ಹಿಂದೆ ಬಿದ್ದಿz್ದÉÃವೆ. ಬೋಧನೆ ಸÊಜನಶೀಲತೆ, ಕೌಶಲಗಳನ್ನು ಒಳಗೊಂಡಿರಬೇಕು. ಪ್ರತಿಯೊಬ್ಬರೂ ಸಾಮಾನ್ಯ e್ಞÁನ ಹೊಂದಿರ ಬೇಕಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಶಿP್ಷÀಣದಲ್ಲಿ ಬಹುಶಿಸ್ತೀಯ ಅಧ್ಯಯನ ಮತ್ತು ಅಂತರಶಿಸ್ತೀಯ ಅಧ್ಯಯನಗಳಿರಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳ ಜವಾಬ್ದಾರಿ ಬಹಳ ಮುಖ್ಯ. ಕಲಿಕೆಯ ಸನ್ನಿವೇಶ, ಸಂದರ್ಭಗಳನ್ನು ಅನುಸರಿಸಿ ಬೋಽಸುವ ಜವಾಬ್ದಾರಿ ಅಧ್ಯಾಪಕರ ಮೇಲಿದೆ ಎಂದರು.
ಎಸ್‌ಜೆಎA ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅವರು ಮಾತನಾಡಿ, ಕಲಿಕಾ ಅಧ್ಯಯನಗಳು ಯಾವ ರೀತಿಯಲ್ಲಿ ಕೌಶಲಗಳನ್ನು ಒಳಗೊಂಡಿರಬೇಕು. ಅವುಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಮಾರ್ಗದ ಕುರಿತು ಮಾತನಾಡಿದರು.
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಎಚ್. ಕೇಶವ ಅಧ್ಯP್ಷÀತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಮಹೇಶ ಮಾಸಾಳ್, ವಿದ್ಯಾರ್ಥಿಗಳ ಕಲಿಕೆಗೆ ಮೌಲ್ಯಮಾಪನ ಮತ್ತು ಮೌಲ್ಯಮಾಪನ ತಂತ್ರಗಳು ಕುರಿತು ಮಾತನಾಡಿದರು.
ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಸಚಿವ ಡಾ. ಗಣಾಚಾರಿ, ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ.ಎಲ್. ಈಶ್ವರಪ್ಪ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಿ.ಟಿ. ಜಯಣ್ಣ, ಐಕ್ಯೂಎಸಿ ಸಂಚಾಲಕ ಪ್ರೊ.ಎಂ.ಎಸ್. ಪರಮೇಶ್ವರ್ ಇದ್ದರು. ಲಾವಣ್ಯ ಮತ್ತು ಬಿಂಧು ಪ್ರಾರ್ಥಿಸಿದರು. ಡಾ.ವಿ. ನವೀನ್ ಸ್ವಾಗತಿಸಿ, ಬಿ.ವೈ. ಶ್ವೇತಾ ನಿರೂಪಿಸಿದರು.