ಸಂಸದ ಗೋವಿಂದ ಎಂ.ಕಾರಜೋಳ  
ಚಿತ್ರದುರ್ಗ

ಬೀದಿ ವ್ಯಾಪಾರಿಗಳ ಮೇಲಿನ ದೌರ್ಜನ್ಯಕ್ಕೆ ಸಂಸದ ಖಂಡನೆ

ಪ್ರಮುಖ ಮುಖ್ಯಾಂಶಗಳು

  • ಬುಲ್ಡೋಜರ್‌
  • ಆತ್ಮಾವಲೋಕನ
  • ಕಾಂಗ್ರೆಸ್ ಸರ್ಕಾರ

ಚಿತ್ರದುರ್ಗ:

ರಾಜ್ಯ ಸರ್ಕಾರ ಬೆಂಗಳೂರಿನ ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳ ಬದುಕಿನ ಆಧಾರವನ್ನೇ ಕಸಿದುಕೊಳ್ಳಲು ಮುಂದಾಗಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಆರೋಪಿಸಿದ್ದಾರೆ.

ಬೆಂಗಳೂರಲ್ಲಿ ಬೀದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅನ್ಯಾಯಗಳನ್ನು ನೋಡಿದಾಗ, ೧೯೭೬ರಲ್ಲಿ ಹೊಸ ದಿಲ್ಲಿಯಲ್ಲಿ ನಡೆದ ತುರ್ಕ್ಮನ್ ಗೇಟ್ ಘಟನೆ ನೆನಪು ಬರುತ್ತದೆ. ಅಂದಿನ ಪ್ರಧಾನಿ ಇಂದಿರಾಗಾಂಽ ಅವರ ಪುತ್ರ ಸಂಜಯ್‌ಗಾಂಽ, ಅಂದಾ ಜು ೨೫ಸಾವಿರ ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ತೆರವುಗೊಳಿಸಿ ಲಕ್ಷಾಂತರ ಕುಟುಂಬಗಳನ್ನು ನಿರಾಶ್ರಿತ ರನ್ನಾಗಿ ಮಾಡಿದ್ದು, ಆ ಸಂದರ್ಭದಲ್ಲಿ ನಡೆದ ಅನ್ಯಾಯವನ್ನು ದೇಶ ಮರೆತಿಲ್ಲ.
ಇಂದು ಬೆಂಗಳೂರಲ್ಲಿ ಬೀದಿ ವ್ಯಾಪಾರಿಗಳ ಮೇಲೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ದೌರ್ಜನ್ಯವೂ ಅದೇ ರೀತಿ ಯ ನೋವನ್ನು ಉಂಟು ಮಾಡಿದೆ. ರಾಜ್ಯಸರ್ಕಾರದ ಈ ಕ್ರಮ ಅಂದಾಜು ೧೦ಲಕ್ಷ ಬಡವರ ಜೀವನೋಪಾಯದ ಮೇಲೆ ಹೊಡೆತ ಕೊಟ್ಟಿದೆ.
ಕಾಂಗ್ರೆಸ್‌ಗೆ ಮತ ಬೇಕಾದಾಗ ದಲಿತರು, ಬಡವರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ನೆನಪಾಗುತ್ತಾರೆ. ಸುಳ್ಳು ಭರವಸೆ ಗಳನ್ನು ಕೊಟ್ಟು ಅಽಕಾರಕ್ಕೆ ಬಂದಿರುವ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಬೀದಿ ವ್ಯಾಪಾರಿಗಳಲ್ಲಿ ಶೇ.೬೦ ಮಹಿಳೆಯರಿದ್ದಾರೆ. ಇವರಲ್ಲಿ ಅನೇಕರು ರೈತ ಕುಟುಂಬದವರಾಗಿದ್ದು, ಹೊಲಗಳಲ್ಲಿ ಬೆಳೆದ ತರ ಕಾರಿ, ಹಣ್ಣುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕರ್ನಾಟಕದಲ್ಲೂ ಪಿಎಂ ಸ್ವನಿಽ ಯೋಜನೆಯಡಿ ೩ ಲಕ್ಷ -Àಲಾ ನುಭವಿಗಳು ಪ್ರಯೋಜನ ಪಡೆದಿದ್ದಾರೆ. ಇದದೊಂದಿಗೆ ಮೋದಿ ಸರ್ಕಾರ ಬೀದಿ ವ್ಯಾಪಾರಿಗಳಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದ ಗಿಸುತ್ತಿದೆ.
ಈ ವ್ಯಾಪಾರಿಗಳಲ್ಲಿ ಶೇ.೫೦ ಜನರು ಎಸ್‌ಸಿ,ಎಸ್‌ಟಿ,ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ್ದಾರೆ.

ಈ ದೌ ರ್ಜನ್ಯ ಇದೇ ರೀತಿ ಮುಂದುವರಿದರೆ ಬಡವರು ತಮಗೆ ಬುದ್ಧಿ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರನ್ನು ಎಚ್ಚರಿಸಿದ್ದಾರೆ. ಬೀದಿ ವ್ಯಾಪಾರಿಗಳ ಮೇಲಿನ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.