ವೈದ್ಯರ ನಿರ್ಲಕ್ಷದಿಂದ ಬಾಣಂತಿ ಸಾವು ಸಂಭವಿಸಿದೆ ಎಂದು ಆರೋಪಿಸಿ ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವಿಭಾಗದಲ್ಲಿ ಮಂಗಳವಾರ ಮೃತ ಶಿಲ್ಪಾ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.
- ವೈದ್ಯರ ನಿರ್ಲಕ್ಷ ಕಾರಣವೆಂದು ಆರೋಪ
- ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟನೆ
- ತನಿಖೆ ನಡೆಸಿ ಸೂಕ್ತ ಕ್ರಮ
ಚಿತ್ರದುರ್ಗ : ನಗರದ ಜಿ¯್ಲÁಸ್ಪತ್ರೆ ಆವರಣದ ತಾಯಿ ಮತ್ತು ಮಗು ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದ ಚಳ್ಳಕೆರೆ ತಾಲೂಕಿನ ಬೊಮ್ಮನಕುಂಟೆ ಗ್ರಾಮದ ಬಾಣಂತಿ ಶಿಲ್ಪಾ (೨೮) ಶಿಶುವಿಗೆ ಜನ್ಮನೀಡಿ ಮಂಗಳವಾರ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ ಕಾರಣವೆಂದು ಆರೋಪಿಸಿ ಕುಟುಂಬಸ್ಥರು, ಸಂಬAಽಕರು ಆಸ್ಪತ್ರೆಯಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಹೆರಿಗೆ ಮಾಡಿಸುವಲ್ಲಿ ಮಾಡಿದ ವಿಳಂಬ ಸಾವಿಗೆ ಕಾರಣವಾಗಿದೆ. ಮಗುವಿನ ಆರೋಗ್ಯದ ಕುರಿತು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆರಿಗೆ ಆದಾಗ ತಾಯಿ-ಮಗುವಿನ ಆರೋಗ್ಯ ಸ್ಥಿತಿ ಚೆನ್ನಾಗಿತ್ತು. ಆನಂತರ ಸಾವು ಸಂಭವಿಸಿದೆ ಎಂದು ಜಿಲ್ಲಾಸ್ಪತ್ರೆಯ ಡಿಎಸ್ ಸಮಜಾಯಿಷಿ ನೀಡಿದರೂ ಕುಟುಂಬಸ್ಥರು ಒಪ್ಪಲಿಲ್ಲ.
ಶಿಶುವಿನ ಆರೋಗ್ಯದಲ್ಲೂ ಏರುಪೇರಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಇದೆ.
ಈ ಕುರಿತು ವಿಜಯವಾಣಿಗೆ ಪ್ರತಿಕ್ರಿಯಿಸಿದ ಜಿ¯್ಲÁ ಶಸöಚಿಕಿತ್ಸಕ ಡಾ. ರವೀಂದ್ರ, ಶಿಲ್ಪಾ ಅವರನ್ನು ತಡವಾಗಿ ಹೆರಿಗೆಗೆ ಕರೆ ತಂದಿz್ದÁರೆ. ಹೆರಿಗೆ ನಂತರ ಉಸಿರಾಟ ತೊಂದರೆಯಿAದ ಸಾವು ಸಂಭವಿಸಿದೆ. ಸಾವಿರ, ಲಕ್ಷಕ್ಕೊಂದು ಇಂತಹ ಪ್ರಕರಣ ಸಂಭವಿಸುವುದುAಟು. ಅಽಕ ರಕ್ತದೊತ್ತಡ, ಹೃದಯ ಸಂಬAಽ ಸಮಸ್ಯೆ, ಬ್ರೇನ್ ಸ್ಟೊçÃಕ್ ಆಗಿ ಸಾವು ಸಂಭವಿಸಿದೆಯೇ ಎಂಬ ಕುರಿತೂ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ವೈದ್ಯರ ವಿರುದ್ಧ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಶಿಲ್ಪಾಗೆ ಹೆಣ್ಣು ಮಗು ಜನಿಸಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಶಿಲ್ಪಾ ಸಾವು ಸಂಭವಿಸಿದ್ದು, ಹೆರಿಗೆಗೆ ಹಣ ನೀಡಿಲ್ಲವೆಂದು ನಿರ್ಲಕ್ಷ ತೋರಿದ ವೈದ್ಯರು, ಶುಶ್ರೂಷ ಕರನ್ನು ಕೂಡಲೇ ಅಮಾನತುಗೊಳಿಸಿ ತನಿಖೆ ಕೈಗೊಳ್ಳುವಂತೆ, ಎ-ïಐಆರ್ ದಾಖಲಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಕರು ನಾಡ ವಿಜಯಸೇನೆ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಮಂಗಳವಾರ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿ ದರು. ವಿಜಯಸೇನೆ ಜಿ¯್ಲÁಧ್ಯಕ್ಷ ಕೆ.ಟಿ. ಶಿವಕುಮಾರ್, ಮಹಿಳಾ ಅಧ್ಯಕ್ಷೆ ವೀಣಾ ಗೌರಣ್ಣ, ಬೀರಾವರ ಪ್ರಕಾಶ್, ಮೃತ ಶಿಲ್ಪಾ ಸಂಬAಽಕರು ಇದ್ದರು.