ಮಾಸಿಕ ವೇತನ ಹೆಚ್ಚಳ ಸೇರಿ ಹತ್ತಾರು ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಜಿಲ್ಲಾ ಸಂಘ, ಅಂಗನವಾಡಿಗಳ ನೂರಾರು ಕಾರ್ಯಕರ್ತೆಯರು ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. 
ಚಿತ್ರದುರ್ಗ

ಮಾಸಿಕ ವೇತನ ೭ ಸಾವಿರ ರೂ.ವೇತನ ಹೆಚ್ಚಳಕ್ಕೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಬಿಸಿಯೂಟ ಯೋಜನೆ ಖಾಸಗೀಕರಣಕ್ಕೆ ವಿರೋಧ
  • ರಾಜ್ಯ ಅಕ್ಷರ ದಾಸೋಹ ನೌಕರರ ಜಿಲ್ಲಾ ಸಂಘದ ಕಾರ್ಯಕರ್ತೆಯರಿಂದ ಪ್ರತಿಭಟನೆ
  • ಕನಿಷ್ಠ ವೇತನಕ್ಕೆ ಆಗ್ರಹ
ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಆಶ್ವಾಸನೆಯಂತೆ ಬಿಸಿಯೂಟ ನೌಕರರಿಗೆ ೭ ಸಾವಿರ ರೂ. ವೇತನ ಹೆಚ್ಚಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಜಿಲ್ಲಾ ಸಂಘ, ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಕಚೇರಿ ಆವರಣದೊಳಗೆ ನುಗ್ಗಲು ಪ್ರಯತ್ನಿಸಿದ ಅವರನ್ನು ಪೊಲೀ ಸರು ತಡೆದರು. ಎರಡು ತಾಸು ರಸ್ತೆ ತಡೆ ನಡೆಸಿ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ತಮ್ಮ ಹತ್ತಾರು ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿ, ಜಿ¯್ಲÁಡಳಿತದ ಮೂಲಕ ಮನವಿ ರವಾನಿಸಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಗೈರು ತಡೆಯಲು, ಗ್ರಹಿಕಾ ಶಕ್ತಿ ಹೆಚ್ಚಿಸಲು ಅಕ್ಷರ ದಾಸೋಹ ಯೋಜನೆ ಜಾರಿಯಾಗಿದೆ. ಆದರೆ, ಬೆಲೆ ಏರಿಕೆ ಆಧರಿಸಿ ಅಗತ್ಯದಷ್ಟು ಅನುದಾನ ಹೆಚ್ಚಿಸದೆ ಇಸ್ಕಾನ್ ಸೇರಿ ಖಾಸಗಿ ಸಂಸ್ಥೆಗಳಿಗೆ ವಹಿಸುವ ಮೂಲಕ ಬಿಸಿಯೂಟ ಯೋಜನೆಯನ್ನು ಬಲಹೀನಗೊಳಿಸಲು ಸರ್ಕಾರ ಮುಂದಾಗಿದೆ.
ಯಾವ ಕಾರಣಕ್ಕೂ ಇದು ಆಗಬಾರದು ಎಂದು ಆಗ್ರಹಿಸಿದರು. ಕೆಲಸದ ಅವಽಯನ್ನು ೬ ಗಂಟೆಗೆ ನಿಗದಿಗೊಳಿಸಿ ಸುತ್ತೋಲೆ ಹೊರಡಿಸಬೇಕು. ಆರೋಗ್ಯ ವಿಮೆ ಜಾರಿಗೊಳಿಸಬೇಕು. ಕೆಲಸದ ಭದ್ರತೆ ಒದಗಿಸಬೇಕು. ಯೋಜನೆಗೆ ಅನುದಾನ ಹೆಚ್ಚಿಸಬೇಕು. ಮಾಸಿಕ ಪಿಂಚಣಿ ೧೦ ಸಾವಿರ ರೂ. ನೀಡಬೇಕೆಂದು ಒತ್ತಾಯಿಸಿದರು.
ಸಾದಿಲ್ವಾರು ಖಾತೆ ಮೊದಲಿನಂತೆಯೇ ಜಾರಿಯಾಗಬೇಕು. ನಿವೃತ್ತಿ ಹೊಂದಿದ ಅಂಗನವಾಡಿ ನೌಕರರಿಗೆ ತಕ್ಷಣ ಇಡಿಗಂಟು ವಿತರಿಸಬೇಕು. ಸುಸಜ್ಜಿತವಿಲ್ಲದ ಕಡೆ ಗುಣಮಟ್ಟದ ಅಂಗನವಾಡಿ ಕೇಂದ್ರ, ಅಡುಗೆ ಕೋಣೆ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯದ ಹೈಕೋರ್ಟ್ ತೀರ್ಪಿನಂತೆ ವರ್ಷದ ೧೨ ತಿಂಗಳು ಕೆಲಸ, ಕನಿಷ್ಠ ವೇತನ ಜಾರಿ ಯಾಗಬೇಕು.
ಯೋಜನೆ ಸಂಪೂರ್ಣ ಜವಾಬ್ದಾರಿ ಶಿಕ್ಷಣ ಇಲಾಖೆಗೆ ವಹಿಸಬೇಕು. ಬೇಸಿಗೆ, ದಸರಾ ರಜೆ ಹಾಗೂ ಚುನಾವಣಾ ಸಂದರ್ಭದಲ್ಲಿ ವೇತನ ನೀಡಬೇಕೆಂದು ಒತ್ತಾಯಿಸಿದರು. ಶಾಲೆಗಳಲ್ಲಿ ಗ್ರೂಪ್ `ಡಿ' ನೌಕರರಿಲ್ಲದ ಕಾರಣ ಶಾಲಾ ಸ್ವಚ್ಛತೆ, ಕೈತೋಟ ನಿರ್ವ ಹಣೆ, ಗಂಟೆ ಬಾರಿಸುವುದು ಸೇರಿ ಇನ್ನಿತರ ಕೆಲಸಕ್ಕಾಗಿ ಬಿಸಿಯೂಟ ನೌಕರರಿಗೆ ಶಾಲಾ ಸಿಬ್ಬಂದಿಗಳೆAದು ಪರಿಗಣಿಸಿ ನೇಮಕಾತಿ ಆದೇಶ ನೀಡಬೇಕು. ಅಪಘಾತದಲ್ಲಿ ಮರಣ ಹೊಂದಿದ, ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿ ಕುಟುಂಬಕ್ಕೆ ಕೆಲಸ ನೀಡಬೇಕೆಂದು ಆಗ್ರಹಿಸಿದರು.
ಸಂಘದ ಜಿ¯್ಲÁಧ್ಯಕ್ಷ ಡಿ.ಎಂ. ಮಲಿಯಪ್ಪ ಮಾತನಾಡಿ, ಎಲ್ಲ ಅಂಗನವಾಡಿ ಕೇಂದ್ರಗಳಿಗೂ ಎಲ್‌ಕೆಜಿ, ಯುಕೆಜಿ ವಿಸ್ತರಿಸಬೇಕು. ೨೦೨೬ ಮಾ. ೨೪ರ ಸಭೆ ತೀರ್ಮಾನದಂತೆ ೧೦ ಸಾವಿರ ಕೇಂದ್ರಗಳಿಗೆ ಅನುದಾನ ನೀಡಬೇಕು. ೩ರಿಂದ ೬ ವರ್ಷದ ಮಕ್ಕ ಳಿಗೆ ಸಮವಸö, ಪುಸ್ತಕಗಳು ಮತ್ತು ಆಟಿಕೆಗಳನ್ನು ಒದಗಿಸಬೇಕು. ಬಿಎಲ್‌ಒ, ಎಸ್‌ಐಆರ್ ಹಾಗೂ ಇತರೆ ಸಮೀಕ್ಷಾ ಕೆಲಸ ಗಳಿಂದ ಅಂಗನವಾಡಿ ನೌಕರರು ಹಾಗೂ ಬಿಸಿಯೂಟ ತಯಾರಕರನ್ನು ಮುಕ್ತಗೊಳಿಸುವಂತೆ ಒತ್ತಾಯಿಸಿದರು.
ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರಾದರೂ ಅಡುಗೆ ಸಿಬ್ಬಂದಿ ಇರಬೇಕು. ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ ೨೫ ಲಕ್ಷ ರೂ. ಪರಿ ಹಾರ ನೀಡಬೇಕು. ಹಾಜರಾತಿ ಆಧಾರದಡಿ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಿಸುವಂತೆ ಕೋರಿದರು. ನಿಂಗಮ್ಮ, ಪಾರ್ವ ತಮ್ಮ, ವಿಜಯಮ್ಮ,ರತ್ನಮ್ಮ,ಕವಿತಾ, ತಿಪ್ಪೇಸ್ವಾಮಿ, ಅನುಸೂಯಮ್ಮ, ನಿರ್ಮಲಮ್ಮ, ಇಂದಿರಮ್ಮ, ಬಿ. ಬೋರಮ್ಮ, ಜೆ.ಎನ್. ಗಂಗಮ್ಮ, ಮಂಜುಳಾ, ಪುಟ್ಟಮ್ಮ,ಸಿ. ಜಯಮ್ಮ ಇತರರಿದ್ದರು.
ಕನಿಷ್ಠ ವೇತನಕ್ಕೆ ಆಗ್ರಹ
ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ೧೫ ಸಾವಿರ ರೂ., ಸಹಾಯಕಿಯರಿಗೆ ೧೦ ಸಾವಿರ ರೂ.ಕನಿಷ್ಠ ವೇತನ ನೀಡುವಂತೆ ಅಂಗನವಾಡಿ ಸಿಬ್ಬಂದಿ ಸರ್ಕಾರವನ್ನು ಒತ್ತಾಯಿಸಿದರು.