ಚಿತ್ರದುರ್ಗದಲ್ಲಿ ಮಂಗಳವಾರ ತಾಪಂ ತ್ರೆÊಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಮಂಜುನಾಥಸ್ವಾಮಿ, ವೈ. ರವಿಕುಮಾರ್, ಆರ್. ಶಿವಣ್ಣ, ಪ್ರಕಾಶ್, ಗೋವಿಂದ್‌ರಾಜ್,ನಾಗರಾಜ್, ಸಂತೋಷ್, ವಿಜಯ್‌ಕುಮಾರ್ ಇದ್ದರು.
- ಸಭೆಗೆ ಗೈರಾದ ಅಽಕಾರಿಗಳಿಗೆ ನೋಟಿಸ್
- ತಾಪಂ ತ್ರೆÊ ಮಾಸಿಕ ಕೆಡಿಪಿ ಮೀಟಿಂಗ್
- ವಿಮೆ ಸೌಲಭ್ಯ
ಚಿತ್ರದುರ್ಗ: ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರು ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಿಸುವಂತೆ ಮನವಿ ಸಲ್ಲಿಸಿದ್ದು, ಇದಕ್ಕೆ ಸಂಬ AಽಸಿದAತೆ ವರದಿ ಕೊಡುವಂತೆ ಕೃಷಿ ಅಽಕಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸೂಚಿಸಿದರು.
ಜಿಪಂನಲ್ಲಿ ಮಂಗಳವಾರ ತಾಪಂ ತ್ರೆÊಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಶೀಘ್ರ ವರದಿ ಸಲ್ಲಿಕೆಯಾದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಮೋಡ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳೋಣ ಎಂದರು.
ಚಿತ್ರದುರ್ಗ ತಾಲೂಕಿನ ೫೬ ಸಾವಿರ ಹೆಕ್ಟೇರ್ ಪೈಕಿ ೨೬ ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಬೆಳೆ ಸಮೀಕ್ಷೆ ಸಮರ್ಪಕವಾಗಿ ರಬೇಕು. ರೈತರಿಗೆ ವಿಮೆ ಸೌಲಭ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ರಸಗೊಬ್ಬರ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಎಂಆರ್‌ಪಿ ಮೀರಿ ಮಾರಾಟ ಮಾಡಿದರೆ ಅಂಥ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕೆಂದು ನಿರ್ದೇಶಿಸಿದರು. ಕ್ಷೇತ್ರದ ಹಲ ವು ಗ್ರಾಮಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಡಿಎಂಎಫ್‌ನಡಿ ಅಗತ್ಯವಿರುವೆಡೆ ಹೊಸದಾಗಿ ಶುದ್ಧ ಕುಡಿ ಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು.
ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿ ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾ ರರಿಗೆ ನೋಟಿಸ್ ನೀಡಬೇಕು. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆಗಾರರಿಗೆ ಬಿಲ್ ಪಾವತಿಸದಂತೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇ ಶಿವಮೂರ್ತಿ ಅವರಿಗೆ ಸೂಚಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಜನ್ ಡಾ.ಎಸ್.ಪಿ.ರವೀಂದ್ರ ಅವರಿಂದ ಮಾಹಿತಿ ಪಡೆದರು. ಬಡವರ ಆರೋಗ್ಯದೊಂದಿಗೆ ಚೆಲ್ಲಾಟ ಆಡುವುದನ್ನು ಸಹಿಸುವುದಿಲ್ಲ. ವೈದ್ಯಾಽಕಾರಿಗಳೇ ನಿಮ್ಮ ಮಾತನ್ನು ಕೇಳುವುದಿಲ್ಲ ಎಂದರೆ ಸಾಮಾನ್ಯರ ಜನರ ಗತಿ ಏನು ಎಂದು ರವೀಂದ್ರ ಅವರಿಗೆ ಎಚ್ಚರಿಕೆ ನೀಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು. ಆದರೆ, ಕೆಲ ವೈದ್ಯರು ಖಾ ಸಗಿ ಆಸ್ಪತ್ರೆಗಳತ್ತ ಆಸಕ್ತಿ ತೋರಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಕ್ಯಾನ್ಸರ್ ಸೇರಿ ಗಂಭೀರ ಕಾಯಿಲೆಗಳಿಂದ ಬಳಲು ತ್ತಿರುವವರನ್ನು ಗುರುತಿಸಿ ಸರ್ಕಾರದಿಂದ ಸಮರ್ಪಕ ಚಿಕಿತ್ಸೆ ಒದಗಿಸಬೇಕು ಎಂದು ತಾಲೂಕು ವೈದ್ಯಾಽಕಾರಿ ಡಾ.ಬಿ.ವಿ.ಗಿ ರೀಶ್ ಅವರಿಗೆ ಸೂಚಿಸಿದರು.
ಪೋಕ್ಸೋ ಪ್ರಕರಣಗಳ ನಿಯಂತ್ರಣಕ್ಕಾಗಿ ಸಂಬAಽಸಿದ ಅಽಕಾರಿಗಳು ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕೆಂದ ರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಶಾಸಕರು ಸಭೆಗೆ ಗೈರಾದ ಅಽಕಾರಿಗಳಿಗೆ ನೋಟಿಸ್ ಜಾರಿಗೆ ಸೂಚಿಸಿದರು.
ರೈತರ ಹೆಸರಲ್ಲಿ ಇತರರು ಕÊಷಿಗೊಂಡಗಳ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಪ್ಪಿಸಬೇಕು ಎಂದು ಸೂ ಚಿಸಿದರು.
ತಾಪಂ ಆಡಳಿತಾಽಕಾರಿ ಮಂಜುನಾಥಸ್ವಾಮಿ, ಇಒ ವೈ.ರವಿಕುಮಾರ್, ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಆರ್. ಶಿವಣ್ಣ, ತಾ ಲೂಕು ಅಧ್ಯಕ್ಷ ಪ್ರಕಾಶ್, ತಹಸೀಲ್ದಾರ್ ಗೋವಿಂದ್‌ರಾಜ್, ಕೆಡಿಪಿ ಸದಸ್ಯರಾದ ನಾಗರಾಜ್, ಸಂತೋಷ್, ವಿಜಯ್‌ಕುಮಾರ್ ಇದ್ದರು.