ಚಿತ್ರದುರ್ಗ ಕೆಳಕೋಟೆಯಲ್ಲಿ ಭಾನುವಾರ ಫುಡ್ ಕೋರ್ಟ್ ನಿರ್ಮಾಣಕ್ಕೆ ಸಂಬAಽಸಿದAತೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸ್ಥಳ ಪರಿ ಶೀಲಿಸಿದರು. ನಗರಸಭೆ ಆಯುಕ್ತೆ ಎಸ್.ಲಕ್ಷಿ÷್ಮÃ, ಸ್ಥಳೀಯ ನಿವಾಸಿಗಳಾದ ಅಂಜಿನಪ್ಪ, ಸುರೇಶ್,ಮಲ್ಲಿಕಾರ್ಜುನ್ ಇತರರು ಇದ್ದರು.
- ಚಿತ್ರದುರ್ಗ ನಗರಾಭಿವೃದ್ಧಿಗೆ ಯೋಜನೆ
- ಸಾರ್ವಜನಿಕರ ಕುಂದು,ಕೊರತೆ ಆಲಿಕೆ
- ಚಿತ್ರದುರ್ಗ ವಿಧಾನಸಭಾ ಕ್ಷೇತ್ರ
ಚಿತ್ರದುರ್ಗ: ಚಿತ್ರದುರ್ಗ ನಗರದ ಅಭಿವೃದ್ಧಿ ನನ್ನ ಮೂಲ ಉದ್ದೇಶವೆಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಹೇಳಿದರು. ನಗರದ ಕೆಳಕೋಟೆಗೆ ಭಾನುವಾರ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಮಾತಾಡಿದ ಅವರು,ನಗರದ ಅಭಿವೃದ್ಧಿಗೆ ಅಗತ್ಯ ಯೋಜನೆ ರೂಪಿಸಲಾಗಿದೆ.
ಇದಕ್ಕಾಗಿ ಜಿಲ್ಲಾಽಕಾರಿ ಜತೆಯೂ ಚರ್ಚಿಸಿದ್ದೇನೆ. ನಗರಕ್ಕೆ ದೇಶ-ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.ಆದ್ದರಿಂದ ಚಿತ್ರದು ರ್ಗವನ್ನು ಸುಂದರ ನಗರವನ್ನಾಗಿ ಅಭಿವೃದ್ಧಿ ಪಡಿಸಬೇಕಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ನಾನಾ ಅಭಿ ವÊದ್ಧಿ ಕಾರ‍್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಬೀದಿ ಬದಿಯ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ ನಗರಸಭೆಯಿಂದ -ಫುಡ್ ಕೋರ್ಟ್ ಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಬೀದಿ ಬದಿ ವ್ಯಾಪಾರಿಗಳ ಸಹಕಾರವು ಬೇಕಿದೆ. ಇದಕ್ಕಾಗಿ ನಗರದ ವಿವಿಧೆಡೆ ಸ್ಥಳ ಪರಿಶೀಲಿಸಲಾಗಿದೆ. ಸರಸ್ವತಿ ಕಾನೂನು ಕಾ ಲೇಜು ಬಳಿಯ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ ಫುಡ್ಕೋರ್ಟ್ ನಿರ್ಮಿಸಲಾಗುವುದು.
ಒಂದೇ ಸೂರಿನಡಿ ವಿದ್ಯುತ್,ಕುಡಿಯುವ ನೀರು,ಶೌಚಗೃಹದೊಂದಿಗೆ ಮಳಿಗೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಇದರಿಂದ ತ ಮಗೂ ಅನುಕೂಲವಾಗಲಿದೆ ಎಂದು ಪೆಟ್ಟಿಗೆ ಅಂಗಡಿ ಮಾಲೀಕರಿಗೆ ತಿಳಿಸಿದರು. ಇದಕ್ಕೆ ತಮ್ಮ ಒಪ್ಪಿಗೆ ಅಗತ್ಯವಿದೆ ಎಂದು ಕೆಳಗೋಟೆ ನಿ ವಾಸಿಗಳಿಗೂ ಮನವಿ ಮಾಡಿದರು.
ಕೆಳಗೋಟೆ ಭೋವಿ ಕಾಲನಿಯಲ್ಲಿ ಹಾದು ಹೋಗುವ ರಾಜಕಾಲುವೆಯ ತಡೆಗೋಡೆಗಳು ಅಲ್ಲಲ್ಲಿ ಕುಸಿದಿವೆ. ಮಕ್ಕಳು ಆಟವಾಡು ತ್ತಿರುತ್ತವೆ. ಆದ್ದರಿಂದ ರಕ್ಷಣಾ ವ್ಯವಸ್ಥೆ ಕಲ್ಪಿಸ ಬೇಕೆಂಬ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕರು, ಅಗತ್ಯ ಕ್ರಮಕ್ಕೆ ನಗರಸಭೆ ಪೌರಾಯುಕ್ತೆ ಎಸ್.ಲಕ್ಷಿ÷್ಮÃ ಅವರಿಗೆ ನಿರ್ದೇಶಿಸಿದರು.
ಕೆಳಗೋಟೆ ನಿವಾಸಿಗಳಾದ ಅಂಜಿನಪ್ಪ,ಸುರೇಶ್,ಮಲ್ಲಿಕಾರ್ಜುನ್, ರವಿಕುಮಾರ್, ಸು ಜಾತಮ್ಮ,ಲಕ್ಷ÷್ಮಮ್ಮ,ಮಂಜಮ್ಮ, ಓಬಣ್ಣ, ಖಲೀಲ್,ರಾಜಣ್ಣ, ಪ್ರಸನ್ನ, ಶ್ವೇತಾ,ನಾಗರತ್ನ, ರವಿ, ಮಂಜುನಾಥ್,ನಾಗರಾಜ್ ಇತರರು ಇದ್ದರು.