ಮೊಳಕಾಲ್ಮೂರು ತಾಲೂಕು ಕೊಂಡ್ಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಕುಡಾ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ನೇತೃತ್ವದಲ್ಲಿ ರೈತರು ಚಿತ್ರದುರ್ಗದಲ್ಲಿ ಶುಕ್ರವಾರ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಮೃತ್ಯುಂಜಯ, ಗುರುಲಿಂಗಪ್ಪ, ವೆಂಕಟೇಶ್, ನಿಂಗರಾಜು, ಮಂಜುನಾಥ್, ಜಯಮ್ಮ, ರೇಣುಕಮ್ಮ, ಕವಿತಾ, ಪಾರ್ವತಿ ಇದ್ದರು. 
ಚಿತ್ರದುರ್ಗ

ಸಹಕಾರ ಸಂಘದಲ್ಲಿ ಅವ್ಯವಹಾರ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ರೈತರಿಂದ ಆರೋಪ
  • ತನಿಖೆಗೆ ಒತ್ತಾಯಿಸಿ ಕುಡಾ ಮಾಜಿ ಅಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಪ್ರತಿಭಟನೆ
  • ಸಮಸ್ಯೆ ಬಗೆಹರಿದಿಲ್ಲ.
ಚಿತ್ರದುರ್ಗ : ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಪ್ರಾಥಮಿಕ ಕÊಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರೈತರು, ಕುಡಾ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ನೇತೃತ್ವದಲ್ಲಿ ಡಿಸಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿ ದರು.
ಸಂಘದಲ್ಲಿ ಅಂದಾಜು ೩ ಕೋಟಿ ರೂ.ಅವ್ಯವಹಾರ ಆಗಿದೆ. ಸಂಘದ ೨೦೦೯-೧೦ ರಿಂದ ೨೦೨೩-೨೪ರ ಸಾಲಿನವರೆಗೆ ಹಾ ಗೂ ಸಂಘದ ಮೂವರು ಮುಖ್ಯಕರ‍್ಯನಿರ್ವಹಣಾಽಕಾರಿಗಳ ಅವಽಯಲ್ಲಿ ಆಗಿರುವ ವ್ಯವಹಾರದ ಕುರಿತು ಪ್ರತ್ಯೇಕ ತನಿಖಾ ಅಽ ಕಾರಿಗಳಿಂದ ಸಮಗ್ರ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ದುರುಪಯೋಗವಾಗಿರುವ ಹಣವನ್ನು ಸಾರ್ವಜನಿಕರಿಗೆ ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು.
ಸಂಬAಽಸಿದ ಸಹಕಾರ ಇಲಾಖೆ ಅಽಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದ್ದರೂ, ಸಮಸ್ಯೆ ಬಗೆಹರಿದಿಲ್ಲ. ತನಿಖೆ ಮಂದಗತಿಯಲ್ಲಿದೆ. ಇದರಿಂದ ಅಂಗವಿಕಲರು, ವೃದ್ಧರ ಸಹಿತ ಬಡವರಿಗೆ ಅನ್ಯಾಯವಾಗಿದೆ. ಆರ್‌ಡಿ, ಪಿಗ್ನಿ, ಡೆಪಾಸಿಟ್ ಹಣ ದುರುಪಯೋಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೊಂದವರಿಗೆ ಕೂಡಲೇ ಹಣವನ್ನು ಹಿಂತಿರುಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿ ಎಡಿಸಿ ಬಿ.ಟಿ. ಕುಮಾ ರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಕುರುಬರ ಜಿಲ್ಲಾ ಸಂಘದ ಖಂಜಾಚಿ ಮೃತ್ಯುಂಜಯ, ಗುರುಲಿಂಗಪ್ಪ, ವೆಂಕಟೇಶ್, ನಿಂಗರಾಜು, ಮಂಜುನಾಥ್, ಜಯಮ್ಮ, ರೇಣುಕಮ್ಮ, ಕವಿತಾ, ಪಾರ್ವತಿ ಇತರರು ಇದ್ದರು.