ಚಿತ್ರದುರ್ಗದ ನವೀಕೃತ ತರಾಸು ರಂಗಮAದಿರವನ್ನು ಸಚಿವ ಟಿ.ರಘುಮೂರ್ತಿ ಅವರು ಶನಿವಾರ ಉದ್ಘಾಟಿಸಿದರು. ಕೆ.ಸಿ.ವಿ ರೇಂದ್ರ ಪಪ್ಪಿ, ಗೋವಿಂದ ಎಂ.ಕಾರಜೋಳ, ಕೆ.ಎಸ್.ನವೀನ್, ಜಿ.ಎಸ್.ಮಂಜುನಾಥ, ಪಿ.ರಘು, ತಾಜ್‌ಪೀರ್, ಆರ್.ಶಿವಣ್ಣ, ಟಿ.ವೆಂಕಟೇಶ್, ಡಾ.ಎಸ್.ಆಕಾಶ್, ರಂಜಿತ್‌ಕುಮಾರ್ ಬಂಡಾರು ಇತರರು ಇದ್ದರು. 
ಚಿತ್ರದುರ್ಗ

ಜಿಲ್ಲೆಯ ಸಮುದಾಯ ಭವನಗಳ ನಿರ್ವಹಣೆಗೆ ಸಚಿವ ತಾಕೀತು

ಪ್ರಮುಖ ಮುಖ್ಯಾಂಶಗಳು

  • ನವೀಕೃತ ತರಾಸು ರಂಗಮAದಿರ ಉದ್ಘಾಟನೆ
  • ಮಲ್ಟಿಫ್ಲೆಕ್ಸ್ ಚಿತ್ರಮಾದರಿ ನವೀಕರಣ,ಡಿಸಿ
  • ಪ್ರಜಾ ಸೇವಾ ಶಾಖೆ ಆರಂಭ

ಚಿತ್ರದುರ್ಗ:

ವಿವಿಧ ಇಲಾಖೆಗಳಿಂದ ಜಿಲ್ಲೆಯಲ್ಲಿ ನಿರ್ಮಿಸಿರುವ ಸಮುದಾಯ ಭವನಗಳ ಸೂಕ್ತ ನಿರ್ವಹಣೆಗೆ ಶೀಘ್ರವೇ ಮಾರ್ಗ ಸೂಚಿ ರಚಿಸಿ ಹೊಸ ಸುತ್ತೋಲೆ ಹೊರಡಿಸುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘು ಮೂರ್ತಿ ಅವರು ಡಿಸಿಗೆ ನಿರ್ದೇಶಿಸಿದರು.

ನಗರದ ನವೀಕÊತ ತರಾಸು ರಂಗಮAದಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಕೋಟ್ಯಂತರ ರೂ. ವೆಚ್ಚ ದಲ್ಲಿ,ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಿಂದ ನಿರ್ಮಿಸಿದ ಸಮುದಾಯ ಭವನಗಳು ಸೂಕ್ತ ನಿರ್ವಹಣೆ ಇಲ್ಲದೆ ದುರಸ್ತಿ ಹಂತಕ್ಕೆ ತಲುಪುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಮಹನೀಯರ ಹೆಸರಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ಸರ್ಕಾರ ನಿರ್ಮಿಸುವ ಪ್ರತಿ ಕಟ್ಟಡ ನಿರಂತರವಾಗಿ ಸಾರ್ವಜನಿಕರ ಬಳಕೆಗೆ ಲಭ್ಯವಿರುವಂತೆ ನೋಡಿಕೊಳ್ಳುವುದು ಅಽಕಾರಿಗಳ ಜವಾಬ್ದಾರಿಯಾಗಿದೆ. ಗ್ರಾಮೀಣ ಭಾಗಗಳಲ್ಲಿ ನಿರ್ವಹಣೆ ಹೊಣೆಯನ್ನು ಆಯಾ ಗ್ರಾಮಸ್ಥರು ಮತ್ತು ಸ್ಥಳೀಯ ಸಮುದಾಯಗಳಿಗೆ ನೀಡಬೇಕು. ತಾಲೂ ಕು ಮಟ್ಟದ ಭವನಗಳ ನಿರ್ವಹಣೆಗೆ ಟ್ರಸ್ಟ್ ರಚಿಸಬೇಕು. ಸಂಬAಽಸಿದ ಇಲಾಖೆಗಳು ಭವನಗಳ ಸುಸ್ಥಿತಿ ಜವಾಬ್ದಾರಿ ವಹಿಸಿ ಕೊಳ್ಳಬೇಕು ಎಂದು ಸೂಚಿಸಿದರು.
ಕಲ್ಲಿನ ಕೋಟೆ ಐತಿಹಾಸಿಕ ಹಿನ್ನೆಲೆ ಹಾಗೂ ಸಾಹಿತ್ಯಲೋಕದ ದಿಗ್ಗಜ ತರಾಸು ಅವರ ಸಾಹಿತ್ಯ ವೈಭವವನ್ನು ನೆನಪಿಸುವಂತೆ ರಂಗಮAದಿರ ವಿನ್ಯಾಸಗೊಳಿಸಲಾಗಿದೆ. ನಾಗರಹಾವು ಸಿನಿಮಾ ಚಿತ್ರದುರ್ಗದ ಇತಿಹಾಸ, ಕೋಟೆ ಹಿನ್ನೆಲೆ ಮತ್ತು ವೀರ ವನಿತೆ ಒನಕೆ ಓಬವ್ವಳ ಶೌರ್ಯವನ್ನು ನಾಡಿಗೆ ಪರಿಚಯಿಸಿದೆ.
೨.೭೦ ಕೋಟಿ ರೂ. ವೆಚ್ಚದಲ್ಲಿ ನವೀಕರಿಸಿರುವ ರಂಗಮAದಿರದ ನಿರ್ವಹಣೆ ಕೂಡ ಸರಿಯಾಗಿರಬೇಕು. ಶೌಚಗೃಹ ಕಾಮ ಗಾರಿ,ಪೇಂಟಿAಗ್ ಕಾಮಗಾರಿ ತೃಪ್ತಿಕರವಾಗಿಲ್ಲ. ನ್ಯೂನತೆಗಳನ್ನು ತಕ್ಷಣ ಸರಿಪಡಿಸುವಂತೆ ಗುತ್ತಿಗೆದಾರರಿಗೆ ಎಚ್ಚರಿಸಬೇಕೆಂದು ಅಽಕಾರಿಗಳಿಗೆ ಸೂಚಿಸಿದರು.
ಮಲ್ಟಿ ಪ್ಲೆಕ್ಸ್ ಚಿತ್ರಮಂದಿರದ ಮಾದರಿ
ಅಂದಾಜು ೨೦ ವರ್ಷಗಳ ಹಳೆಯ ರಂಗಮAದಿರವನ್ನು ಮಲ್ಟಿ ಪ್ಲೆಕ್ಸ್ ಚಿತ್ರಮಂದಿರದ ಮಾದರಿ ನವೀಕರಿಸಲಾಗಿದೆ ಎಂದು ಡಿಸಿ ಟಿ. ವೆಂಕಟೇಶ್ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಸಚಿವರಾಗಿದ್ದ ದಿ. ಡಿ.ಸುಧಾಕರ್ ಅವರ ಓಡನಾಟ ನೆನೆದು ಭಾವುಕರಾದರು. ಜಿಲ್ಲಾಽಕಾರಿಯಾಗಿ ಅಽಕಾರ ವಹಿಸಿಕೊಂಡಾಗ ರಂಗಮAದಿರದ ಸ್ಥಿತಿ ಶೋಚನೀಯವಾಗಿತ್ತು. ಇದರ ಕಾಯಕಲ್ಪಕ್ಕೆ ಅನುದಾನ ಒದಗಿಸುವುದಾಗಿ ಸುಧಾಕರ್ ಭರವಸೆ ನೀಡಿದ್ದರು. ಅವರ ನಿರಂತರ ಬೆಂಬಲ, ಆಸಕ್ತಿಯಿಂದಾಗಿ ರಂಗ ಮಂದಿರ ಆಧುನಿಕವಾಗಿ ರೂಪುಗೊಂಡಿದೆ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಗೋವಿಂದ ಎಂ.ಕಾರಜೋಳ, ಎಂಎಲ್‌ಸಿ ಕೆ.ಎಸ್.ನವೀನ್, ರಾಜ್ಯ ಆದಿ ಜಾಂಬವ ಅಭಿವÊದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ, ರಾಜ್ಯಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷ ಪಿ.ರಘು, ಕುಡಾ ಅಧ್ಯಕ್ಷ ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಽಕಾರಿದ ಅಧ್ಯಕ್ಷ ಆರ್.ಶಿವಣ್ಣ, ಜಿಪಂ ಸಿಇಒ ಡಾ.ಎಸ್.ಆಕಾಶ್, ಎಸ್‌ಪಿ ರಂಜಿತ್‌ಕುಮಾರ್‌ಬAಡಾರು, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಎಂ.ಜೆ.ಮಹೇಶ್, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಹರೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮತ್ತಿತರರು ಇದ್ದರು.
ಸಿಎಂ ಮಹತ್ವಾಕಾಂಕ್ಷೆ ಯೋಜನೆ
ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಾರಂಭಿಸಿರುವ ಪ್ರಜಾಸೇವಾ ಯೋಜನೆ ಸಿಎಂ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯದು ಎಂದು ಸಚಿವ ರಘುಮೂರ್ತಿ ತಿಳಿಸಿದರು. ಜಿಪಂ ಕಚೇರಿ ಆವರಣದಲ್ಲಿ ಶನಿವಾರ ಪ್ರಜಾ ಸೇವಾ ಶಾಖೆ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಅತ್ಯಂತ ಪರಿಣಾಮಕಾರಿ ಹಾಗೂ ವೇಗವಾಗಿ ತಲುಪಿಸಲು ಈ ವ್ಯವಸ್ಥೆ ರೂಪಿಸಲಾಗಿದೆ ಎಂದರು.

ಜಿಪಂ ಸಿಇಒ ಡಾ.ಎಸ್.ಆಕಾಶ್ ಮಾತನಾಡಿದರು.