ಉಲ್ಕಾಪಾತ 
ಚಿತ್ರದುರ್ಗ

೧೩ ರಿಂದ ಎರಡು ದಿನ ಉಲ್ಕಾಪಾತ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಮಾನವನ ಕುತೂಹಲ ಕೆರಳಿಸುವ ವಿಸ್ಮಯ
  • ನಭೋ ಮಂಡಲ
  • ಜೆಮಿನಿ
ಚಿತ್ರದುರ್ಗ: ನಭೋ ಮಂಡಲದಲ್ಲಿ ಡಿ.೧೩ ಹಾಗೂ ೧೪ರಂದು ಮಾನವನ ಕುತೂಹಲ ಕೆರಳಿಸುವ ವಿಸ್ಮಯ ನಡೆಯಲಿದೆ. ಈ ಎರ ಡು ದಿನಗಳ ರಾತ್ರಿ ೯ ರಿಂದ ಬೆಳಗಿನ ಜಾವ ೪ರವರೆಗೆ ಪೂರ್ವ ದಿಕ್ಕಿನಲ್ಲಿ ಜೆಮಿನಿ(ಮಿಥುನ)ನಕ್ಷತ್ರರಾಶಿಯ ಕಡೆಯಿಂದ ಪ್ರತಿ ಗಂಟೆ ಗೆ ೨೫-೫೦ ಉಲ್ಕೆಗಳು ಮಳೆ ರೂಪದಲ್ಲಿ ಭೂಮಿ ಕಡೆ ಬೀಳುವ ದೃಶ್ಯ ಕಾಣಸಿಗಲಿದೆ.
ಈ ಉಲ್ಕಾಪಾತದ ಮೂಲ ೩೨೦೦ ಪೈತಾನ್ ಕ್ಷುದ್ರಗ್ರಹ. ೧೦೦ ವರ್ಷಗಳ ಹಿಂದೆ ತನ್ನ ವೇಗ ಬದಲಿಸಿಕೊಂಡು ಸೂರ್ಯನ ಸಮೀ ಪ ಹಾರಾಟ ಮಾಡುತ್ತಿರುವ ಈ ಬಂಡೆ, ಲೋಹಗಳಿಂದಾದ ಕ್ಷುದ್ರಗ್ರಹ ಸೂರ್ಯನ ತಾಪಕ್ಕೆ ಕರಗುತ್ತಾ ಧೂಳು, ಚಿಕ್ಕ, ಚಿಕ್ಕ ಕಲ್ಲಿನ ಕ ಣಗಳನ್ನು ಬಾಹ್ಯಾಕಾಶದಲ್ಲಿ ಚೆಲ್ಲುತ್ತದೆ. ಈ ಸಮಯದಲ್ಲಿ ಅಪರೂಪದ ದÊಶ್ಯ ನೋಡಬಹುದಾಗಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ, ಚಿತ್ರದುರ್ಗ ಸೈನ್ಸ್ -Ëಂಡೇಶನ್ ಕಾರ್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ ತಿಳಿಸಿದ್ದಾರೆ.