ಚಿತ್ರದುರ್ಗ ತಾಲೂಕು ಭರಮಸಾಗರದ ಸರ್ಕಾರಿ ಪಿಯು ಕಾಲೇಜು ಚಿತ್ರ. 
ಚಿತ್ರದುರ್ಗ

ಪ್ರವೇಶಾತಿ ಹೆಚ್ಚಳಕ್ಕೆ ಇಲಾಖೆ ಮೆಗಾ ಪ್ಲ್ಯಾನ್

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಪಿಯು ಕಾಲೇಜುಗಳಿಗೆ ಹೈಟೆಕ್ ಸ್ಪರ್ಶ
  • ಮುಖಚಹರೆ ಆಧರಿಸಿ ಹಾಜರಾತಿ
  • ಉಚಿತ ಪಠ್ಯಪುಸ್ತಕ
ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ದಾಖಲೆ ಪ್ರಮಾಣದ ವಿದ್ಯಾರ್ಥಿಗಳು ತೇರ್ಗಡೆಯಾದ ಬೆನ್ನಲ್ಲೇ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶಾತಿ ಹೆಚ್ಚಿಸಲು ಪಿಯು ಇಲಾಖೆ ಟೊಂಕ ಕಟ್ಟಿ ನಿಂತಿದೆ.
ಮೂಲಸೌಕರ್ಯ ಅಭಿವÊದ್ಧಿಯ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಒದಗಿಸಿದರೂ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕುಸಿಯುತ್ತಿರುವುದು ಇಲಾಖೆಯ ನಿದ್ದೆಗೆಡಿಸಿದೆ. ಅದಕ್ಕಾಗಿ ಈ ವರ್ಷದಿಂದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಎಲ್ಲ ಕಾಂಬಿನೇಷನ್ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಮುಖಚಹರೆ ಆಧರಿಸಿದ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಕಾಲೇಜುಗಳ ಚಿತ್ರಣವನ್ನೇ ಬದಲಾಯಿಸಲು ಮುಂದಾಗಿದೆ.
ರಾಜ್ಯದಲ್ಲಿ ೧೩೪೧ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. ಪ್ರತಿ ಜಿಲ್ಲೆಯ ಸರ್ಕಾರಿ ಕಾಲೇಜುಗಳ ಸಂಖ್ಯೆ ಆಧರಿಸಿ ಮೇ೨೯ ರೊಳಗೆ ನಿಗದಿತ ದಾಖಲಾತಿ ಗುರಿ ತಲುಪಲು ಕಟ್ಟುನಿಟ್ಟಿನ ತಾಕೀತು ಮಾಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವೇಶ ಸಂಖ್ಯೆ ೬೭೧೦ ತಲುಪಬೇಕೆಂದು ನಿರ್ಧರಿಸಲಾಗಿದೆ.
ಏನೆಲ್ಲ ಸೌಲಭ್ಯಗಳಿವೆ?
ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಉಪನ್ಯಾಸಕರು, ಅತಿಥಿ ಉಪನ್ಯಾಸಕರ ನೇಮಕ, ನೀಟ್, ಸಿಇಟಿ ತರಬೇತಿ, ಪರಿಹಾರ ತರಗತಿ, ವಿಶೇಷ ತರಗತಿಗಳು, ಉತ್ತಮ ಪಾಠೋಪಕರಣ ವ್ಯವಸ್ಥೆ ಸಹಿತ ಹಲವು ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ರಾಜ್ಯದ ಸರ್ಕಾರಿ ಪಿಯು ಕಾಲೇಜಿನ ೨೫ ಸಾವಿರ ವಿದ್ಯಾರ್ಥಿಗಳಿಗೆ ನೀಟ್/ಸಿಇಟಿ ತರಬೇತಿ ಕೊಡಲಾಗಿದೆ.
ಸರ್ಕಾರಿ ಪಿಯು ಕಾಲೇಜು ಬಾಲಕಿಯರಿಗೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಬಿಸಿಎಂ-೧ ವರ್ಗದ ಬಾಲಕರಿಗೆ ಶುಲ್ಕ ವಿನಾಯಿತಿ ಇದೆ. ರಾಜ್ಯದ ಹಲವು ಕಾಲೇಜುಗಳಿಗೆ ಡಿಜಿಟಲ್ ಬೋರ್ಡ್ಗಳು, ಕಂಪ್ಯೂಟರ್‌ಗಳನ್ನು ವಿತರಿಸಲಾಗಿದೆ. ವಿವೇಕ, ಆರ್‌ಐಡಿ ಎಫ್ ಸಹಿತ ನಾನಾ ಅನುದಾನಗಳೊಂದಿಗೆ ಕಾಲೇಜು ಹೊಸ ಕಟ್ಟಡ/ಹೊಸ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.
ಮುಖ ಚಹರೆ ಗುರುತು ಆಧರಿಸಿ ಹಾಜರಾತಿ
ಈ ವರ್ಷದಿಂದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಮುಖ ಚಹರೆ ಗುರುತು(Face Recognition Attendance) ಆಧರಿಸಿ ಹಾಜರಾತಿ ಇರಲಿದೆ. ಇದಕ್ಕಾಗಿ ನಿರಂತರ ಹೆಸರಿನ ತಂತ್ರಾAಶ ಬಳಸಿಕೊಳ್ಳಲಾಗುತ್ತಿದೆ.
ಪ್ರವೇಶ ಸಂದರ್ಭದಲ್ಲಿ ೩ ಆ್ಯಂಗಲ್‌ಗಳಲ್ಲಿ ವಿದ್ಯಾರ್ಥಿ ಮುಖ ಚಹರೆ ಪೋಟೊ ತೆಗೆದುಕೊಳ್ಳಲಾಗುತ್ತಿದೆ. ಉಪನ್ಯಾಸಕರು ಬೋಧನೆಗೆ ತೆರಳಿದಾಗ ತರಗತಿಯಲ್ಲಿರುವ ವಿದ್ಯಾರ್ಥಿಗಳ ಫೋಟೊ ತೆಗೆಯುತ್ತಾರೆ, ಆಗ ಗೈರಾದ ವಿದ್ಯಾರ್ಥಿಯ ಹೆಸರು ಅವರ ಗಮನಕ್ಕೆ ಬರುತ್ತದೆ. ಈ ಹಾಜರಾತಿ ಪದ್ಧತಿ ಪಿಯು ಡಿಡಿಯಿಂದ ಕಾಲೇಜು ಉಪನ್ಯಾಸಕರು, ಸಿಬ್ಬಂದಿಗೆ ಕಳೆದ ವರ್ಷದಿಂದ ಜಾರಿಯಲ್ಲಿದೆ.
ಭರಮಸಾಗರದಲ್ಲಿ ಹೊಸ ಕಾಲೇಜು
ಚಿತ್ರದುರ್ಗ ತಾಲೂಕು ಭರಮಸಾಗರದಲ್ಲಿ ಸರ್ಕಾರಿ ಪಿಯು ಕಾಲೇಜು, ರೇರ್ ಕಾಂಬಿನೇಷನ್ ಎನ್ನಲಾದ ಇಬಿಎಸಿಎಸ್ (Eco nomics,Business Studies, Accountancy, and Computer Science)ನೊಂದಿಗೆ ಅಲ್ಲಿಯ ಪಿಎಂಶ್ರೀ ಪ್ರೌಢ ಶಾಲೆಯಲ್ಲಿ ತಾತ್ಕಾಲಿಕವಾಗಿ ಪ್ರಾರಂಭವಾಗಿದೆ. ಹೊಸ ಕಟ್ಟಡಕ್ಕೆ ೧.೪೯ ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ.
ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣ
ಚಿತ್ರದುರ್ಗ ಜಿಲ್ಲೆಯಲ್ಲಿ ೨೦,೨೧೩ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ೩೯, ಅನುದಾನಿತ ೪೬, ಅನುದಾನ ರಹಿತ ೫೪ ಸೇರಿ ಜಿಲ್ಲೆಯಲ್ಲಿ ೧೩೯ ಪಿಯು ಕಾಲೇಜುಗಳಿವೆ. ಹೊಸ ಖಾಸಗಿ ಕಾಲೇಜುಗಳ ಆರಂಭಕ್ಕೂ ಕೋರಿಕೆ ಸಲ್ಲಿಕೆಯಾಗಿದೆ.
೫೦ ಕೋಟಿ ರೂ. ವೆಚ್ಚದಲ್ಲಿ ಚಿತ್ರದುರ್ಗ-೭, ಹೊಸದುರ್ಗ-೪, ಹೊಳಲ್ಕೆರೆ-೬ ಹಾಗೂ ಮೊಳಕಾಲ್ಮೂರಲ್ಲಿ ೨ ಸರ್ಕಾರಿ ಪಿಯು ಕಾಲೇ ಜುಗಳಿಗೆ ಹೊಸ ಕಟ್ಟಡ/ಕೊಠಡಿ ನಿರ್ಮಾಣ, ಪಾಠೋಪಕರಣ ಒದಗಿಸಲಾಗುತ್ತಿದೆ. ಚಳ್ಳಕೆರೆ ಮತ್ತು ಮೊಳಕಾಲ್ಮೂರು ಆದರ್ಶ ಕಾಲೇಜುಗಳ ಕಟ್ಟಡಕ್ಕೆ ಸಂಬAಽಸಿದAತೆ ತಲಾ ೨ ಕೋಟಿ ರೂ. ಅನುದಾನ ಒದಗಿಸಲಾಗಿದೆ. ತುರುವನೂರಲ್ಲಿ ೧.೫೮ ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ.
"

ಕಳೆದ ವರ್ಷ ಜಿಲ್ಲೆಯಲ್ಲಿ ಎಲ್ಲ ಕಾಲೇಜುಗಳ ಪ್ರಥಮ ಪಿಯು ತರಗತಿಗೆ ೧೩,೫೦೦ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಅನುದಾನಿತ, ಅನುದಾನ ರಹಿತ ಕಾಲೇಜುಗಳಲ್ಲಿ ೬೦ ವಿದ್ಯಾರ್ಥಿಗಳಿಗೆ ಒಂದು ಸೆಕ್ಷನ್ ಇರಬೇಕು, ಹೆಚ್ಚುವರಿ ಪ್ರವೇಶಕ್ಕೆ ಅನುಮತಿಬೇಕು. ಆದರೆ, ಸರ್ಕಾರಿ ಕಾಲೇಜುಗಳಿಗೆ ಯಾವುದೇ ಪ್ರವೇಶ ಮಿತಿ ಇಲ್ಲ.

— ಕೆ. ತಿಮ್ಮಯ್ಯ ಡಿಡಿಪಿಯು, ಚಿತ್ರದುರ್ಗ