ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಪಾರಂಪರಿಕ ವೈದ್ಯ ಸಮ್ಮೇಳನದಲ್ಲಿ ಶ್ರೀ ಬಸವನಾಗೀದೇವ ಸ್ವಾಮೀಜಿ, ಡಾ. ಬಸವಕುಮಾರ ಸ್ವಾಮೀಜಿ ಇತರರು ಇದ್ದರು. 
ಚಿತ್ರದುರ್ಗ

ರೋಗಮುಕ್ತ ಜೀವನಕ್ಕೆ ಔಷಽÃಯ ಸಸ್ಯ ಸಹಕಾರಿ

ಪಾರಂಪರಿಕ ವೈದ್ಯ ಸಮ್ಮೇಳನ

ಚಿತ್ರದುರ್ಗ : ಚಿಕ್ಕ ವಯಸ್ಸಿನಿಂದಲೇ ಔಷಽÃಯ ಸಸ್ಯಗಳ ಬಳಸಿ ಚಿಕಿತ್ಸೆ ಪಡೆದರೆ ರೋಗಮುಕ್ತವಾಗಿ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಶ್ರೀ ಛಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ ಹೇಳಿದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಸಹಯೋಗದಲ್ಲಿ ಶ್ರೀಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ `ಆರೋಗ್ಯಭರಿತ ಜೀವನಕ್ಕಾಗಿ ಪಾರಂಪರಿಕ ವೈದ್ಯ' ಪಾರಂಪರಿಕ ವೈದ್ಯ ಸಮ್ಮೇಳನ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಅತ್ಯಂತ ಉಪಯುಕ್ತ ಚಿಕಿತ್ಸಾ ಪದ್ಧತಿಯಾಗಿದೆ. ಔಷಽÃಯ ಸಸ್ಯಗಳನ್ನು ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರೂ ಪಾರಂಪರಿಕ ವೈದ್ಯ ವೃತ್ತಿ ಬೆಳವಣಿಗೆ ಸಹಕಾರ ನೀಡಬೇಕಿದೆ ಎಂದರು.

ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಗುರುಸಿದ್ದಪ್ಪ ನೇರ್ಲಗಿ ಮಾತನಾಡಿ, ನಮ್ಮಲ್ಲಿ ಹಲವು ಕಾಯಿಲೆಗೆ ರೋಗ ನಿರೋಧಕ ಮಾತ್ರೆಗಳನ್ನು ನೀಡಲಾಗುತ್ತದೆ. ಆದರೆ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಔಷಽÃಯ ಸಸ್ಯಗಳನ್ನು ಬಳಸಿ ರೋಗ ಗುಣಪಡಿಸಲಾಗುತ್ತದೆ. ಈಚಿನ ದಿನಗಳಲ್ಲಿ ನಶಿಸುತ್ತಿರುವ ಹಲವು ಔಷಽÃಯ ಸಸ್ಯಗಳನ್ನು ಸಂರಕ್ಷಣೆ ಮಾಡಬೇಕಿದೆ. ಪ್ರಾಥಮಿಕ ಹಂತದಲ್ಲಿ ನಮಗೆ ಬರುವÀ ರೋಗಗಳಿಗೆ ಔಷಽÃಯ ಗಿಡಗಳಿಂದ ಚಿಕಿತ್ಸೆ ಪಡೆದು, ನಿವಾರಣೆ ಮಾಡಿಕೊಂಡರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ನ ಡಾ. ಸತ್ಯನಾರಾಯಣರಾವ್ ಮಾತನಾಡಿದರು. ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಮಹದೇವಯ್ಯ, ಡಿ.ಜೆ. ಶಂಕರಪ್ಪ, ಎಂ. ಸೂರಣ್ಣ, ಪಾಲಾಕ್ಷಯ್ಯ, ಪಿ.ಎಚ್. ಶ್ರೀನಿವಾಸ್ ರ‍್ರಿಸ್ವಾಮಿ, ಮೊಹಿದ್ದೀನ್ ಮತ್ತಿತರರು ಇದ್ದರು.

ಚಿತ್ರದುರ್ಗದ ಎಸ್.ವೀರಣ್ಣ, ಮೊಳಕಾಲ್ಮೂರಿನ ಪೆದ್ದಯ್ಯ, ದಾವಣಗೆರೆ ಎಂ.ಆರ್. ರಹಮಾನುಲ್ಲಾ ಚಿಕ್ಕಮಗಳೂರು ಮಾಕನಹಳ್ಳಿಯ ಎಂ.ಸಿ. ಭೈರಲಿಂಗಪ್ಪ, ವಿಜಯನಗರ ನಡವಲಹಟ್ಟಿದೊಡ್ಡ ಸೂರಣ್ಣ ಇವರಿಗೆ ವೈದ್ಯ ಸಂಗಣ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು.

ಜಗತ್ತಿನಲ್ಲಿ ಒಳ್ಳೆಯದು, ಕೆಟ್ಟದ್ದು ಇದೆ

ಜಗತ್ತು ತುಂಬಾ ಅದ್ಭುತ. ಇಲ್ಲಿ ಹೂವು ಮುಳ್ಳು, ಹಿತ ಅಹಿತ, ಬೆಳಕು ಕತ್ತಲು, ಒಳ್ಳೆಯದು ಕೆಟ್ಟದ್ದು ಇದ್ದು, ಆಯ್ಕೆ ನಮ್ಮದಾಗಿರಬೇಕೆಂದು ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀಮಠದಲ್ಲಿ ಬುಧವಾರ ಆಯೋಜಿಸಿದ್ದ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಮಾತನಾಡಿ, ಬಯಸಿದ್ದು ಸಿಗದಿದ್ದಾಗ ಹೊಟ್ಟೆಕಿಚ್ಚು ಶುರುವಾಗುತ್ತದೆ. ಕ್ರೋಧ, ಮತ್ಸರ, ಹೊಟ್ಟೆಕಿಚ್ಚು ತೊರೆದು ಸಾರ್ಥಕ ಜೀವನ ನಡೆಸಬೇಕು. ನೆಮ್ಮದಿ, ಶಾಂತಿ, ತೃಪ್ತಿ ಎಲ್ಲವೂ ಶಿವಯೋಗದಿಂದ ಸಾಧ್ಯ. ನಿತ್ಯ ಇಷ್ಟಲಿಂಗ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ಮಾಡಬೇಕಿದೆ ಎಂದರು.

ಡಾ. ಬಸವಕುಮಾರ ಸ್ವಾಮೀಜಿ, ಹರಗುರು ಚರಮೂರ್ತಿಗಳು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಟಿ.ಪಿ. ಜ್ಞಾನಮೂರ್ತಿ ಸ್ವಾಗತಿಸಿ, ಅಂಬಿಕಾ ನಿರೂಪಿಸಿದರು.

ಯೋಗದಿಂದ ಆರೋಗ್ಯರ ಬದುಕು

ಚಿತ್ರದುರ್ಗ: ಬಿಸಿಲು, ಮಣ್ಣು ಹಾಗೂ ಗಾಳಿಯಲ್ಲಿ ಲಭ್ಯವಾಗುವ ವಿಟಮಿನ್ ಡಿ ಯನ್ನು ಪಡೆಯಬಹುದಾಗಿದೆ ಎಂದು ಯೋಗ ಗುರು ಚನ್ನಬಸವಣ್ಣ ಹೇಳಿದರು.

ಶರಣ ಸಂಸ್ಕೃತಿ ಉತ್ಸವದಲ್ಲಿ ಬುಧವಾರ ಶ್ರೀಮಠದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಹಾರ ಚನ್ನಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ನಿತ್ಯ ಸೂರ್ಯ ನಮಸ್ಕಾರ ಮಾಡುವುದು ಉತ್ತಮ. ಆಯುರ್ವೇದ ವೈದ್ಯ ಪದ್ಧತಿ ಒಳ್ಳೆಯ ಆರೋಗ್ಯಕ್ಕೆ ಸಹಾಯಕವಾಗುತ್ತದೆ. ಯೋಗದಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದರು.

ಡಾ. ಬಸವಕುಮಾರ ಸ್ವಾಮೀಜಿ, ಹರಗುರು ಚರಮೂರ್ತಿಗಳು, ಯೋಗ ಸಂಸ್ಥೆ ಪದಾಽಕಾರಿಗಳು ಇದ್ದರು.