ಚಿತ್ರದುರ್ಗದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಽÃಶ ಡಿ.ಜೆ. ಸುದೀನ್‌ಕುಮಾರ್, ಡಾ.ಕೆ.ಜಿ. ಕಾಂತರಾಜ್, ಎಚ್.ವಿ. ಪಲ್ಲವಿ, ಹನುಮಂತಪ್ಪ, ಎಸ್.ಲಕ್ಷಿ÷್ಮÃ, ಪಿ. ರಾಜೇಶ್, ನಾಗರಾಜ್‌ಬೇದ್ರೆ ಇತರರು ಇದ್ದರು. 
ಚಿತ್ರದುರ್ಗ

ನಿರಂತರವಾಗಿರಲಿ ಪರಿಸರ ಸಂರಕ್ಷಣೆ ಕಾರ್ಯ

ಪ್ರಮುಖ ಮುಖ್ಯಾಂಶಗಳು

  • ನ್ಯಾ.ಡಿ.ಜೆ. ಸುದೀನ್‌ಕುಮಾರ್ ಅಭಿಮತ
  • ಚಿತ್ರಕಲಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
  • ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ
ಚಿತ್ರದುರ್ಗ: ವಿಶ್ವ ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಾವು ಬದುಕಿರುವವರಿಗೂ ಪರಿಸರ ಸಂರಕ್ಷಣÉ ಕೆಲಸ ನಿರಂತರ ನಡೆಯುತ್ತಿರಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಽಕಾರದ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಽÃಶ ಡಿ.ಜೆ. ಸುದೀನ್‌ಕುಮಾರ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಹಾಗೂ ಕಲಾ ಚೈತನ್ಯ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ಕ್ರೀಡಾ ಸಭಾಂ ಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಭೂಮಿ ಮೇಲೆ ಮನುಷ್ಯನೊಂದಿಗೆ ಪ್ರತಿ ಜೀವಿಯೂ ಬದುಕಬೇಕು ಎಂದಾದರೆ ಸಮಗ್ರ ಪರಿಸರದ ಅಗ್ಯವಿದೆ. ಗಾಳಿ,ನೀರು, ಮಣ್ಣು ಹಾಗೂ ಅವುಗಳಿಂದ ಉಂಟಾಗುವ ಪ್ರಾಕೃತಿಕ ಸಮತೋಲನ ಅತ್ಯಂತ ಮುಖ್ಯ. ಪರಿಸರ ಜಾಗೃತಿ ಚಿತ್ರಕ್ಕೆ ಸೀಮಿತ ವಾಗದೆ ದೈನಂದಿನ ಜೀವನದಲ್ಲೂ ಅನುಷ್ಠಾನಕ್ಕೆ ಬರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಚಿತ್ರದುರ್ಗ ನಗರ ವ್ಯಾಪ್ತಿಯ ೨೪ ಶಾಲೆಗಳಿಂದ ೨೦೦ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಎಸಿ ಡಾ.ಕೆ.ಜೆ. ಕಾಂತರಾಜ್, ನಗರಸಭೆ ಪೌರಾಯುಕ್ತೆ ಎಸ್. ಲಕ್ಷಿ÷್ಮÃ, ಶಿಕ್ಷಣ ಇಲಾಖೆ ಡಿವೈಪಿಸಿ ಹನುಮಂತಪ್ಪ, ವಿಷಯ ಪರಿವೀಕ್ಷಕ ಪ್ರಶಾಂತ್, ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ ಚಿತ್ರದುರ್ಗ ಪ್ರಾದೇಶಿಕ ಕಚೇರಿ ಪರಿಸರ ಅಽಕಾರಿ ಎಚ್.ವಿ. ಪಲ್ಲವಿ, ಉಪ ಪರಿಸರ ಅಽಕಾರಿ ಪಿ. ರಾಜೇಶ್, ಕಲಾ ಚೈತನ್ಯ ಸೇವಾ ಸಂಸ್ಥೆ ಕಾರ್ಯದರ್ಶಿ ನಾಗರಾಜ್‌ಬೇದ್ರೆ ಇತರರು ಇದ್ದರು.