ಚಿತ್ರದುರ್ಗದಲ್ಲಿ ಮಂಗಳವಾರ ನನ್ನ ರೇಷ್ಮೆ ನನ್ನ ಹೆಮ್ಮೆ ಅಭಿಯಾನದಡಿ ಏರ್ಪಡಿಸಿದ್ದ ರೈತರು ಮತ್ತು ವಿಜ್ಞಾನಿಗಳ ನಡುವಿನ ಸಂ ವಾದ, ವಿಚಾರ ವಿನಿಮಯ ಕರ‍್ಯಕ್ರಮವನ್ನು ಸಂಸದ ಗೋವಿಂದ ಎಂ.ಕಾರಜೋಳ ಉದ್ಘಾಟಿಸಿದರು. ಡಾ.ಯಲ್ಲಪ್ಪ ಹರಿಜನ್, ಎಸ್.ಬೋಜಣ್ಣ, ಡಾ.ವೈ.ಶ್ರೀನಿವಾಸಲು, ಪ್ರಶಾಂತ್, ಉಷಾ ಮತ್ತಿತರರು ಇದ್ದರು. 
ಚಿತ್ರದುರ್ಗ

ರೇಷ್ಮೆ ಉತ್ಪಾದನೆಯಲ್ಲಿ ಭಾರತ ಅಗ್ರಸ್ಥಾನಕ್ಕೇರಲಿ

ಪ್ರಮುಖ ಮುಖ್ಯಾಂಶಗಳು

  • ಸಂಸದ ಗೋವಿಂದ ಎಂ.ಕಾರಜೋಳ ಅಭಿಮತ
  • ನನ್ನ ರೇಷ್ಮೆ ನನ್ನ ಹೆಮ್ಮೆ ಅಭಿಯಾನದಡಿ ಸಂವಾದ
  • ಕೇಂದ್ರ ರೇಷ್ಮೆ ಮಂಡಳಿ

ಚಿತ್ರದುರ್ಗ:

ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಭಾರತ ಅಗ್ರಸ್ಥಾನಕ್ಕೇರುವ ನಿಟ್ಟಿನಲ್ಲಿ ಬೆಳೆಗಾರರು ಹಾಗೂ ವಿಜ್ಞಾನಿಗಳು ಶ್ರಮಿಸ ಬೇಕಿದೆ ಎಂದು ಸಂ ಸದ ಗೋವಿಂದ ಎಂ.ಕಾರಜೋಳ ಅಭಿಪ್ರಾಯಪಟ್ಟರು.

ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ಇಲಾಖೆ ಸಹಯೋಗದೊಂದಿಗೆ ನಗರದ ರೇಷ್ಮೆ ಇಲಾಖೆ ಉಪನಿರ್ದೇಶಕರ ಕಚೇರಿ ಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನನ್ನ ರೇಷ್ಮೆ ನನ್ನ ಹೆಮ್ಮೆ ಅಭಿಯಾನದಡಿ ರೈತರು ಮತ್ತು ವಿಜ್ಞಾನಿಗಳ ನಡುವಿನ ಸಂ ವಾದ, ವಿಚಾರ ವಿನಿ ಮಯ ಕರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಚೀನಾ ಮೊದಲು ಹಾಗೂ ಭಾರತ ೨ನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಕರ್ನಾಟಕ ಪ್ರಥಮ ಸ್ಥಾನ ದಲ್ಲಿದ್ದು, ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನಕ್ಕೇರಬೇಕಿದೆ. ಈ ನಿಟ್ಟಿನಲ್ಲಿ ಪೂರಕ ತಾಂತ್ರಿಕ ಸಂಶೋಧನೆಗಳ ಅಗತ್ಯವಿದೆ ಎಂದರು.
ರೈತ ಬೆಳೆಯದಿದ್ದರೆ ಉಣ್ಣಲು ಅನ್ನ, ಧರಿಸಲು ಬಟ್ಟೆ ಸಿಗದು. ಪ್ರತಿ ಕ್ಷೇತ್ರಕ್ಕೂ ಕÊಷಿಯೇ ಮೂಲಾಧಾರ. ರಿಯಲ್ ಎಸ್ಟೇಟ್ ಹೆಸರಲ್ಲಿ ಭೂಮಿ ಮಾರಾಟ ಮಾಡದೆ, ೧೪೦ ಕೋಟಿ ದೇಶವಾಸಿಗಳಿಗೆ ಅನ್ನ ನೀಡುವ ಪವಿತ್ರ ಕಾಯಕದಲ್ಲಿ ನಿರತರಾಗ ಬೇಕಿದೆ ಎಂದು ಸಲಹೆ ನೀಡಿದರು.
ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಯಲ್ಲಪ್ಪ ಹರಿಜನ್ ಅವರು ಮಾತನಾಡಿ, ರೇಷ್ಮೆ ಕÊಷಿಯಲ್ಲಿ ಹೊಸÀ ಸಂಶೋಧನೆ ಹಾಗೂ ಆಧುನಿಕ ತಂತ್ರಜ್ಞಾನಗಳ ನೇರ ವರ್ಗಾವಣೆಯಿಂದ ಕಚ್ಚಾ ರೇಷ್ಮೆ ಉತ್ಪಾದನೆ, ಉತ್ಪಾದಕತೆ ಹೆಚ್ಚಿಸುವ ಜತೆಗೆ ರೈತರ ಆ ದಾಯ ದ್ವಿಗುಣಗೊಳಿಸಲು ಸಾಧ್ಯವಿದೆ ಎಂದರು.
ಕೇAದ್ರ ರೇಷ್ಮೆ ಮಂಡಳಿಯಿAದ ದೇಶಾದ್ಯಂತ ೨೧೯ ಜಿಲ್ಲೆಗಳಲ್ಲಿ ೧೦೦ ದಿನಗಳ ಬÊಹತ್ ಅಭಿಯಾನ ನಡೆಯುತ್ತಿದೆ. ತಂತ್ರ ಜ್ಞಾನ ಅಭಿ ವÊದ್ಧಿಪಡಿಸಿದ ವಿಜ್ಞಾನಿಗಳೇ ನೇರ ರೈತರ ಬಳಿಗೆ ತೆರಳಿ ಮಾಹಿತಿ ಒದಗಿಸುವುದು ಈ ಅಭಿಯಾನದ ವಿಶೇಷವಾ ಗಿದೆ. ರೇಷ್ಮೆ ಕÊಷಿಯಲ್ಲಿ ರೈ ತರು ಎದುರಿಸುತ್ತಿರುವ ರೋಗಬಾಧೆ, ತಾಂತ್ರಿಕ ಸವಾಲುಗಳು ಹಾಗೂ ತಮ್ಮ ಅನುಭವಗಳನ್ನು ವಿಜ್ಞಾನಿಗಳೊಂದಿಗೆ ಹಂಚಿಕೊAಡು ಪರಿ ಹಾರ ಕಂಡುಕೊಳ್ಳಬೇಕು ಎಂದರು.
ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್.ಬೋಜಣ್ಣ, ಕೇಂದ್ರ ರೇಷ್ಮೆ ಮಂಡಳಿ ಚಿತ್ರದುರ್ಗ ಪ್ರಾದೇಶಿಕ ರೇಷ್ಮೆ ಕÊಷಿ ಸಂಶೋಧನಾ ಕೇಂ ದ್ರದ ವಿಜ್ಞಾನಿಗಳಾದ ಡಾ.ವೈ.ಶ್ರೀನಿವಾಸಲು, ಪ್ರಶಾಂತ್, ರೇಷ್ಮೆ ಸಹಾಯಕ ನಿರ್ದೇಶಕಿ ಉಷಾ ಮತ್ತಿತರರು ಇದ್ದರು.
ಪರಿಹಾರದ ಭರವಸೆ
ಕೇಂದ್ರದ ಯೋಜನೆಗಳ ಕುರಿತು ಮಾಹಿತಿ ನೀಡಿದ ಸಂಸದರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತÊತ್ವದ ಸರ್ಕಾರ ರೈತರ ಸ್ವಾವಲಂಬನೆಗೆ ಶ್ರಮಿಸುತ್ತಿದೆ ಎಂದರು. ರೈತರು, ಕÊಷಿ ಕಾರ್ಮಿಕರು ಹಾಗೂ ಶೋಷಿತ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರದ ಯೋಜನೆಗಳು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರ -Àಲಾನುಭವಿಗಳಿಗೆ ತಲುಪುತ್ತಿವೆ ಎಂದರಲ್ಲದೆ ವಿವಿಧ ಯೋಜನೆಗಳಡಿ ಜಿಲ್ಲೆಯ ಫಲಾನುಭವಿಗಳಿಗೆ ದೊರಕಿರುವ ಮಾಹಿತಿ ವಿವರಿಸಿದರು.
ಕಿಸಾನ್ ಸಮ್ಮಾನ್ ನಿಽ ಯೋಜನೆಯಡಿ ಜಿಲ್ಲೆಯ ೧,೪೨,೭೬೭ ರೈತರಿಗೆ ರೂ.೭೧೩.೭೨ ಕೋಟಿ ರೂ. ನೇರ ಹಣ ವರ್ಗಾವ ಣೆಯಾಗಿದೆ. ಪ್ರಧಾನಮಂತ್ರಿ -Àಸಲ್ ಬಿಮಾ ಯೋಜನೆಯಡಿ ಜಿಲ್ಲೆಯ ೩,೪೩,೦೦೦ ರೈತರು ೧೧೩ ಕೋಟಿ ರೂ.ಪ್ರೀಮಿಯಂ ಪಾವತಿಸಿದ್ದರು. ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿಯಾಗಿ ೭೨೨ ಕೋಟಿ ರೂ.ಬೆಳೆ ವಿಮೆ ಪರಿಹಾರ ಧನ ತಲುಪಿದೆ. ಅರ್ಹ ರೈತರಿಗೆ ವಿಮೆ ಹಣ ತಲುಪದೇ ಇದ್ದರೆ ಅಽಕಾರಿಗಳೊಂದಿಗೆ ಮಾತನಾಡಿ, ಪರಿಹಾರ ಕೊಡಿಸಲು ವ್ಯವಸ್ಥೆ ಮಾಡುವುದಾಗಿ ಸಂಸದರು ಭರವಸೆ ನೀಡಿದರು.
ಪ್ರಾದೇಶಿಕ ರೇಷ್ಮೆ ಕÊಷಿ ಸಂಶೋಧನಾ ಕೇಂದ್ರವಾಗಿ ಮಾರಘಟ್ಟ
ಬೆಂಗಳೂರಿನ ಸರ್ಜಾಪುರದ ಬಳಿಯ ಕೊಡತಿಯಲ್ಲಿದ್ದ ಪ್ರಾದೇಶಿಕ ರೇಷ್ಮೆ ಕÊಷಿ ಸಂಶೋಧನಾ ಕೇಂದ್ರವನ್ನು ಸ್ಥಳಾಂತರಿಸುವ ಮೂಲಕ ಮಾರಘಟ್ಟವನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.

ಉತ್ತರ ಕರ್ನಾಟಕದ ೩ ಘಟಕಗಳಾದ ರಾಣೆಬೆನ್ನೂರು, ಕೊಪ್ಪಳ ಮತ್ತು ಬೀದರ್ ವಿಸ್ತರಣಾ ಕೇಂದ್ರಗಳನ್ನು ಸಮನ್ವಯಗೊಳಿಸುತ್ತದೆ.

ಇದರ ಜತೆಗೆ ದಕ್ಷಿಣ ಕರ್ನಾಟಕದ ಮದ್ದೂರು ಮತ್ತು ಮಡಿವಾಳ ೨ ಘಟಕಗಳು, ಮಹಾರಾಷ್ಟದ ೪ ಮತ್ತು ಮಧ್ಯಪ್ರದೇಶದ ೧ ರೇಷ್ಮೆ ವಿಸ್ತರಣಾ ಕೇಂದ್ರಗಳು ಚಿತ್ರದುರ್ಗದ ಕೇಂದ್ರದ ವ್ಯಾಪ್ತಿಗೆ ಒಳಪಟ್ಟಿವೆ ಎಂದರು.

ಚಿತ್ರದುರ್ಗದ ಮಾರಘಟ್ಟದಲ್ಲಿ ೧೯೮೨ರಲ್ಲಿ ಪ್ರಾರಂಭವಾದ ರೇಷ್ಮೆ ಕÊಷಿ ಸಂಶೋಧನಾ ವಿಸ್ತರಣಾ ಕೇಂದ್ರ ಚಿತ್ರದುರ್ಗ, ಬ ಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳ ರೇಷ್ಮೆ ಬೆಳೆಗಾರರ ಅಗತ್ಯತೆ ಪೂರೈಸುತ್ತಿತ್ತು. ಈಗ ಈ ವಿಸ್ತರಣಾ ಕೇಂದ್ರವನ್ನು ರಾಣೇಬೆ ನ್ನೂರಿಗೆ ಸ್ಥಳಾಂತರಿಸಲಾಗಿದೆ.