ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಡಾ.ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆಯಲ್ಲಿ ಮೆಹಬೂಬ್ ಪಾಷ, ಎಂ.ಕೆ.ತಾಜ್‌ಪೀರ್, ಜಯಣ್ಣ, ಡಿ.ಎಸ್.ಸುದರ್ಶನ್, ಕೆ.ಪಿ.ಸಂಪತ್‌ಕುಮಾರ್, ಎಸ್.ಎನ್.ರವಿಕುಮಾರ್, ಕೆ.ಪಾಪಯ್ಯ, ಆರ್.ನರಸಿಂಹರಾಜು ಇತರರು ಇದ್ದರು. 
ಚಿತ್ರದುರ್ಗ

ಬಾಬೂಜಿ ಆದರ್ಶಗಳನ್ನು ಎಲ್ಲರೂ ಪಾಲಿಸಲಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಮೆಹಬೂಬ್ ಪಾಷ ಹೇಳಿಕೆ
  • ಡಾ.ಬಾಬುಜಗಜೀವನರಾಂ ಜಯಂತ್ಯುತ್ಸವ
  • ಆಹಾರ ಉತ್ಪಾದನೆಯಲ್ಲಿ ಭಾರತ ಇಂದು ಸ್ವಾವಲಂಬಿ
ಚಿತ್ರದುರ್ಗ: ಆಹಾರ ಉತ್ಪಾದನೆಯಲ್ಲಿ ಭಾರತ ಇಂದು ಸ್ವಾವಲಂಬಿಯಾಗಿದೆ ಎಂದರೆ ಅದಕ್ಕೆ ಕಾರಣ ಡಾ.ಬಾಬು ಜಗಜೀವನ ರಾಂ ಎಂದು ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್ ಪಾಷ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ ಜಯಂ ತಿ ಆಚರಣೆಯಲ್ಲಿ ಮಾತನಾಡಿ, ದೇಶ ಆಹಾರ ಸಮಸ್ಯೆ ಎದುರಿಸುತ್ತಿದ್ದಾಗ ಹೆಚ್ಚಿನ ಬೆಳೆಗೆ ರೈತರನ್ನು ಪ್ರೋತ್ಸಾಹಿಸಿ ಹಸಿರು ಕ್ರಾಂತಿಯ ಹರಿಕಾರ ಎನ್ನುವ ಖ್ಯಾತಿ ಪಡೆದರು. ಇವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕಿದೆ ಎಂದರು. 
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಎಐಸಿಸಿ ಅಧ್ಯಕ್ಷರಾಗಿದ್ದ ಬಾಬೂಜಿ ಅವರು ಸ್ವಾತಂತ್ರ‍್ಯ ಹೋರಾಟ ದಲ್ಲಿ ಪಾಲ್ಗೊಂಡಿದ್ದರು. ಪಂಡಿತ್ ಜವಾಹರಲಾಲ್ ನೆಹರು, ಇಂದಿರಾಗಾAಽ, ಲಾಲ್‌ಬಹದ್ದೂರ್ ಶಾಸ್ತಿç ಅವರ ಸಂಪುಟದಲ್ಲಿ ನಾನಾ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಪಾಕಿಸ್ತಾನ, ಚೀನಾ ನಮ್ಮ ದೇಶದ ಮೇಲೆ ಯುದ್ಧಕ್ಕೆ ಬಂದಾಗ ಭಾರತ ವನ್ನು ವಿಜಯಶಾಲಿಯಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. 
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯಣ್ಣ, ಜಿಲ್ಲಾ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ಡಿ.ಎಸ್.ಸುದರ್ಶನ್ ಮಾತನಾಡಿದರು. ಕೆ.ಪಿ.ಸಂಪತ್‌ಕುಮಾರ್, ಎಸ್.ಎನ್.ರವಿಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ, ಮಾಜಿ ಸದಸ್ಯ ಆರ್.ನರಸಿಂಹರಾಜು, ಚಿದಾನಂದಮೂರ್ತಿ, ಸುರೇಶ್ ಈಚಲನಾಗೇನಹಳ್ಳಿ, ಸೈಯದ್ ಸೈ-ÀÅಲ್ಲಾ, ಸೈಯದ್‌ಅಕ್ಬರ್ ಇತರರಿದ್ದರು.