ಆಡು ಮಲ್ಲೇಶ್ವರ ಝೂ 
ಚಿತ್ರದುರ್ಗ

ಆಡು ಮಲ್ಲೇಶ್ವರ ಕಿರು ಮೃಗಾಲಯದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್

೨೧ ಕೋಟಿ ರೂ.ಅನುದಾನದ ನಿರೀಕ್ಷೆ

ಡಿಪಿಎನ್ ಶ್ರೇಷ್ಠಿ , ಚಿತ್ರದುರ್ಗ

ನಗರದ ಜೋಗಿಮಟ್ಟಿ ವನ್ಯಜೀವಿಧಾಮ ವ್ಯಾಪ್ತಿಯ ಆಡುಮಲ್ಲೇಶ್ವರ ಕಿರು ಮೃಗಾಲಯದ ಅಭಿವೃದ್ಧಿಗೆ ಹೊಸ ಯೋಜನೆ ಸಿದ್ಧವಾಗುತ್ತಿದೆ.

ಕೆಎಂಇಆರ್‌ಸಿಯಿAದ ಅಂದಾಜು ೨೧ ಕೋಟಿ ರೂ.ಅನುದಾನದೊಂದಿಗೆ ಮೃಗಾಲಯದ ಮಾಸ್ಟರ್‌ಲೇ ಔಟ್ ಹಾಗೂ ಅನಿಮಲ್ ಕಲೆಕ್ಷನ್ ಪ್ಲ್ಯಾನ್‌ಗಳನ್ನು ಅನುಷ್ಠಾನಗೊಳಿಸಲು ಅರಣ್ಯ ಇಲಾಖೆ ಉದ್ದೇಶಿಸಿದೆ. ಈ ಹೊಸ ಯೋಜನೆಗಳಿಗೆ ಈಗಾಗಲೇ ಇಲಾಖೆ ಯೋಜನಾ ಮೌಲ್ಯಮಾಪನಾ ಸಮಿತಿ ಒಪ್ಪಿಗೆ ನೀಡಿದೆ.

ಸರ್ಕಾರದ ನಿರ್ದೇಶನದ ಮೇರೆಗೆ ಇದಕ್ಕೆ ಅಗತ್ಯ ಮತ್ತು ಪೂರಕ ಮಾಹಿತಿ ಕ್ರೋಡೀಕರಿಸಿರುವ ಇಲಾಖೆ, ಒಂದೆರಡು ದಿನಗಳಲ್ಲಿ ರಾಜ್ಯ ಮೃಗಾಲಯ ಪ್ರಾಽಕಾರ(ಝೆಡ್‌ಎಕೆ)ಹಾಗೂ ರಾಜ್ಯಸರ್ಕಾರದ ಮೂಲಕ ಕೇಂದ್ರೀಯ ಮೃಗಾಲಯ ಪ್ರಾಽಕಾರ(ಸಿಝೆಡ್‌ಎ)ಹೊಸ ಯೋಜನೆಗಳ ಡಿಪಿಆರ್‌ಗಳನ್ನು ಸಲ್ಲಿಸಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಪ್ರಾಣಿಗಳಿಗೆ ಹೊಸ ಎನ್‌ಕ್ಲೋಸರ್‌ಗಳ ನಿರ್ಮಾಣ. ಮೃಗಾಲಯಕ್ಕೆ ಹೊಸ ಪ್ರಾಣಿ, ಪಕ್ಷಿಗಳನ್ನು ತರುವ ಮೂಲಕ ಮೃಗಾಲಯದ ಆಕರ್ಷಣೆ ಹೆಚ್ಚಿಸಲು ಯೋಜಿಸಲಾಗಿದೆ. ಬಯಲು ಸೀಮೆ ಊಟಿ ಜೋಗಿಮಟ್ಟಿಯ ೨೧ ಎಕರೆ ವಿಶಾಲ ವಿಸ್ತೀರ್ಣದ ಈ ಮೃಗಾಲಯದಲ್ಲಿ ಈಚಿನ ಕೆಲ ವರ್ಷಗಳ ಹಿಂದೆ ತಂದಿರುವ ೨ ಹುಲಿಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿವೆ.

ಪ್ರತಿಧ್ವನಿಸಲಿದೆ ಸಿಂಹ ಘರ್ಜನೆ

ಉದ್ದೇಶಿತ ಹೊಸ ಯೋಜನೆಯಲ್ಲಿ ೨ ಸಿಂಹಗಳನ್ನು ಮೃಗಾಲಯಕ್ಕೆ ತರಲಾಗುತ್ತಿದೆ. ಇವುಗಳಿಗಾಗಿ ೧೨೦೦ ಚದರ ಮೀಟರ್ ವಿಸ್ತೀರ್ಣದ ಎನ್‌ಕ್ಲೋಸರ್ ನಿರ್ಮಿಸಲು ಉದ್ದೇಶಿಸಲಾಗಿದೆ. ೪ ವಿಭಾಗದ ಈ ಮಾಸ್ಟರ್ ಪ್ಲ್ಯಾನ್ ಮೂಲಕ ಮೃಗಾಲಯದ ಸಮಗ್ರ ಅಭಿವೃದ್ಧಿಗೆ ಯೋಜಿಸಲಾಗಿದೆ.

ಸುರಕ್ಷತೆ ಮತ್ತು ರಕ್ಷಣೆ

ಮÊಗಾಲಯದ ಹಳೆಯ ಪ್ರವೇಶ ದ್ವಾರದಿಂದ ಕರಡಿ ಆವರಣದವರೆಗೆ ಹಳೆಯ ಚೈನ್‌ಲಿಂಕ್ ಬೇಲಿ ತೆರವುಗೊಳಿಸಿ ೨೦೦ ಮೀಟರ್ ಕಾಂಪೌAಡ್ ನಿರ್ಮಾಣ, ಅಸ್ತಿತ್ವದಲ್ಲಿರುವ ಚೈನ್‌ಲಿಂಕ್ ಬೇಲಿಯ ಮೇಲೆ ೧.೮ ಕಿ.ಮೀ. ಸೌರ ಬೇಲಿ ಅಳವಡಿಕೆ. ನವೀಕರಿಸಬಹುದಾದ ಇಂಧನ ಬಳಸುವ ನಿಟ್ಟಿನಲ್ಲಿ ೩೫ ಕಿಲೋವ್ಯಾಟ್ ಸೌರ -ೆÆÃಟೋ ವೋಲ್ಟಾಯಿಕ್(ಎಸ್‌ಪಿವಿ)ವಿದ್ಯುತ್ ಉತ್ಪಾದನಾ ವ್ಯವಸ್ಥೆ ಸ್ಥಾಪನೆ. ೨೦ ಹೊಸ ಸಿಸಿಟಿವಿ ಕ್ಯಾಮರಾಗಳು. ೨.೫ ಕಿ.ಮೀ.ಭೂಗತ ವಿದ್ಯುತ್ ಮೂಲಸೌಕರ್ಯ ಅಳವಡಿಕೆ. ಒಳಚರಂಡಿ ಮಾರ್ಗದ ನಿರ್ವಹಣೆಗೆ ಕ್ರಮ ವಹಿಸಲಾಗಿದೆ.

ಸಂದರ್ಶಕರ ಸೌಲಭ್ಯಗಳು

ಕಲಾತ್ಮಕ ಪ್ರವೇಶ ದ್ವಾರದ(ಆರ್ಚ್)ಅಭಿವÊದ್ಧಿ. ಸಂದರ್ಶಕರ ಪ್ರವೇಶ ದ್ವಾರದಲ್ಲಿ ಕ್ಲಾಕ್‌ರೂಮ್, ಟಿಕೆಟ್ ಕೌಂಟರ್ ನಿರ್ಮಾಣ. ಪ್ರವೇಶ ರಸ್ತೆ ಮತ್ತು ಪಾರ್ಕಿಂಗ್‌ಗಾಗಿ ರೋಡ್ ಡಿವೈಡರ್‌ನೊಂದಿಗೆ ೧೫೫ ಮೀಟರ್ ಸಿಸಿ ರಸ್ತೆ ನಿರ್ಮಾಣ. ರೆಸ್ಟೋರೆಂಟ್, ಶಿಶು ಆರೈಕೆ ಕೊಠಡಿ. ಪಾರ್ಕಿಂಗ್ ಶೆಡ್‌ನೊಂದಿಗೆ ಸಂದರ್ಶಕರಿಗಾಗಿ ೨ ಬ್ಯಾಟರಿ ವಾಹನಗಳು.

ಮೃಗಾಲಯದಲ್ಲಿ ಕೃತಕವಾಗಿ ನಿರ್ಮಿಸಿರುವ ಕೊಳದ ಮಧ್ಯೆ ವನ ದೇವತೆ ಪ್ರತಿಮೆ ನಿರ್ಮಾಣ. ಬಯಲು ರಂಗ ಮಂದಿರ, ವ್ಯಾಖ್ಯಾನ ಕೇಂದ್ರ(ಐ್ಞಠಿಛ್ಟಿm್ಟಛಿಠಿZ್ಟಠಿಜಿಟ್ಞ ಇಛ್ಞಿಠಿಛ್ಟಿ) ಹಾಗೂ ೧೩ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್ಗಳ ಪೂರೈಕೆ ಮತ್ತು ಅಳವಡಿಕೆ.

ಪ್ರಾಣಿಗಳ ಆರೋಗ್ಯ ರಕ್ಷಣೆ

ಪ್ರಾಣಿಗಳ ರೋಗ ತಪಾಸಣೆ, ಚಿಕಿತ್ಸೆ ಮತ್ತು ಅಗತ್ಯ ಶಸ್ತç ಚಿಕಿತ್ಸಾ ಉಪಕರಣಗಳು. ಪ್ರಾಣಿಗಳ ಸ್ಥಳಾಂತರಕ್ಕೆ ಒಂದು ಕೇಜ್. ಒಂದು ಕ್ವಾರಂಟೈನ್ ವಾರ್ಡ್. ತ್ಯಾಜ್ಯದಹನ(ಇನ್ಸಿನರೇಟರ್)ಕೊಠಡಿ. ಆರು ಎರೆಹುಳು ಗೊಬ್ಬರ ತೊಟ್ಟಿಗಳ ನಿರ್ಮಾಣ. ಪ್ರಾಣಿಗಳ ಆವರಣ ಮತ್ತು ನೈಸರ್ಗಿಕ ಆವಾಸಸ್ಥಾನ.

ಹೊಸ ಎನ್‌ಕ್ಲೋಸರ್‌ಗಳು

ಒಂದೊAದು ಸರೀಸೃಪಗಳ ಉದ್ಯಾನವನ, ಜಲಪಕ್ಷಿಗಳ ಧಾಮ. ನಿಶಾಚರಿ ವಲಯ, ಮೊಸಳೆಗಳ ಆವರಣ, ನರಿಗಳು, ಸಿಂಹ ಹಾಗೂ ಉಷ್ಟçಪಕ್ಷಿ ಆವರಣ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

ಕೊಳದ ಅಭಿವೃದ್ಧಿ

ಮೃಗಾಲಯದಲ್ಲಿದ್ದ ಐತಿಹಾಸಿಕ ಪುಷ್ಕರಣಿಯನ್ನು ಆಕರ್ಷಕವಾಗಿ ಅಭಿವೃದ್ಧಿ ಪಡಿಸಲಾಗಿದೆ. ಅದರ ಸುತ್ತ ಬರಿಗಾಲಿನಲ್ಲಿ ನಡೆಯಬೇಕಾದ ಸೆನ್ಸರಿ ಪಾಥ್‌ವೇಯನ್ನು ನಿರ್ಮಿಸಲಾಗಿದೆ.

ಅದಾಯ, ವೀಕ್ಷಕರ ಸಂಖ್ಯೆ

ಕಳೆದ ಆರ್ಥಿಕ ಸಾಲಿನಲ್ಲಿ ಮೃಗಾಲಯಕ್ಕೆ ೧.೯೫ ಲಕ್ಷ ವೀಕ್ಷಕರು ಭೇಟಿ ಕೊಟ್ಟಿದ್ದು, ೯೮.೯೭ ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಪ್ರಸಕ್ತ ಸಾಲಿನಲ್ಲಿ ಸೆ.೨೭ರ ಅಂತ್ಯಕ್ಕೆ ೮೨ ಸಾವಿರ ಜನರು ಭೇಟಿ ನೀಡಿದ್ದು, ೪೭.೩೮ ಲಕ್ಷ ರೂ.ಆದಾಯ ಸಂಗ್ರಹವಾಗಿದೆ. ಪ್ರಸ್ತುತ ವಯಸ್ಕರಿಗೆ ತಲಾ ೫೫ ರೂ., ಮಕ್ಕಳಿಗೆ ತಲಾ ೩೫ ರೂ.ಪ್ರವೇಶ ದರವಿದೆ.

ಮೋಟಾರು ದ್ವಿಚಕ್ರ ವಾಹನಕ್ಕೆ ೨೦ ರೂ., ೩ ಮತ್ತು ೪ ಚಕ್ರಗಳ ಮೋಟಾರು ವಾಹನಗಳಿಗೆ ೫೦ ರೂ.ಹಾಗೂ ಟಿಟಿ, ಬಸ್ ಇತ್ಯಾದಿ ೭೫ ರೂ., ಪೋಟೊ ಕ್ಯಾಮರಾಕ್ಕೆ ೧೧೮ ರೂ. ಹಾಗೂ ವಿಡಿಯೊ ಕ್ಯಾಮರಾಕ್ಕೆ ೨೩೬ ರೂ. ಶುಲ್ಕವಿದೆ.

ಸದ್ಯ ಮೃಗಾಲಯದಲ್ಲಿ ೨ ಹುಲಿಗಳು, ೭ಚಿರತೆಗಳು, ೬ ಕರಡಿಗಳು, ೨ ಕಾಡು ಬೆಕ್ಕು, ಗೋಲ್ಡನ್‌ಜ್ಯಾಕಲ್ ೧೫, ಬ್ಲಾಕ್‌ಬಕ್ ೪೮, ಚುಕ್ಕೆ ಜಿಂಕೆ ೧೪, ನೀಲಗಾಯ್ ೮ ಹಾಗೂ ೨೨೫ ವಿವಿಧ ಪಕ್ಷಿಗಳು ಹಾಗೂ ೧೩ ವಿವಿಧ ಜಾತಿಯ ಹಾವುಗಳು ಮತ್ತು ಮೊಸಳೆಗಳಿವೆ.