ಸಾಮೂಹಿಕ ವಿವಾಹ ಕಲ್ಯಾಣ ಮಹೋತ್ಸವದಲ್ಲಿ ಸಂಸದ ಗೋವಿಂದ ಎಂ. ಕಾರಜೋಳ, ಶಿವಯೋಗಿ ಸಿ. ಕಳಸದ, ಡಾ. ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ ಮತ್ತಿತರರು ಇದ್ದರು. 
ಚಿತ್ರದುರ್ಗ

ಮಠಗಳಿಂದ ಸಾಮೂಹಿಕ ಕಲ್ಯಾಣಗಳಿಗೆ ನಾಂದಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸಂಸದ ಗೋವಿಂದ ಎಂ. ಕಾರಜೋಳ
  • ಆರ್ಥಿಕ ಹೊರೆ ಕಡಿಮೆ
  • ತಾಳ್ಮೆ
ಚಿತ್ರದುರ್ಗ: ಸಾಲ ಶೂಲದ ಹೊರೆ ತಪ್ಪಿಸುವ ಸಾಮೂಹಿಕ ಕಲ್ಯಾಣದ ಶ್ರೇಷ್ಠ ಕಾರ್ಯಕ್ಕೆ ೫೦ ವರ್ಷಗಳ ಹಿಂದೆಯೇ ನಾಡಿನ ಮಠಗಳು ನಾಂದಿ ಹಾಡಿದ್ದವು ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ಮುರುಘಾಮಠದಲ್ಲಿ ಶನಿವಾರ ಆಯೋಜಿಸಿದ್ದ ೩೬ನೇ ವರ್ಷದ ೯ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತ ನಾಡಿ, ಸಾಮೂಹಿಕ ವಿವಾಹ ಮಹೋತ್ಸವಗಳು ಬಡವರಿಗೆ ಆರ್ಥಿಕ ಹೊರೆ ಕಡಿಮೆ ಮಾಡುತ್ತವೆ. ಎಲ್ಲ ವರ್ಗದವರು ಒಂದೆಡೆ ಸೇರಿ ವಿವಾಹವಾಗುವಂತೆ ಮಾಡುವುದು ಸಾಮೂಹಿಕ ಕಲ್ಯಾಣದ ಉz್ದೆÃಶ ಎಂದು ತಿಳಿಸಿದರು. ನವ ದಂಪತಿಗಳು ಬಸವ ತತ್ವಗಳನ್ನು ಅಳವಡಿಸಿಕೊಂಡು ಜೀವನ ನಡೆಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಯೋಗಿ ಸಿ. ಕಳಸದ ಮಾತನಾಡಿ, ಮಠದಲ್ಲಿ ೩೬ ವರ್ಷಗ ಳಿಂದ ೨೫ ಸಾವಿರಕ್ಕೂ ಹೆಚ್ಚು ವಿವಾಹಗಳಾಗಿವೆ. ಇಲ್ಲಿ ಅಂತರ್ಜಾತಿ, ಅಂತರ ಧರ್ಮೀಯ ವಿವಾಹಗಳಾಗುತ್ತಿವೆ ಎಂದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ದಂಪತಿಗಳು ತಾಳ್ಮೆಯಿಂದ, ಕಷ್ಟದ ಸಮಯದಲ್ಲಿ ಹೊಂದಾಣಿಕೆಯಿAದ ಬದುಕಬೇಕು. ಮನಸ್ಸುಗಳು ಒಂದಾಗಿದ್ದರೆ ವಿಚ್ಛೇದನಗಳು ಕಡಿಮೆಯಾಗುತ್ತವೆ ಎಂದರು.
ಶರಣೆ ಜಯದೇವಿ , ಆಡಳಿತ ಮಂಡಳಿ ಸದಸ್ಯರಾದ ನಾಡೋಜ ಡಾ.ಪಿ.ಎಸ್. ಶಂಕರ್, ಎಸ್.ಎನ್. ಚಂದ್ರಶೇಖರ್, ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ ಇದ್ದರು. ಒಂದು ಅಂತರ್ಜಾತಿ ಸೇರಿ ೧೧ ಜೋಡಿಗಳ ವಿವಾಹ ನೆರವೇರಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ಸರ್ವಪಲ್ಲಿ ರಾಧಾಕಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನದ ಮೂಲಕ ಗೌರವ ಸಮರ್ಪಿಸಲಾಯಿತು.
ಜನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಜನಪದ ಗೀತೆಗಳನ್ನು ಹಾಡಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ನಿವೃತ್ತ ಪ್ರಾಚಾರ್ಯ ಟಿ.ಪಿ. ಜ್ಞಾನಮೂರ್ತಿ ಸ್ವಾಗತಿಸಿದರು.
ಮನ ಮೆಚ್ಚುವಂತಿರಲಿ
ಮದುವೆ ಎಂಬುದು ಅವಿನಾಭಾವ ಸಂಬAಧ. ಆದರೆ, ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಸಾಲ ಮಾಡಿಯಾದರೂ ಅದ್ಧೂರಿಯಾಗಿ ಮಾಡುತ್ತಾರೆ. ಇದು ಸಲ್ಲದು. ಮದುವೆ ಜನ ಮೆಚ್ಚುವಂತಾಗದೆ ಮನ ಮೆಚ್ಚುವಂತೆ ಆಗಬೇಕಿದೆ ಎಂದು ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.