ಸಮಾನ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಿತ್ರದುರ್ಗದ ಡಿಸಿ ಕಚೇರಿ ಆವರಣದಲ್ಲಿ ಬುಧವಾರ ಕೆಎಸ್‌ಆರ್‌ಟಿಸಿ ನೌಕರರ ಕೂಟದವರು ಪ್ರತಿಭಟನೆ ನಡೆಸಿದರು. ಆರ್.ಚಂದ್ರಶೇಖರ್, ಪ್ರೊ.ಕೆ.ಇ.ರಾಧಾಕೃಷ್ಣ, ಆಂಜಿನಪ್ಪ, ಜಯರಾಂ ರಾಥೋಡ್, ಲೋಕೇಶ್, ಹನುಮಂತಪ್ಪ, ರೇಣುಕಾ ಇತರರಿದ್ದರು.
- ಏ. ೨೧ರಿಂದ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಽ ನಿರಶನ
- ಬೆಂಗಳೂರಿನತ್ತ ಕೆಎಸ್‌ಆರ್‌ಟಿಸಿ ನೌಕರರ ಹೆಜ್ಜೆ
- ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ
ಚಿತ್ರದುರ್ಗ: ಸಮಾನ ವೇತನ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಹಲವರು ಬುಧವಾರ ಪ್ರತಿಭಟನೆ ನಡೆಸಿದರು.
ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವAತೆ ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿ, ದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದರು.
ಚುನಾವಣಾ ಪೂರ್ವದಲ್ಲಿ ಘೋಷಿಸಿದ ಪ್ರಣಾಳಿಕೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ೭ನೇ ವೇತನ ಆಯೋಗದ ಮಾದರಿಯಲ್ಲೇ ಸಮಾನ ವೇತನ ನೀಡಬೇಕು. ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
೨೦೨೦ರ ಜ. ೧ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಲಾಗಿದ್ದು, ೩೮ ತಿಂಗಳ ಹಿಂಬಾಕಿ ಪಾವತಿಸಬೇಕಿದೆ. ಆದರೆ, ಸರ್ಕಾರ ಈಗಾಗಲೇ ೨೬ ತಿಂಗಳ ಬಾಕಿ ವೇತನ ನೀಡಲು ಸುತ್ತೋಲೆ ಹೊರಡಿಸಿದ್ದು, ಇನ್ನುಳಿದ ೧೨ ತಿಂಗಳ ವೇತನವನ್ನು ಸರ್ಕಾರ ಅಥವಾ ಸಂಸ್ಥೆ ಭರಿಸಬೇಕು ಎಂದು ಒತ್ತಾಯಿಸಿದರು.
ಪಾದಯಾತ್ರೆ ಏ.೨೧ರಂದು ಬೆಂಗಳೂರು ತಲುಪಲಿದ್ದು, ಬೇಡಿಕೆ ಈಡೇರುವವರೆಗೂ ಅಲ್ಲಿನ ಸ್ವಾತಂತ್ರ‍್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಽ ನಿರಶನ ನಡೆಸಲಾಗುವುದು ಎಂದು ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ಎಚ್ಚರಿಸಿದರು.
ಪ್ರೊ.ಕೆ.ಇ.ರಾಧಾಕೃಷ್ಣ, ಆಂಜಿನಪ್ಪ, ಜಯರಾಂ ರಾಥೋಡ್, ಲೋಕೇಶ್, ಹನುಮಂತಪ್ಪ, ರೇಣುಕಾ ಇತರರಿದ್ದರು.