ಚಳ್ಳಕೆರೆ ತಾಲೂಕಿನ ದೊಡ್ಡಬೀರನಹಳ್ಳಿ ಗ್ರಾಮದ ಸಾಮಾಜಿಕ ದೌರ್ಜನ್ಯ ಸಂತ್ರಸ್ತರಿಗೆ ಶನಿವಾರ ತಾಲೂಕು ಕಚೇರಿಯಲ್ಲಿ ಶಾಸಕ ಟಿ. ರಘುಮೂರ್ತಿ ನಿವೇಶನದ ಹಕ್ಕುಗಳನ್ನು ವಿತರಿಸಿದರು. ಬಿ.ಆರ್. ಮುನಿವೆಂಕಟಪ್ಪ, ಕಂದಾಯ ನಿರೀಕ್ಷಕ ರಾಜೇಶ್, ಪ್ರಕಾಶ್, ಗಿರೀಶ್ ಇದ್ದರು. distribution
- ಸಾಮಾಜಿಕ ದೌರ್ಜನ್ಯಕೊಳಗಾದ 32 ಕುಟುಂಬಕ್ಕೆ ನಿವೇಶನ ಹಕ್ಕುಪತ್ರ ವಿತರಣೆ
ಚಳ್ಳಕೆರೆ: ಸರ್ಕಾರ ಜನಪರ ಯೋಜನೆಗಳನ್ನು ಅನುಷ್ಠಾನ ಗೊಳಿಸಿದ್ದು, ಅವುಗಳ ಪ್ರಯೋಜನ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. distribution
ದೊಡ್ಡಬೀರನಹಳ್ಳಿಯಲ್ಲಿ ಸಾಮಾಜಿಕ ದೌರ್ಜ ನ್ಯಕ್ಕೆ ಒಳಗಾಗಿದ್ದ 32 ಕುಟುಂಬಗಳ ಸಂತ್ರಸ್ತರಿಗೆ ತಾಲೂಕು ಕಚೇರಿಯಲ್ಲಿ ಶನಿವಾರ ನಿವೇಶನದ ಹಕ್ಕುಪತ್ರ ವಿತರಿಸಿ ಮಾತನಾಡಿದರು.
2016ರಲ್ಲಿ ಜರುಗಿದ ಗಲಾಟೆಯ ಸಂತ್ರಸ್ತರೆಂದು ಗುರುತಿಸಿದ್ದ ಫಲಾನುಭವಿಗಳಿಗೆ ಈಗಾಗಲೇ ಸೌಲಭ್ಯ ನೀಡಲಾಗಿದೆ. ಒಟ್ಟು ಫಲಾನುಭವಿಗಳ ನಿವೇಶನಕ್ಕಾಗಿ ಐದು ಎಕರೆ ಗೋಮಾಳ ಜಮೀನಿನನಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ 32 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ತಿಳಿಸಿದರು.
ಗಲಾಟೆ ಹಿನ್ನೆಲೆ: ಚಳ್ಳಕೆರೆ ತಾಲೂಕು ಕೇಂದ್ರದಿಂದ 48 ಕಿಮೀ ದೂರದ ದೊಡ್ಡಬೀರನಹಳ್ಳಿಯಲ್ಲಿ ಎಸ್ಸಿ, ಎಸ್ಟಿ, ಒಕ್ಕಲಿಗ, ಕಮ್ಮಾರ, ಮಡಿವಾಳ, ಗೊಲ್ಲ ಸಮುದಾಯಗಳಿವೆ. 2016 ರಲ್ಲಿ ಕೂಲಿಗೆ ಕರೆಯುವ ವಿಚಾರದಲ್ಲಿ ಎಸ್ಸಿ ಮತ್ತು ಮೇಲ್ಜಾತಿಯವರ ನಡುವೆ ಗಲಾಟೆಯಾಗಿತ್ತು. ಕೂಲಿ ಕೆಲಸಕ್ಕೆ ಬರುತ್ತೇವೆಂದು ಮುಂಗಡವಾಗಿ ಹಣ ಪಡೆದು ಕೂಲಿಗೆ ಬರಲು ನಿರಾಕರಿಸಿದರೆಂದು ಮೇಲ್ಜಾತಿಯವರು ದೌರ್ಜನ್ಯಕ್ಕೆ ಮುಂದಾದ ಹಿನ್ನೆಲೆಯಲ್ಲಿ ಎರಡು ಸಮುದಾಯಗಳ ನಡುವೆ ಗಂಭೀರ ಗಲಾಟೆ ನಡೆದಿತ್ತು.
ಅಧಿಕಾರಿಗಳು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯ ನೀಡುವ ಭರವಸೆ ನೀಡಿದ್ದರು. ಹೇಳಿದಂತೆ ನಡೆದುಕೊಳ್ಳದ ಅಧಿಕಾರಿಗಳ ವಿರುದ್ಧ ಶೋಷಣೆಗೊಳಗಾದ ಜನಾಂಗಕ್ಕೆ ಜಮೀನಿನ ಸಾಗುವಳಿ ಚೀಟಿ, ಮನೆ ಮಂಜೂರಾತಿ, ನಿವೇಶನ ಹಕ್ಕುಪತ್ರ, ಗಂಗಾ ಕಲ್ಯಾಣ ಯೋಜನೆ, ಸಾಲ ಸೌಲಭ್ಯ ನೀಡಬೇಕೆಂದು ಜಿಲ್ಲಾ ಕೇಂದ್ರ ಮತ್ತು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿರಂತರ ಪ್ರತಿಭಟನೆ ನಡೆಸಲಾಗಿತ್ತು. ಸಂತ್ರಸ್ತರ ನೆರವಿಗೆ ಸಚಿವ ಆಂಜನೇಯ ಬರಲಿಲ್ಲ ಎಂದು ಆರೋಪಿಸಿ ದಸಂಸ ಸಂಘಟನೆಗಳ ಸಹಯೋಗದಲ್ಲಿ ಒಮ್ಮೆ ಚಿತ್ರದುರ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಆಂಜನೇಯ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡಲು ಮುಂದಾಗಿದ್ದ ಕೆಲ ಪ್ರತಿಭಟನಕಾರರನ್ನು ಬಂಧಿಸಲಾಗಿತ್ತು.