ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆ ಶ್ರೀಮಠದಲ್ಲಿ ಸಾಮೂಹಿಕ ಲಿಂಗ ದೀಕ್ಷೆ ಕಾರ್ಯಕ್ರಮವನ್ನು ಇಳಕಲ್ ಸಂಸ್ಥಾನ ಮಠದ ಡಾ. ಗುರುಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ಡಾ. ಬಸವಲಿಂಗ ಸ್ವಾಮೀಜಿ, ಎಂ.ಬಿ. ಭೋಗೇಶ್‌ಗೌಡ, ಪಿ.ಆರ್. ಕಾಂತರಾಜ, ಡಾ. ರಂಗಪ್ಪ, ಕೆ.ಓ. ಶಿವಣ್ಣ, ಎಂ. ನುಂಕೇಶ, ಶಂಕ್ರಪ್ಪ, ಬಸವರಾಜ ಇತರರಿದ್ದರು. Secular 
ಚಿತ್ರದುರ್ಗ

ಬಸವತತ್ವದ ಬೆಳಕು ಪಸರಿಸಿದ ಮಹಾಂತ ಶ್ರೀ Secular

ಪ್ರಮುಖ ಮುಖ್ಯಾಂಶಗಳು

  • ಇಳಕಲ್ ಮಠದ ಸ್ವಾಮೀಜಿ ಹೇಳಿಕೆ
  • ಸಿದ್ದಯ್ಯನಕೋಟೆಯಲ್ಲಿ ಸಾಮೂಹಿಕ ಲಿಂಗದೀಕ್ಷೆ
ಮೊಳಕಾಲ್ಮೂರು: ಜಾತ್ಯತೀತ ನಿಲುವು ಹೊಂದಿದ್ದ ಚಿತ್ತರಗಿ ಸಂಸ್ಥಾನದ ಡಾ. ಮಹಾಂತ ಅಪ್ಪಗಳು ಎಲ್ಲ ವರ್ಗದ ಜನರಿಗೂ ಇಷ್ಟಲಿಂಗ ದೀಕ್ಷೆ ನೀಡಿ ಬಸವತತ್ವದ ಬೆಳಕು ಪಸರಿಸಿದ್ದಾರೆ ಎಂದು ಇಳಕಲ್ ಸಂಸ್ಥಾನ ಮಠದ ಡಾ. ಗುರು ಮಹಾಂತ ಸ್ವಾಮೀಜಿ ಹೇಳಿದರು. Secular
ತಾಲೂಕಿನ ಸಿದ್ದಯ್ಯನಕೋಟೆ ಶ್ರೀಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಲಿಂಗ ದೀಕ್ಷೆ ಕಾರ್ಯಕ್ರಮದಲ್ಲಿ ಸಾನ್ನಿದ್ಯವಹಿಸಿ ಮಾತನಾಡಿದರು.
ಹನ್ನೆರಡನೇ ಶತಮಾನದ ಬಸವಾದಿ ಶರಣರ ಹಾದಿಯಲ್ಲೇ ಸಾಗಿದ ಅಪ್ಪಗಳ ಸಮಾನತೆ, ಕಾಯಕ ತತ್ವ ಸರ್ವ ಸಮಾಜಕ್ಕೂ ಉತ್ತಮ ಜೀವನ ಕಲ್ಪಿಸುವ ಸಂಸ್ಕಾರ ಅಡಗಿದೆ ಎಂದರು.
ಶಿರೂರು ಶ್ರೀಮಠದ ಡಾ. ಬಸವಲಿಂಗ ಸ್ವಾಮೀಜಿ ಮಾತನಾಡಿ, ಬರದ ನಾಡಿನಲ್ಲಿ ಎಲೆಮರೆ ಕಾಯಂತಿರುವ ಸಿದ್ದಯ್ಯನಕೋಟೆ ಶ್ರೀಮಠವು ಬಡ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿದೆ. ಮಠಕ್ಕೆ ಆರ್ಥಿಕ ಮೂಲಗಳು ಇಲ್ಲದಿದ್ದರೂ ಭೂಮಿಯಲ್ಲಿ ಬೆಳೆ ಬೆಳೆದು ನೂರಾರು ಮಕ್ಕಳಿಗೆ ಆಶ್ರಯ ನೀಡಲಾಗಿದೆ. ಮಠ ಚಿಕ್ಕದಾದರೂ ವಿಶಾಲ ಹೃದಯ ಶ್ರೀಮಂತಿಕೆ ಹೊಂದಿದೆ ಎಂದರು.
ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂ.ಬಿ. ಭೋಗೇಶ್‌ಗೌಡ, ಪಿ.ಆರ್. ಕಾಂತರಾಜ, ಡಾ. ರಂಗಪ್ಪ, ಕೆ.ಓ. ಶಿವಣ್ಣ, ಎಂ. ನುಂಕೇಶ, ಶಂಕ್ರಪ್ಪ, ಬಸವರಾಜ, ಶರಣೇಶ, ಸಂಧ್ಯಾ, ಲಕ್ಷ್ಮೀದೇವಿ, ಈಶ್ವರಮ್ಮ, ದೀಪಾ, ಸುನೀತಾ, ಅಕ್ಕಮಹಾದೇವಿ, ಮಲ್ಲಿಕಾರ್ಜುನ, ನವೀನ್, ಚೇತನ, ಎಂ.ಬಿ. ಮೋಹನ ಇತರರಿದ್ದರು.