ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಡಾ.ಎನ್.ಎಸ್. ಮಹಂತೇಶ್, ಆರ್. ಶಿವಣ್ಣಗಂಜಿಗಟ್ಟೆ, ಎಂ.ಕೆ. ತಾಜ್‌ಪೀರ್, ಡಿ.ಎನ್. ಮೈಲಾರಪ್ಪ, ಬಿ.ಎಂ. ಗೋವಿಂದರಾಜ್, ಬಿ.ಎಂ. ಗುರುನಾಥ್, ಬಿ. ರಂಗಮ್ಮ, ಬಿ.ರಾಮಪ್ಪ, ಕೆ.ಆರ್. ಮಂಜುನಾಥ್, ಡಾ. ಬಸವರಾಜು, ಲಕ್ಷ÷್ಮಣ್, ಟಿ. ರುದ್ರೇಶ್, ಪರಶುರಾಮ್, ರಂಗಸ್ವಾಮಿ ಇತರರು ಇದ್ದರು. 
ಚಿತ್ರದುರ್ಗ

ಮಡಿವಾಳ ಮಾಚಿದೇವರು ವಚನ ಸಾಹಿತ್ಯದ ಸಂರಕ್ಷಕ

ಪ್ರಮುಖ ಮುಖ್ಯಾಂಶಗಳು

  • ಇತಿಹಾಸ ಸಂಶೋದಕ ಡಾ.ಎನ್.ಎಸ್. ಮಹಂತೇಶ ಅಭಿಪ್ರಾಯ
  • ಜಿಲ್ಲಾಡಳಿತದಿಂದ ಜಯಂತಿ ಆಚರಣೆ
  • ನಂಬಿಕೆ
ಚಿತ್ರದುರ್ಗ: ಹನ್ನೇರಡನೆ ಶತಮಾನದ ಸಾಮಾಜಿಕ ಕ್ರಾಂತಿ ಇತಿಹಾಸದಲ್ಲಿ ಕಾಯಕಯೋಗಿ ಮಡಿವಾಳ ಮಾಚಿದೇವರು ಶರಣ ಸಂಕುಲ ಮತ್ತು ವಚನ ಸಾಹಿತ್ಯದ ರಕ್ಷಾಕವಚವಾಗಿ ಕಾರ್ಯನಿರ್ವಹಿಸಿದ್ದರು ಎಂದು ಇತಿಹಾಸ ಸಂಶೋದಕ, ಪ್ರಾಧ್ಯಾಪಕ ಡಾ.ಎನ್.ಎಸ್. ಮಹಂತೇಶ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಿಸಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಮಾಚಿದೇವರು ನಂಬಿಕೆ ಆಧಾರದ ಮೇಲೆ ಬದುಕಿದವರಲ್ಲ. ಅವರು ವೇದ, ಶಾಸ್ತç, ಪುರಾಣ ಮತ್ತು ಆಗಮಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದವರು. ಇವುಗಳು ಸಮಾಜಕ್ಕೆ ಎಷ್ಟು ಪೂರಕ ಎಂಬುದನ್ನು ತಾರ್ಕಿಕವಾಗಿ ವಿವರಿಸುವ ಮೂಲಕ ಅಂದಿನ ಸಮಾಜದಲ್ಲಿ ಅರಿವು ಮೂಡಿಸಿದ್ದರು ಎಂದರು.
ಜನರ ಅಜ್ಞಾನ ತೊಳೆಯುವ ಶಕ್ತಿ ಮಾಚಿದೇವರಿಗೆ ಇದೆ ಎಂದು ಬಸವಣ್ಣನವರೇ ಕೊಂಡಾಡಿದ್ದಾರೆ. ಶರಣ ಚಳವಳಿ ಇತಿಹಾಸ ದಲ್ಲಿ ವೀರ ಮತ್ತು ದೇವ ಎಂಬ ಬಿರುದಾಂಕಿತ ಏಕೈಕ ಶರಣ ಮಡಿವಾಳ ಮಾಚಿದೇವರು. ಅಪ್ರತಿಮ ಕಾಯಕ ನಿಷ್ಠೆ, ನಿರ್ಭೀತ ವ್ಯಕ್ತಿತ್ವ ಮತ್ತು ವೈಚಾರಿಕ ಧೈರ್ಯ ಇಂದಿಗೂ ಆದರ್ಶಪ್ರಾಯವಾಗಿದೆ. ಮಹಾನ್ ಚೇತನವಾಗಿ ಅಜರಾಮರರಾಗಿದ್ದಾರೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ ಮಾತನಾಡಿ, ಮಡಿವಾಳ ಅಭಿವೃದ್ಧಿ ನಿಗಮದ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮಶೀಲರಾಗುವಂತೆ ಸಮುದಾಯಕ್ಕೆ ಸಲಹೆ ನೀಡಿದರು.
ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಽಕಾರದ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ,
ತಹಸೀಲ್ದಾರ್ ಬಿ.ಎಂ. ಗೋವಿಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ, ರಾಜ್ಯ ಮಡಿವಾಳರ ಸಂಘದ ಗೌರವಾಧ್ಯಕ್ಷೆ ಬಿ. ರಂಗಮ್ಮ, ಜಿಲ್ಲಾಧ್ಯಕ್ಷ ಬಿ. ರಾಮಪ್ಪ, ಕಾರ್ಯದರ್ಶಿ ಕೆ.ಆರ್. ಮಂಜುನಾಥ್, ಗೌರವಾಧ್ಯಕ್ಷ ಡಾ. ಬಸವರಾಜು, ಮಡಿವಾಳ ಮಾಚಿದೇವರ ದೇವಾಲಯ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಲಕ್ಷ÷್ಮಣ್, ಅಧ್ಯಕ್ಷ ಟಿ. ರುದ್ರೇಶ್, ಪರಶುರಾಮ್, ರಂಗಸ್ವಾಮಿ,ಪ್ರಕಾಶ್, ಮಂಜುನಾಥ್, ಮಲ್ಲಿಕಾರ್ಜುನ, ಪುರುಷೋತ್ತಮ, ಶ್ರೀನಿವಾಸ್, ಪೂಜಾರಿ ಯಲ್ಲಪ್ಪ, ರಮೇಶ, ಗೋಪಾಲಣ್ಣ, ಭೋವಿ ಸಮಾಜದ ತಿಮ್ಮಣ್ಣ ಮತ್ತಿತರ ಪ್ರಮುಖರು ಇದ್ದರು.