ಚಿತ್ರದುರ್ಗದಲ್ಲಿ ಪಂಚಾಯತ್‌ರಾಜ್ ದಿವಸ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಜಿಪಂ ಸಿಇಒ ಡಾ.ಎಸ್.ಆಕಾಶ್ ಉದ್ಘಾಟಿಸಿದರು. ಬಿ.ಎಂ.ದಿಲೀಪ್‌ಕುಮಾರ್, ಡಾ. ರಂಗಸ್ವಾಮಿ, ಸಿ.ಎಸ್. ಗಾಯತ್ರಿ, ಮಾಲತೇಶ್ ಮುದ್ದಜ್ಜಿ, ಆರ್. ಪಾತಣ್ಣ ಇತರರು ಇದ್ದರು. 
ಚಿತ್ರದುರ್ಗ

ಒತ್ತಡ ನಿಯಂತ್ರಣಕ್ಕೆ ಅಗತ್ಯವಿದೆ ಜೀವನ ಶೈಲಿ ಬದಲಾವಣೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ಡಾ.ಎಸ್. ಆಕಾಶ್ ಅನಿಸಿಕೆ
  • ಪಂ.ರಾಜ್ ನೌಕರರಿಗೆ ಆರೋಗ್ಯ ತಪಾಸಣೆ ಶಿಬಿರ
  • ಪಂಚಾಯತಿ ಅಭಿವೃದ್ಧಿ ಅಽಕಾರಿಗಳ ಕ್ಷೇಮಾಭಿವೃದ್ಧಿ ಸಂಘ
ಚಿತ್ರದುರ್ಗ: ಇಂದಿನ ದಿನಮಾನಗಳಲ್ಲಿ ಎಲ್ಲರೂ ಒತ್ತಡದಲ್ಲಿ ಕೆಲಸ ನಿರ್ವಹಿಸುವಂತಾಗಿದೆ ಎಂದು ಜಿಪಂ ಸಿಇಒ ಡಾ.ಎಸ್. ಆಕಾಶ್ ಕಳವಳ ವ್ಯಕ್ತಪಡಿಸಿದರು.
ಜಿಪಂ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ, ಎಸ್‌ಜೆಎಂ ದಂತ ವೈದ್ಯ ಕಾಲೇಜು, ಇಂಡಿಯಾನ ಹಾರ್ಟ್ ಸೆಂಟರ್, ಸ ರ್ಕಾರಿ ವೈದ್ಯಕೀಯ ಕಾಲೇಜು, ಆರೋಗ್ಯ, ಆಯುಷ್ ಇಲಾಖೆಗಳು ಮತ್ತು ಪಂಚಾಯತಿ ಅಭಿವೃದ್ಧಿ ಅಽಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಪಂಚಾಯತ್‌ರಾಜ್ ದಿವಸದ ಅಂಗವಾಗಿ ಜಿಪಂನಲ್ಲಿ ಪಂಚಾಯತ್‌ರಾಜ್ ಇಲಾಖೆ ನೌಕರರಿಗೆ ಶುಕ್ರ ವಾರ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಒತ್ತಡ ನಿಯಂತ್ರಣಕ್ಕೆ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕಿದೆ. ಬೆಳಗ್ಗೆ ಬೇಗನೆ ಏಳಬೇಕು. ಸಂಜೆ ಸೂರ್ಯ ಮುಳುಗುವ ಮೊ ದಲು ಊಟ ಮಾಡಿದರೆ ಉತ್ತಮ. ವಾರಕ್ಕೆ ಒಮ್ಮೆಯಾದರೂ ಉಪವಾಸವಿರಬೇಕು. ಯೋಗ, ಧ್ಯಾನ, ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಹಕಾರಿಯಾಗಲಿದೆ ಎಂದರು.
ರಾಜ್ಯ ಪಂಚಾಯತ್ ಅಭಿವೃದ್ಧಿ ಅಽಕಾರಿಗಳ ಸಂಘದ ಅಧ್ಯಕ್ಷ ಬಿ.ಎಂ. ದಿಲೀಪ್‌ಕುಮಾರ್ ಮಾತನಾಡಿ, ಒತ್ತಡದಲ್ಲಿ ಕೆಲಸ ನಿರ್ವ ಹಿಸುತ್ತಿರುವ ಪಿಡಿಒಗಳು ಹÊದಯ ಸಂಬಂಽ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಒತ್ತಡ ರಹಿತ ಜೀವನಕ್ಕೆ ಆಟೋಟ ಜತೆಗೆ ಸ್ಮಾರ್ಟ್ವರ್ಕ್ ಅಗತ್ಯವಿದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಮುಖ್ಯ ಯೋಜನಾಽಕಾರಿ ಸಿ.ಎಸ್. ಗಾಯತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಡಾ.ಜಿ.ಪಿ. ರೇಣುಪ್ರಸಾದ್, ಜಿಲ್ಲಾ ಶಸöಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ, ಜಿಲ್ಲಾ ಆಯುಷ್ ಅಽಕಾರಿ ಡಾ. ಚಂ ದ್ರಕಾಂತ್ ನಾಗಸಮುದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಆರ್.ಪಾತಣ್ಣ ಇತರರು ಇದ್ದರು.
೭೫೦ ನೌಕರರಿಗೆ ಆರೋಗ್ಯ ತಪಾಸಣೆ
ಜಿಲ್ಲೆಯ ೭೫೦ಕ್ಕೂ ಹೆಚ್ಚು ಪಂಚಾಯತ್ ರಾಜ್ ನೌಕರರು ನಾನಾ ಆರೋಗ್ಯ ಸೇವೆಗಳನ್ನು ಪಡೆದಿದ್ದಾರೆ ಎಂದು ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಆರ್. ಪಾತಣ್ಣ ಮಾಹಿತಿ ನೀಡಿದರು.
೧೮೦ಕ್ಕೂ ಹೆಚ್ಚು ನೌಕರರು ಹೃದಯ ತಪಾಸಣೆ, ನೇತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ರೆ-Àರ್ ಮಾಡಲಾಗಿದೆ. ಚಿತ್ರದುರ್ಗ ತಾಲೂಕು ಎಂ.ಕೆ. ಹಟ್ಟಿ ಗ್ರಾಪಂ ಪಿಡಿಒ ಆರ್. ಸಂತೋಷ್‌ಕುಮಾರ್ ಅವರು ೬೦ನೇ ಬಾರಿಗೆ ರಕ್ತದಾನ ಮಾಡಿ ಗಮನಸೆಳೆದಿದ್ದಾರೆ ಎಂದರು.