ಬಿಸಿಯೂಟ ಅಡುಗೆ ಮನೆ  
ಚಿತ್ರದುರ್ಗ

ಬಿಸಿಯೂಟ ಸುಗಮ ವಿತರಣೆ ಕ್ರಮಕ್ಕೆ ಡಿಸಿಗಳಿಗೆ ಪತ್ರ

ಪ್ರಮುಖ ಮುಖ್ಯಾಂಶಗಳು

  • ಅನಿಲಕ್ಕೆ ಕೊರತೆಯಾಗಂತೆ ಎಚ್ಚರವಹಿಸಲು ಶಿಕ್ಷಣ ಇಲಾಖೆ ಆಯುಕ್ತರ ಸೂಚನೆ
  • ಏಪ್ರಿಲ್೧೦ರವರೆಗೆ ಮಧ್ಯಾಹ್ನದ ಉಪಹಾರ ವಿತರಣೆ
  • ಬಿಸಿಯೂಟ ಯೋಜನೆ
ಚಿತ್ರದುರ್ಗ: ರಾಜ್ಯದಲ್ಲಿ ಬಿಸಿಯೂಟ ಯೋಜನೆಗೆ ಅಡುಗೆ ಅನಿಲ ಸಿಲಿಂಡರ್‌ನ ತೊಂದರೆಯಾಗದAತೆ ಗಮನ ಹರಿಸಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ರಾಜ್ಯದ ಎಲ್ಲ ಜಿಲ್ಲಾಽಕಾರಿಗಳನ್ನು ಕೋರಿದ್ದಾರೆ.
ಸರ್ಕಾರಿ ಮತ್ತು ಅನುದಾನಿತ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಪಿಎಂ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ಮಧ್ಯಾಹ್ನ ಬಿಸಿಯೂಟ ವಿತರಿಸಲಾಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದ ಏಪ್ರಿಲ್ ೧೦ರವರೆಗೆ ತಮ್ಮ ವ್ಯಾಪ್ತಿಯ ಯಾವ ಶಾಲೆಯಲ್ಲೂ ಎಲ್‌ಪಿಜಿ ಸಿಲಿಂಡರ್ ಕೊರತೆಯಾಗದಂತೆ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಲು ಜಿಪಂ ಸಿಇಒಗಳಿಗೂ ಆಯಕ್ತರು ಕೋರಿದ್ದಾರೆ.
ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಸಿದ್ಧಪಡಿಸಲು ಎಲ್‌ಪಿಜಿ ಸಿಲಿಂಡರ್ ಕೊರತೆ ಯಾಗ ಬಹುದೆನ್ನುವ ಆತಂಕದಿAದ ಆಯಕ್ತರು ಮಾ.೧೧ರಂದು ಜಿಲ್ಲಾಽಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿಲ ಪೂರೈಕೆ ಯಲ್ಲಿ ತೊಂದರೆಯಾಗಬಾರದೆAದು ಜಿಲ್ಲಾಽಕಾರಿ ತಮ್ಮ ವ್ಯಾಪ್ತಿಯ ಗ್ಯಾಸ್ ಏಜೆನ್ಸಿಗಳಿಗೆ ನಿರ್ದೇಶನ ನೀಡುವ ಸಾಧ್ಯತೆ ಇದೆ.
ಚಿತ್ರದುರ್ಗ ಜಿಲ್ಲೆಯ ೧೯೨ ಶಾಲೆಗಳ ೧,೪೦,೪೧೯ ವಿದ್ಯಾರ್ಥಿಗಳು ಬಿಸಿಯೂಟದ ಪ್ರಯೋಜನ ಪಡೆಯುತ್ತಿದ್ದಾರೆ. ಇದ ರೊಂ ದಿಗೆ ಮೊಟ್ಟೆ/ಬಾಳೆಹಣ್ಣು ಕೊಡಲಾಗುತ್ತಿದ್ದು, ಇದರ ಅನುದಾನ ಬಾಕಿ ಮೊತ್ತ (ಜನವರಿ ಮತ್ತು ಫೆಬ್ರವರಿ)ವನ್ನು ಇಲಾಖೆ ಬಿಡು ಗಡೆಮಾಡಿದೆ. ಸದ್ಯಕ್ಕೆ ಬಿಸಿಯೂಟಕ್ಕೆ ಅನಿಲದ ಕೊರತೆ ಆಗಿಲ್ಲವೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮ ಹಂತೇಶ್ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅಡುಗೆ ಅನಿಲ ಪೂರೈಕೆದಾರರೊಂದಿಗೆ ಈಗಾಗಲೇ ಸಭೆ ನಡೆಸಿರುವ ಡಿಸಿ ಟಿ. ವೆಂಕಟೇಶ್ ಅವರು, ಜಿಲ್ಲೆಯಲ್ಲಿ ಅಡುಗೆ ಅನಿಲದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಗÊಹ ಬಳಕೆ ಅಡುಗೆ ಅ ನಿಲದ ಸಿಲಿಂಡರ್‌ನ್ನು ವಾಣಿಜ್ಯ ಬಳಕೆಗೆ ಕೊಟ್ಟಿದ್ದು ಕಂಡು ಬಂದರೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
ಇಂದಿರಾ ಕ್ಯಾಂಟಿನ್‌ಗಳಿಗೆ ಇಲ್ಲ ಆತಂಕ
ಚಿತ್ರದುರ್ಗ ಜಿಲ್ಲೆಯಲ್ಲಿ ಎಂಟು ಇಂದಿರಾ ಕ್ಯಾಂಟಿನ್‌ಗಳಿದ್ದು, ಎಲ್ಲೂ ಅಡುಗೆ ಅನಿಲದ ತೊಂದರೆಯಾಗಿಲ್ಲ ಎಂದು ನಗರಾಭಿವೃದ್ಧಿ ಕೋಶದ ಅಽಕಾರಿಗಳು ಸ್ಪಷ್ಟಪಡಿಸಿದ್ದಾರೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ನಗರಸಭೆಗಳ ವ್ಯಾಪ್ತಿಯಲ್ಲಿ ೪ (ಚಿತ್ರದುರ್ಗದಲ್ಲಿ ೨), ಹೊಳಲ್ಕೆರೆ, ಹೊಸದುರ್ಗ ಪುರಸಭೆ ಹಾಗೂ ಮೊಳಕಾಲ್ಮೂರು ಮತ್ತು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ತಲಾ ಒಂದೊAದು ಕ್ಯಾಂಟಿನ್‌ಗಳಿವೆ. ಮೊದಲಿದ್ದಂತೆ ಮೆನುವಿನಲ್ಲೂ ಯಾವುದೇ ಕಡಿತವೂ ಆಗಿಲ್ಲ.