ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ೭೭ ಪಾಳೆಗಾರರ ನೆನಪಿನೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಸತೀಶ್ ಜಾರಕಿಹೊಳಿ, ಟಿ. ರಘುಮೂರ್ತಿ, ಬಿ.ಎನ್. ಚಂದ್ರಪ್ಪ, ಹನುಮಂತಪ್ಪ, ಸೊಂಡೆಕೆರೆ ಶಿವಣ್ಣ, ಸಂದೀಪ್, ಯೋಗೇಶ್‌ಬಾಬು ಇತರರಿದ್ದರು. 
ಚಿತ್ರದುರ್ಗ

ಒಗ್ಗಟ್ಟಿನ ಮೂಲಕ ಸೌಲಭ್ಯ ಪಡೆಯೋಣ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸಚಿವ ಸತೀಶ್ ಜಾರಕಿಹೊಳಿ ಸಲಹೆ
  • ೧೬ನೇ ವರ್ಷದ ೭೭ ಪಾಳೇಗಾರರ ನೆನಪಿನೋತ್ಸವ,
  • ವಿದ್ಯಾರ್ಥಿಗಳಿಗೆ ಪುರಸ್ಕಾರ
ಚಿತ್ರದುರ್ಗ: ಪರಿಶಿಷ್ಟ ವರ್ಗದವರು ಸಮುದಾಯದ ಶ್ರೀಗಳ ನೇತೃತ್ವದಲ್ಲಿ ಶೈಕ್ಷಣಿಕ, ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ೧೬ನೇ ವರ್ಷದ ೭೭ ಪಾಳೇಗಾರರ ನೆನಪಿನೋತ್ಸವ ಹಾಗೂ ನಾಯಕ ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಾವು ಶಿಕ್ಷಣದಿಂದ ವಂಚಿತರಾಗಿz್ದೆವು. ಸ್ವಾತಂತ್ರ‍್ಯಾನAತರ ಸಂವಿಧಾನದಿAದ ಶೈಕ್ಷಣಿಕ, ರಾಜಕೀಯ ಇನ್ನಿತರ ಅವಕಾಶಗ ಳು ದೊರೆತಿವೆ. ಕಾಂಗ್ರೆಸ್ ಸರ್ಕಾರ ಮೀಸಲಾತಿ ತಡೆ ಹಿಡಿದಿಲ್ಲ. ಒಗ್ಗಟ್ಟಿನ ಮೂಲಕ ಸೌಲಭ್ಯ ಪಡೆದು ಕೊಳ್ಳ ಬೇಕಾಗಿದೆ. ಪಕ್ಷಾ ತೀತ ಹೋರಾಟಕ್ಕೂ ಸಿದ್ದ ಎಂದರು.
ಪ್ರತಿ ಜಿ¯್ಲÉಯಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕೆಲಸ ಆಗಬೇಕು. ನಾಯಕ ಸಮಾಜದ ವಿದ್ಯಾರ್ಥಿಗಳು ಉನ್ನತ ಹುz್ದÉಗಳನ್ನು ಅಲಂಕರಿಸುವAತಾಗಬೇಕು ಎಂದು ಸಲಹೆ ನೀಡಿದರು.
ಎಲ್ಲ ಸರ್ಕಾರಗಳು ಸಮುದಾಯದ ಅಭಿವೃದ್ಧಿಗೆ ಸಹಕರಿಸಿವೆ. ಸಮುದಾಯದ ಸಚಿವರು ಆ ನಿಟ್ಟಿನಲ್ಲಿ ಕೆಲಸ ಮಾಡಿz್ದÁರೆ ಎಂದ ಅವರು, ಶೋಷಣೆ ವಿರುದ್ಧ ಹೋರಾಟಕ್ಕೆ ಸದಾ ಕೈಜೋಡಿಸುವೆ ಎಂದು ತಿಳಿಸಿದರು.
ಶಾಸಕ ಟಿ. ರಘುಮೂರ್ತಿ ಮಾತನಾಡಿ, ಸಾಧನೆಗೆ ಪರಿಶ್ರಮ ಬಹಳ ಮುಖ್ಯ. ಸಮುದಾಯದ ಬಗ್ಗೆ ಎಲ್ಲರಿಗೂ ಕಾಳಜಿ ಇರಬೇಕು ಎಂದು ತಿಳಿಸಿದರು.
ಚಿತ್ರದುರ್ಗ ಇತಿಹಾಸ ಪ್ರಸಿದ್ಧ ಜಿ¯್ಲÉ. ಪಾಳೆಗಾರರ ಇತಿಹಾಸವನ್ನು ಹೊರ ತೆಗೆಯುವ ಪ್ರಯತ್ನ ಸೊಂಡೆಕೆರೆ ಶಿವಣ್ಣ ಮಾಡಿz್ದÁರೆ. ಕೋಟೆ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ನಮ್ಮ ಸ್ವಾಮೀಜಿ ಈ ಹಿಂದೆ ಪಾದಯಾತ್ರೆ ಮಾಡಿ ಸರ್ಕಾರದ ಗಮನ ಸೆಳೆದು ಸಮಾಜಕ್ಕೆ ನ್ಯಾಯ ಕೊಡಿಸಲು ಮುಂದಾದರು. ಆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದಾಗಿ ನಮಗೆ ಶೇ. ೪ರಷ್ಟು ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.
ರಾಯಚೂರು ವಿವಿ ಕುಲಪತಿ ಹನುಮಂತಪ್ಪ ಮಾತನಾಡಿ, ಪ್ರತಿಭೆ ಎಂಬುದು ಎಲ್ಲರಲ್ಲೂ ಇದೆ. ಹಳ್ಳಿಯವರೇ ಆದರೂ ವಿಶ್ವ ಮಟ್ಟದಲ್ಲಿ ಗುರುತಿಸುಕೊಳ್ಳುವಂತೆ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹೆಚ್ಚು ಅಂಕಗಳಿಸಿದ ವಾಣಿ, ಎನ್. ರಂಜಿತಾ, ಕೆ.ಪಿ. ಜೀವಿತಾ, ಲಾವಣ್ಯ, ನಮ್ರತಾ, ಸೂರ್ತಿ ಸೇರಿ ಸಮುದಾಯದ ೨೦೦ ವಿದ್ಯಾರ್ಥಿಗಳನ್ನು, ಪಾಳೆಗಾರರ ವಂಶಸ್ಥರನ್ನು ಸನ್ಮಾನಿಸಲಾಯಿತು.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಕೆ.ತಾಜ್‌ಪೀರ್, ಸಿವಿಲ್ ನ್ಯಾಯಾಽÃಶೆ ಆಗಲಿರುವ ಬಿ. ಸೋನಾ, ಸಮಾಜದ ಮುಖಂಡರಾದ ಸಂದೀಪ್ ನಾಯಕ, ಬೋರ ಯ್ಯ, ಪಾಲಯ್ಯ, ಯೋಗೇಶ್‌ಬಾಬು, ಕೃಷ್ಣಮೂರ್ತಿ, ಪಾಲಾಕ್ಷಪ್ಪ, ಸೊಂಡೆಕೆರೆ ಶಿವಣ್ಣ, ಡಾ. ಗುಡ್ಡದೇಶ್ವರಪ್ಪ ಇತರರಿದ್ದರು.
ನಶಿಸಿದ ಕೋಟೆಯ ಎರಡು ಸುತ್ತು
ಚಿತ್ರದುರ್ಗ ಪಾಳೆಗಾರರ ಇತಿಹಾಸವನ್ನು ದುಷ್ಟರು ಅಳಿಸಿ ಹಾಕಿz್ದÁರೆ. ಏಳು ಸುತ್ತಿನ ಪೈಕಿ ಎರಡು ಸುತ್ತು ನಶಿಸಿಹೋಗಿದೆ ಎಂದು ಸೊಂಡೆಕೆರೆ ಶಿವಣ್ಣ ಕಳವಳ ವ್ಯಕ್ತಪಡಿಸಿದರು. ಕೋಟೆಯ ಎರಡು ಸುತ್ತುಗಳಲ್ಲಿ ನಾಲ್ಕು ಬತೇರಿಗಳು ಉಳಿದಿವೆ. ಅವುಗಳ ರಕ್ಷಣೆಗೆ ಆದ್ಯತೆ ನೀಡಬೇಕಿದೆ. ಪಾಳೆಗಾರರ ಚರಿತ್ರೆ ಸಾರುವ ಕೆಲಸಕ್ಕೆ ನಾವೆಲ್ಲರೂ ಮುಂದಾಗಬೇಕಾಗಿದೆ ಎಂದು ತಿಳಿಸಿದರು.
"

ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥೈಸಿಕೊಂಡಾಗ ಏನಾದರೂ ಸಾಧನೆ ಮಾಡಲು ಸಾಧ್ಯ.

— ಪ್ರಸನ್ನಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠ