ದೇವಾಲಯ ಸಂವರ್ಧನಾ ಸಮಿತಿಯಿಂದ ಚಿತ್ರದುರ್ಗದಲ್ಲಿ ಆಯೋಜಿಸಿರುವ ೪ ದಿನಗಳ ಅರ್ಚಕರ ತರಬೇತಿ ಶಿಬಿರವನ್ನು ಉದ್ಯಮಿ ಲವಕುಮಾರ್ ಉದ್ಘಾಟಿಸಿದರು. ಮನೋಹರ್‌ಮಠದ್, ರಘುನಂದನ್, ಸುರೇಶ್, ಡಾ. ಶಿವಕುಮಾರ್, ಡಾ.ಕೆ. ರಾಜೀವಲೋಚನ, ರಾಮಕಿರಣ್, ಗಂಗಣ್ಣ, ಮಂಜುನಾಥ್, ಗುರುಮೂರ್ತಿ, ಶಶಿಧರ್‌ಗುಡೇಕೋಟೆ, ಓಂಕಾರಪ್ಪ ಇತರರು ಇದ್ದರು. 
ಚಿತ್ರದುರ್ಗ

ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಲಿ ದೇವಾಲಯ

ಪ್ರಮುಖ ಮುಖ್ಯಾಂಶಗಳು

  • ಮನೋಹರ್‌ಮಠದ್ ಅನಿಸಿಕೆ
  • ಅರ್ಚಕರ ಜಿಲ್ಲಾ ಮಟ್ಟದ ತರಬೇತಿ ಶಿಬಿರ
  • ಜೋಗಿಮಟ್ಟಿ ಸದ್ಗುರು ಆಶ್ರಮ
ಚಿತ್ರದುರ್ಗ: ದೇವಾಲಯಗಳು ಜನರ ಜೀವನಾಡಿಯಾಗ ಬೇಕು, ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿರ ಬೇಕು ಎಂದು ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್‌ಮಠದ್ ಹೇಳಿದರು.
ನಗರದ ಜೋಗಿಮಟ್ಟಿ ಸದ್ಗುರು ಆಶ್ರಮ ಉದಾಯಚಲದಲ್ಲಿ ಮಂಗಳವಾರ ಆಯೋಜಿಸಿದ್ದ ಅರ್ಚಕರ ಜಿಲ್ಲಾ ಮಟ್ಟದ ತರಬೇತಿ ಶಿಬಿರದಲ್ಲಿ ಮಾತನಾಡಿ, ಈ ಶಿಬಿರ ಪೂಜೆ, ಮಂತ್ರ, ಶ್ಲೋಕ ಕಲಿಸುವುದಕ್ಕಲ್ಲ. ದೇವಸ್ಥಾನಗಳನ್ನು ಸಾಮಾಜಿಕ ಚಟುವಟಿಕೆಗಳ ಕೇಂದ್ರವನ್ನಾಗಿಸಬೇಕೆAಬ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ. ದೇವಸ್ಥಾನಗಳು ಪೂಜೆಗೆ ಸೀಮಿತವಲ್ಲ, ಇವುಗಳಿಂದ ಸಮಾಜದಲ್ಲಿ ಸಾಮರಸ್ಯ ನೆಲೆಸುವಂತಾಗಬೇಕು ಎಂದರು.
ದೇವಾಲಯ ಹಸಿದವರಿಗೆ ಅನ್ನ ನೀಡುವ ಕೇಂದ್ರವಾಗಬೇಕು. ಆರ್ಥಿಕವಾಗಿ ಸಬಲವಾಗಿರುವ ದೇವಸ್ಥಾನಗಳಿಂದ ಆಯಾ ಗ್ರಾಮ ದ ಹಿಂದುಳಿದ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ನೀಡುವಂತಾಗಬೇಕು. ಅವಕಾಶಗಳಿರುವೆಡೆ ಯೋಗ ತರಬೇತಿ, ಆರೋಗ್ಯ ಶಿಬಿರ, ಗ್ರಂಥಾಲಯ, ಗೋಶಾಲೆಗಳನ್ನು ಸ್ಥಾಪಿಸುವಂತೆ ಅರ್ಚಕರನ್ನು ಪ್ರೋತ್ಸಾಹಿಸಲಾಗುತ್ತಿದೆ.
ದೇವಸ್ಥಾನ ಕೇಂದ್ರವಾಗಿಟ್ಟುಕೊAಡು ಮಹಿಳೆಯರು ಮಾತೃ ಮಂಡಳಿ ರಚಿಸಿಕೊಳ್ಳಬೇಕು. ಸ್ವಾವಲಂಬನೆ ಬದುಕಿನ ಬಗ್ಗೆ ವಾರ ದಲ್ಲಿ ಒಂದು ದಿನ ಚರ್ಚಿಸಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅರ್ಚಕರ ತರಬೇತಿ ಶಿಬಿರ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳ ವಿವಿಧ ವರ್ಗ, ಪಂಥಗಳಿAದ ೬೫ ಅರ್ಚಕರು ಭಾಗವಹಿಸಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಏರ್ಪಡಿಸಿರುವ ೮ ಶಿಬಿರಗಳಲ್ಲಿ ೫೫೦ ಜನರಿಗೆ ತರಬೇತಿ ನೀಡಲಾಗಿದೆ ಎಂದು ಮನೋಹರ್‌ಮಠದ್ ಹೇಳಿದರು.
ಶಿಬಿರ ಉದ್ಘಾಟಿಸಿದ ಭೀಮಸಮುದ್ರದ ಉದ್ಯಮಿ ಲವಕುಮಾರ್ ಮಾತನಾಡಿ, ಯಾವುದೇ ಜಾತಿಗೆ ಸೀಮಿತವಾಗದೆ ಎಲ್ಲ ವರ್ಗ ದ ಅರ್ಚಕರು ಶಿಬಿರದಲ್ಲಿ ಭಾಗವಹಿಸಿರುವುದು ಶ್ಲಾಘನೀಯ ಎಂದರು.
ಚಳ್ಳಕೆರೆ ನರಹರಿ ಆಶ್ರಮದ ಶ್ರೀ ರಾಜಾರಾಮ ಶಾಸಿö ಅವರು ಮಾತನಾಡಿ, ಅರ್ಚಕರು ತಮ್ಮ ಕೆಲಸವನ್ನು ನಿಷ್ಠೆ, ಪ್ರಾಮಾಣಿಕ ತೆಯಿಂದ ಮಾಡಿದರೆ ಭಗವಂತ ನಿಮ್ಮೊಂದಿಗೆ ಇರುತ್ತಾನೆ. ಮೋಸ, ಕುತಂತ್ರ ಮಾಡಿದರೆ ದೇವರು ಕ್ಷಮಿಸುವುದಿಲ್ಲ ಎಂದರು.
ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಂಯೋಜಕ ರಘುನಂದನ್, ಹಿಂದು ಸೇವಾ ಪ್ರತಿಷ್ಠಾನದ ಸುರೇಶ್, ಆರೋಗ್ಯ ಇಲಾಖೆ ಡಾ. ಶಿವಕುಮಾರ್, ಸಂಸ್ಕಾರ ಭಾರತಿಯ ಡಾ.ಕೆ. ರಾಜೀವಲೋಚನ, ಆರೆಸ್ಸೆಸ್ ಜಿಲ್ಲಾ ಕಾರ್ಯವಾಹ ರಾಮಕಿರಣ್, ಸಮಿತಿ ಶಿವಮೊಗ್ಗ ವಿಭಾಗದ ಸಂಯೋಜಕ ಗಂಗಣ್ಣ, ಜಿಲ್ಲಾ ಸಂಯೋಜಕ ಮಂಜುನಾಥ್, ಗುರುಮೂರ್ತಿ, ಶಶಿಧರ್ ಗುಡೇಕೋಟೆ, ಓಂಕಾರಪ್ಪ ಇತರರು ಇದ್ದರು.

೧೨ ರಂದು ಸಮಾರೋಪ

ಡಿ.೧೨ರಂದು ನಡೆಯುವ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ವಹಿಸಲಿದ್ದಾರೆ. `ಸಂವಾದ'ಮಾಧ್ಯಮ ಸಂಪಾದಕ ವÊಷಾಂಕ್‌ಭಟ್ ಭಾಗವಹಿಸಲಿದ್ದಾರೆ. ಅರ್ಚಕರಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.