ಭೋವಿ ಜನೋತ್ಸವ ಅಂಗವಾಗಿ ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿದರು. ರಘುಚಂದನ್, ಆನಂದಪ್ಪ, ಗೌನಳ್ಳಿ ಗೋವಿಂದಪ್ಪ, ಮಂಜುನಾಥ್, ಹನುಮಂತಪ್ಪ, ಅಂಜನೇಯ, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ತಿಮ್ಮಣ್ಣ ಇತರರಿದ್ದರು.
- ಅನಕ್ಷರತೆ ತೊಲಗಿಸಲು ಪ್ರಯತ್ನಿಸೋಣ
- ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿಕೆ
- ಪೂರ್ವಭಾವಿ ಸಭೆ
ಚಿತ್ರದುರ್ಗ: ಭೋವಿ ಜನೋತ್ಸವ ಕೇವಲ ಒಂದು ಆಚರಣೆಯಾಗದೆ, ನಮ್ಮ ಸಮಾಜದವರ ಸಾಂಸ್ಕೃತಿಕ ಬದುಕನ್ನು ಬಿಂಬಿ ಸುವ ಮತ್ತು ಎತ್ತಿಹಿಡಿಯುವ ಪ್ರಮುಖ ಹಬ್ಬವಾಗಲಿ ಎಂದು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಲಹೆ ನೀಡಿದರು.
ಹೊರವಲಯದ ಭೋವಿ ಗುರುಪೀಠದಲ್ಲಿ ಜು. ೧೮ರಂದು ನಡೆಯಲಿರುವ ಭೋವಿ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ಭಾ ನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿ ಮಾತನಾಡಿದರು.
ಪ್ರಸ್ತುತ ಭೋವಿ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ, ಅನಕ್ಷರತೆ ಆತಂಕದ ಸಂಗತಿಯಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲರ ನ್ನೂ ಅಕ್ಷರಸ್ಥರನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹೇಳಿದರು.
ಜಾತಿ ನಮ್ಮ ಶಕ್ತಿಯಾಗಿದೆ. ಅದು ಬಲವಾದಷ್ಟು ಸಮಾಜದವರು ಶಕ್ತಿಯುತರಾಗುತ್ತಾರೆ. ತಾವು ಬೆಳೆದು ಬೇರೆಯವರನ್ನು ಎತ್ತ ರಕ್ಕೆ ಬೆಳೆಸಲು ಹಿರಿಯರು ಹಾಕಿ ಕೊಟ್ಟ ಮಾರ್ಗ ಅನುಸರಿಸಬೇಕು ಎಂದು ಸಲಹೆ ನೀಡಿದರು.
ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸಿಇಒ ಎಂ.ಸಿ. ರಘುಚಂದನ್ ಮಾತನಾಡಿ, ನಮ್ಮ ಸಮುದಾಯ ಸಂಘಟಿತವಾದಾಗ ಮಾ ತ್ರ ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಅವಕಾಶಗಳನ್ನು ಪಡೆಯಲು ಸಾಧ್ಯ ಎಂದರು.
ನಮ್ಮ ಸಮುದಾಯವನ್ನು ರಾಜಕೀಯ ಪಕ್ಷಗಳು ಕೀಳಾಗಿ ಕಾಣುತ್ತಿವೆ ಎಂಬ ಅನುಮಾನ ಕಾಡುತ್ತಿದೆ. ಶಿಕ್ಷಣ ನಮ್ಮ ಶಕ್ತಿಯಾಗ ಬೇಕಿದೆ. ಎಸ್ಸಿಯೊಳಗೆ ನಮ್ಮ ಸಮುದಾಯ ಪ್ರಬಲವಾಗಿ ಬೆಳೆಯಬೇಕು.
ನಮ್ಮಲ್ಲಿನ ಅಹಂ, ಭಿನ್ನಾಭಿಪ್ರಾಯ ಬದಿಗಿಟ್ಟು ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕಿದೆ. ನಮ್ಮವರಿಗೆ ಮೀಸಲಾತಿ ಅಗತ್ಯವಿ ದ್ದು, ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಸಲಹೆ ನೀಡಿದರು.
ಓಸಿಸಿ ರಾಜ್ಯಾಧ್ಯಕ್ಷ ಆನಂದಪ್ಪ ಮಾತನಾಡಿ, ನಮ್ಮಲ್ಲೂ ಕಾಲೆಯುವವರಿದ್ದು, ಬೆಳೆಯಲು ಬಿಡುತ್ತಿಲ್ಲ. ರಾಜಕೀಯ ಶಕ್ತಿ ಇದ್ದಾಗ ಮಾತ್ರ ಸಮಾಜಕ್ಕೆ ಸಿಗಬೇಕಾದ ಸೌಲಭ್ಯ ಕೊಡಿಸಲು ಸಾಧ್ಯ. ಇದನ್ನು ಮೊದಲು ಅರ್ಥಮಾಡಿಕೊಳ್ಳಬೇಕಿದೆ. ಭೋವಿ ಜನೋ ತ್ಸವ ಯಶಸ್ವಿಯಾಗಲು ಈಗಿನಿಂದಲೇ ಕಾರ್ಯಪ್ರವೃತ್ತರಾಗೋಣ ಎಂದರು.
ಗುರುಪೀಠದ ಆಡಳಿತಾಽಕಾರಿ ಗೌನಹಳ್ಳಿ ಗೋವಿಂದಪ್ಪ ಮಾತನಾಡಿ, ಭೋವಿ ಜನೋತ್ಸವ ವರ್ಷದಿಂದ ವರ್ಷಕ್ಕೆ ಮೆರಗು ಪಡೆ ಯುತ್ತಿದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಧು-ವರರ ಸಮಾವೇಶ, ರಕ್ತದಾನ ಶಿಬಿರ, ವಿವಿಯಲ್ಲಿ ಬಂಗಾರದ ಪದಕ, ಗೌ ರವ ಡಾಕ್ಟರೇಟ್ ಪಡೆದವರಿಗೆ ಸನ್ಮಾನ ಸೇರಿ ವಿಶಿಷ್ಟವಾಗಿ ಆಚರಿಸುತ್ತ ಬರಲಾಗುತ್ತಿದೆ ಎಂದು ತಿಳಿಸಿದರು.
ಮುಖಂಡರಾದ ಈ. ಮಂಜುನಾಥ್, ಕಾಳಘಟ್ಟ ಹನುಮಂತಪ್ಪ, ಅಂಜನೇಯ, ಕೃಷ್ಣಮೂರ್ತಿ ಸೂರೇನಹಳ್ಳಿ, ತಿಪ್ಪೇಸ್ವಾಮಿ, ತಿ ಮ್ಮಣ್ಣ, ನಿರಂಜನ, ಸಿದ್ದು ಬಂಡಿ, ರಾಮು, ರವಿಪೂಜಾರ್, ತಿಪ್ಪಣ್ಣ ಒಡೆಯರ್, ಜಯಪ್ಪ, ರಾಮಾಂಜನೇಯ, ಪರಶುರಾಮ್, ಗುರಪ್ಪ, ಶಿವರುದ್ರಪ್ಪ ಇತರರು ಇದ್ದರು.