ಚಿತ್ರದುರ್ಗ ಮುರುಘಾಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಡಾ.ಬಸವಕುಮಾರ ಸ್ವಾಮೀಜಿ, ಡಾ.ಬಸವಪ್ರಭು ಸ್ವಾಮೀಜಿ, ಬಿ.ಮಂಜುನಾಥ್, ಕೆ.ಜೆ.ಕಾಂತರಾಜ್ ಇತರರಿದ್ದರು.  
ಚಿತ್ರದುರ್ಗ

ಸರಳತೆಗೆ ಸಾಮೂಹಿಕ ಕಲ್ಯಾಣ ಪ್ರೇರಣೆಯಾಗಲಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಅದ್ದೂರಿ, ಆಡಂಬರಕ್ಕೆ ಬೇಕಿದೆ ಕಡಿವಾಣ
  • ಪರಸ್ಪರ ಗೌರವದಿಂದ ಜೀವನದಲ್ಲಿ ಸಾಕ್ಷಾತ್ಕಾರ
  • ಸಾಮೂಹಿಕ ಕಲ್ಯಾಣ ಮಹೋತ್ಸವ
ಚಿತ್ರದುರ್ಗ: ಅದ್ದೂರಿ ವಿವಾಹಗಳಿಂದ ಪಾಲಕರು ಸಾಲಗಾರರಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀ ಮಠದಲ್ಲಿ ಭಾನುವಾರ ಜರುಗಿದ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿ, ಸಮಾಜದಲ್ಲಿ ನಿತ್ಯ ನಿರುದ್ಯೋಗ, ಹಸಿವು, ಬಡತನದಿಂದ ಅನೇಕರು ನರಳುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಪಾಲಕರು ಅದ್ದೂರಿ ವಿವಾಹಗಳಿಗೆ ಕಡಿವಾಣ ಹಾಕುವುದು ಅಗತ್ಯವಿದೆ ಎಂದರು.
ಈ ಕಲ್ಯಾಣ ಮಹೋತ್ಸವದಲ್ಲಿ ಮದುವೆ ಆದವರೂ ಕೂಡ ಸರಳ, ಸಾಮೂಹಿಕ ಕಲ್ಯಾಣ ಮಹೋತ್ಸವಗಳಿಗೆ ಪ್ರೇರಣೆ ಆಗಬೇಕು. ಶ್ರೀಮಠವು ಅಂತರ್ಜಾತಿ ವಿವಾಹಗಳಿಗೆ ಸಾಕ್ಷಿಯಾಗುತ್ತಾ ಬಂದಿದೆ ಎಂದರು.
ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಯುದ್ಧದಿಂದಾಗಿ ಜಗತ್ತು ತಲ್ಲಣಿಸುತ್ತಿದೆ. ಎಲ್ಲೋ ನಡೆಯು ವ ಯುದ್ಧದ ಬಿಸಿ ಭಾರತಕ್ಕೂ ತಟ್ಟಿದೆ. ಸಂಸಾರದಲ್ಲಿ ಗಂಡ-ಹೆAಡತಿ ಜಗಳ, ಸಂಸಾರದೊAದಿಗೆ ಬಂಧುಗಳ ನಡುವಿನ ಸಂಬA ಧಕ್ಕೂ ಆತಂಕ ಉಂಟುಮಾಡುತ್ತದೆ ಎಂದರು.
ಸತಿ-ಪತಿಗಳ ಮಾತು ಮುತ್ತಿನಂತೆ ಇರಬೇಕು. ಮಾತಿನಲ್ಲಿ ಪ್ರೀತಿ ಇರಬೇಕು, ವ್ಯವಹಾರ ಇರಬಾರದು. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು. ಸತಿ-ಪತಿಗಳು ಪರಸ್ಪರ ಗೌರವದಿಂದ ಬಾಳಬೇಕು. ಹಾಗಿದ್ದಾಗ ಜೀವನದ ಸಾಕ್ಷಾತ್ಕಾರವಾಗುತ್ತದೆ ಎಂದು ತಿಳಿಸಿದರು.
ಉಪವಿಭಾಗಾಽಕಾರಿ ಡಾ.ಕೆ.ಜೆ.ಕಾಂತರಾಜ್ ಮಾತನಾಡಿ, ೩೬ ವರ್ಷಗಳಿಂದ ಶ್ರೀಮಠ ನಿರಂತರವಾಗಿ ನಡೆಸಿಕೊಂಡು ಬರುತ್ತಿ ರುವ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨೦ ಸಾವಿರ ಹೆಚ್ಚು ವಿವಾಹಗಳಾಗಿವೆ. ವಿವಾಹ ಎರಡು ಕುಟುಂಬಗಳನ್ನು ಕೂಡಿ ಸುವಂತದ್ದು. ಸತಿಪತಿಗಳು ಅಹಂಕಾರ ತೊರೆದು ಪ್ರೀತಿ, ವಿಶ್ವಾಸದಿಂದ ಜೀವನ ನಡೆಸುವಂತಾಗಬೇಕು. ಪರಸ್ಪರ ಸಹಕಾರವಿ ದ್ದರೆ ಸಂಸಾರದಲ್ಲಿ ಸುಖ, ಸಂತೋಷ ಕಾಣಲು ಸಾಧ್ಯ ಎಂದರು.
ಚಿತ್ರದುರ್ಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಶ್ರೀಮಠವು ಬಸವಾದಿ ಶರಣರ ಆದರ್ಶಗಳನ್ನು ಪಾಲಿಸಿಕೊಂಡು ಬರುತ್ತಿದೆ. ಸಾಕಷ್ಟು ಜನಪರ ಕಲ್ಯಾಣ ಕಾರ್ಯಗಳನ್ನು ಆಯೋಜಿಸುತ್ತಿದ್ದು, ಸಮಾಜದಲ್ಲಿ ವರ್ಣ, ವರ್ಗ, ಜಾತಿ ಅಸಮಾನತೆ ತೊಡೆದುಹಾಕಿ ಸಮಾನತೆ ಸಾರುವಂಥಹ ಕೆಲಸಗಳನ್ನು ಮಾಡುತ್ತಿದೆ ಎಂದರು.
ಜಮುರಾ ಕಲಾವಿದರು ವಚನ ಪ್ರಾರ್ಥಿಸಿದರು. ಗಿರೀಶಾಚರ‍್ಯ ಸ್ವಾಗತಿಸಿ, ಟಿ.ಪಿ.ಜ್ಞಾನಮೂರ್ತಿ ವಂದಿಸಿದರು. ನಾಲ್ಕು ಅಂತ ರ್ಜಾತಿ ಜೋಡಿಗಳ ಸಹಿತ ೨೧ ವಧೂವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಸವ ಮುರುಘೇಂದ್ರ ಸ್ವಾಮೀಜಿ, ಪೈಲ್ವಾನ್ ತಿಪ್ಪೇಸ್ವಾಮಿ, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಕವಿ ಗಂಗಾಧರಪ್ಪ, ಸಮಾಜ ಸೇವಕ ಲಿಂಗರಾಜ್ ಇತರರು ಇದ್ದರು.