ಚಳ್ಳಕೆರೆ ಸಾರಿಗೆ ಬಸ್ ನಿಲ್ದಾಣ ಸಮೀಪ ಕರವೇ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್ ಧ್ವಜಾರೋಹಣ ನೆರವೇರಿಸಿದರು. ರೆಡ್ಡಿಹಳ್ಳಿ ವೀರಣ್ಣ, ಕೊರ್ಲಕುಂಟೆ ತಿಪ್ಪೇಸ್ವಾಮಿ ಇದ್ದರು.language 
ಚಿತ್ರದುರ್ಗ

ಕನ್ನಡ ಭಾಷೆ ಶ್ರೀಮಂತಗೊಳಿಸುವ ಕಾರ್ಯವಾಗಲಿ language

ಧನಂಜಯ ಎಸ್.ಹಕಾರಿ.

ಪ್ರಮುಖ ಮುಖ್ಯಾಂಶಗಳು

  • ಚಳ್ಳಕೆರೆಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮ
  • ಕನ್ನಡ ಭಾಷೆ ಶ್ರೀಮಂತಗೊಳಿಸಲಿ
  • ನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್ ಹೇಳಿಕೆ
ಚಳ್ಳಕೆರೆ: ಮೈಸೂರು ಸಂಸ್ಥಾನ ಅವಧಿಯಲ್ಲಿ ಕನ್ನಡ ಮಾತನಾಡುವ ಪ್ರಾಂತ್ಯಗಳು ಒಗ್ಗೂಡಿದ ಪ್ರತೀಕವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಜಾರಿಗೆ ಬಂದಿದೆ ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷ ಸಿ.ಟಿ. ವೀರೇಶ್ ಹೇಳಿದರು. 
ನಗರದ ಸಾರಿಗೆ ಬಸ್ ನಿಲ್ದಾಣ ಬಳಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯಿಂದ (ಪ್ರವೀಣಕುಮಾರ್ ಶೆಟ್ಟಿ ಬಣ) ಹಮ್ಮಿಕೊಂಡಿದ್ದ ಆರನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 
ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಕನ್ನಡ ಕಾವಲು ಪಡೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು ಎಂದರು.

ನಾಡಗೀತೆಗೆ ಆದ್ಯತೆ

ಪತ್ರಕರ್ತ, ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಸಂವಿಧಾನಬದ್ಧವಾಗಿ ದೇಶದ ಒಕ್ಕೂಟ ವ್ಯವಸ್ಥೆ ಇದೆ. ಇಲ್ಲಿನ ಸಮಾನ ಅವಕಾಶಗಳಲ್ಲಿ ಜನಪ್ರತಿನಿಧಿಗಳಾದವರು ತಾಯಿ ನೆಲದ ಬದ್ಧತೆ ಇರಿಸಿಕೊಳ್ಳಬೇಕು. ನಾಡಗೀತೆಗೆ ಮೊದಲ ಆದ್ಯತೆ ಬೇಡ, ವಂದೇ ಮಾತರಂ ಸಾಕು ಎಂದು ಮಾತನಾಡುವರ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕು. ಭಾಷೆಯ ಅಸ್ಮಿತೆ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯ ಆಗಬೇಕು ಎಂದು ತಿಳಿಸಿದರು. 

ಭಾಷೆ ಬಗ್ಗೆ ಜಾಗೃತಿ ವಹಿಸಿ

2500 ವರ್ಷಗಳ ಹಿರಿತನ ಇರುವ ಕನ್ನಡ ಭಾಷೆಗೆ ಯಾವುದೇ ಅಡ್ಡಿ ಆತಂಕ ಇಲ್ಲ. ಎಂಟು ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹನೀಯರಿಂದ ಭಾಷೆಯ ಮನ್ನಣೆ ಹೆಚ್ಚಾಗಿದೆ. ಆದರೂ, ಕನ್ನಡ ನೆಲದಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಬೆಳೆಯುತ್ತಿದೆ. ಇದರ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು.
ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಭಾನುಪ್ರಿಯಾ, ನೇತಾಜಿ ಪ್ರಸನ್ನ ಮಾತನಾಡಿದರು. ವೇದಿಕೆ ಅಧ್ಯಕ್ಷ ಪಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಕೆ.ಎಸ್. ರಾಘವೇಂದ್ರ ರಾವ್, ಮುಖ್ಯ ಶಿಕ್ಷಕಿ ಗೌರಮ್ಮ, ಎಸ್. ನಾಗರಾಜ್, ಚೇತನ್ ಕುಮಾರ್, ಬಿ. ಫರೀದ್ ಖಾನ್, ಸಿ. ಭೋಜರಾಜ್, ಬೆಳೆಗೆರೆ ಸುರೇಶ ಇತರರು ಇದ್ದರು.