ಚಿತ್ರದುರ್ಗದಲ್ಲಿ ಗುರುವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಜಿ.ಡಿ. ಮಹಾವರ್ಕರ್ ಉದ್ಘಾಟಿಸಿದರು. ಸುಽÃನ್ ಕುಮಾರ್, ಗಾಯತ್ರಿ, ಮಹೇಶ್ವರಪ್ಪ, ಡಾ. ಸುನೀಲ್‌ಕುಮಾರ್ ಇತರರಿದ್ದರು. 
ಚಿತ್ರದುರ್ಗ

ಮಾನವ ಕಳ್ಳಸಾಗಾಣೆ ತಡೆಗೆ ಕಾನೂನಾತ್ಮಕ ಜಾಗೃತಿ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ದಿನಾಚರಣೆಯಲ್ಲಿ ಜಿಲ್ಲಾ ನ್ಯಾಯಾಽÃಶ ಜಿ.ಡಿ.ಮಹಾವರ್ಕರ್ ಅಭಿಮತ
  • ಕಟ್ಟಕಡೆಯ ವ್ಯಕ್ತಿಯ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಅಗತ್ಯ
  • ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ

ಚಿತ್ರದುರ್ಗ:

ದೇಶ ಎಷ್ಟೇ ಪ್ರಗತಿ ಸಾಽಸಿದರೂ ಮಾನವ ಕಳ್ಳಸಾಗಾಣೆ ಸಮಾಜದಲ್ಲಿ ಕಪ್ಪುಚುಕ್ಕಿಯಾಗಿ ಕಾಡುತ್ತಿರುವ ಸಮಸ್ಯೆ ಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಽÃಶ ಜಿ.ಡಿ. ಮಹಾವರ್ಕರ್ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಜಿಲ್ಲಾಡಳಿತ, ಜಿಪಂ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ಅನ್ಯಾಯ, ಶೋಷಣೆಗಳ ಕುರಿತು ಪ್ರಜ್ಞಾವಂತರು ಚಿಂತಿಸುವ ಅಗತ್ಯವಿದೆ. ಕಟ್ಟಕಡೆ ವ್ಯಕ್ತಿಯ ಸಂಕಷ್ಟಕ್ಕೂ ಸ್ಪಂದಿಸುವ ಕೆಲಸ ಪ್ರಾಮಾಣಿಕವಾಗಿ ಆಗಬೇಕಿದೆ ಎಂದು ಸಲಹೆ ನೀಡಿದರು.
ಪ್ರಸ್ತುತ ಯುವಕರು, ಮಹಿಳೆಯರು, ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದು, ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಇಂತಹ ಅಪರಾಧಗಳನ್ನು ಪತ್ತೆ ಹಚ್ಚುವ, ಸೂಕ್ತ ರಕ್ಷಣೆ ಪಡೆಯುವ, ಕಾನೂನಾತ್ಮಕ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಸಮಾಜದಲ್ಲಿ ನೊಂದವರಿಗೆ ಮಾತ್ರವಲ್ಲ. ಎಲ್ಲರಿಗೂ ಕಾನೂನು ಅರಿವು ಮೂಡಿಸುವುದು ಪ್ರಾಽಕಾರದ ಮುಖ್ಯ ಉದ್ದೇಶವಾಗಿದೆ. ಎಲ್ಲ ಇಲಾಖೆಗಳ ಅಽಕಾರಿಗಳು ಸಮನ್ವಯದೊಂದಿಗೆ ತಮ್ಮ ವ್ಯಾಪ್ತಿಯಲ್ಲಿ ಶೋಷಣೆಗಳ ವಿರುದ್ಧ ಜಾಗೃತಿ ಮೂಡಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಮಹೇಶ್ವರಪ್ಪ ಮಾತನಾಡಿ, ಪ್ರಸ್ತುತ ಮಹಿಳೆಯರು, ಉದ್ಯೋಗ ಹುಡುಕುವ ಶ್ರಮಿಕರನ್ನು ಗುರಿಯಾಗಿಸಿಕೊಂಡು ಶೋಷಣೆ ಮಾಡಲಾಗುತ್ತಿದೆ. ವಿದೇಶ, ಹೊರರಾಜ್ಯಗಳಲ್ಲಿ ಹೆಚ್ಚಿನ ಸಂಬಳ ಹಾಗೂ ಉತ್ತಮ ಸೌಲಭ್ಯ ನೀಡುವುದಾಗಿ ಏಜೆಂಟ್‌ಗಳ ಮೂಲಕ ಆಮಿಷ ಒಡ್ಡಿ ವಂಚಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾನವ ಹಕ್ಕುಗಳ ರಕ್ಷಣೆ, ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಈ ಕಳ್ಳ ಸಾಗಾಣಿಕೆ ತಡೆಯುವುದು ಅತ್ಯಂತ ಪ್ರಮುಖ ವಾದುದು ಎಂದರು.

ಡಿಎಚ್‌ಒ ಡಾ. ಸುನೀಲ್‌ಕುಮಾರ್ ಮಾತನಾಡಿ, ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧ, ಮಾನವ ಕಳ್ಳಸಾಗಾಣಿಕೆಯಂತ ಹ ಗಂಭೀರ ಸವಾಲುಗಳು ಹೆಚ್ಚಾಗುತ್ತಿವೆ. ಹೀಗಾಗಿ ಜಾಲಕ್ಕೆ ಸಿಲುಕಿದಾಗ ಸಂತ್ರಸ್ತರು ತೀವ್ರ ಭೀತಿ, ಮಾನಸಿಕವಾಗಿ ದಿಕ್ಕು ತೋಚದ ಸ್ಥಿತಿಯಲ್ಲಿರುತ್ತಾರೆ.

ಅಂತವರನ್ನು ಶೀಘ್ರ ಗುರುತಿಸಿ, ಸೂಕ್ತ ರಕ್ಷಣೆ ನೀಡುವ, ಸಮಾಲೋಚನೆ ನಡೆಸಿ ಆತ್ಮಸ್ಥೆÊರ್ಯ ತುಂಬುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ತಾಲೂಕು ಮಟ್ಟದ, ಪಿಎಚ್‌ಸಿಗಳ ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದರು.

ವಕೀಲ ಕೆ.ಎಸ್.ವಿಜಯ್ ಉಪನ್ಯಾಸ ನೀಡಿದರು. ಜಿಪಂ ಯೋಜನಾ ನಿರ್ದೇಶಕಿ ಜಯಲಕ್ಷ÷್ಮಮ್ಮ, ಕಾರ್ಮಿಕ ಅಽಕಾರಿ ಅನಿಲ್ ಬಾಲಚಂದ್ರ ಬಗಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಽ ಕಾರಿ ಎ.ಎಂ. ವೀಣಾ ಇದ್ದರು.

ಸಾಮಾಜಿಕ ಪಿಡುಗು ನಿವಾರಣೆಗೆ ಬೇಕಿದೆ ಸಹಕಾರ

ಮಾನವ ಕಳ್ಳಸಾಗಾಣೆ ತಡೆ ದಿನಾಚರಣೆ ಸಂಭ್ರಮದ ಕಾರ್ಯಕ್ರಮವಲ್ಲ. ಇದರ ಹಿಂದೆ ಮಹತ್ವದ ಉದ್ದೇಶವಿದೆ. ಈ ಸಾಮಾಜಿ ಕ ಪಿಡುಗನ್ನು ಸಂಪೂರ್ಣವಾಗಿ ತಡೆಯಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಽÃಶ ಸುಽÃ ನ್‌ಕುಮಾರ್ ಹೇಳಿದರು.
ಹೆಣ್ಣು ಮಕ್ಕಳು ಮನೆಗೆ ತಡವಾಗಿ ಬಂದಾಗ, -ೆÇÃನ್ ಸಂಪರ್ಕಕ್ಕೂ ಸಿಗದಿದ್ದಾಗ ಉಂಟಾಗುವ ಆತಂಕ ಮತ್ತು ನೋವು ಅನುಭ ವಿಸಿದವರಿಗೆ ಗೊತ್ತು. ಪೊಲೀಸ್ ಅಽಕಾರಿಯೇ ಆಗಿದ್ದರೂ ಆ ವೇಳೆ ಒಬ್ಬ ತಂದೆ, ಕುಟುಂಬದ ಸದಸ್ಯರಾಗಿ ಯಾತನೆ ಪಡುತ್ತಾರೆ. ಮಕ್ಕಳು, ಸಿöÃಯರನ್ನು ದೇವತೆಗಳೆಂದು ಬರೀ ಮಾತಿನಲ್ಲಿ ಹೇಳಿದರೆ ಸಾಲದು. ಕೇವಲ ಕಾನೂನು, ಆದೇಶಗಳಿಂದಲೂ ಈ ಸಮಸ್ಯೆ ತಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಮಾನವ ಕಳ್ಳಸಾಗಾಣಿಕೆ ತಡೆಗೆ ಕಳಕಳಿ ಅಗತ್ಯ

ಮಾನವ ಕಳ್ಳಸಾಗಾಣಿಕೆ ಗಂಭೀರ ಅಪರಾಧವಾಗಿದೆ. ಇದನ್ನು ಸಂಪೂರ್ಣ ತಡೆಗಟ್ಟಲು ಸಾಮಾಜಿಕ ಕಳಕಳಿ ಅಗತ್ಯ. ದೇಶದಲ್ಲಿ ಪ್ರತಿ ವರ್ಷ ಸುಮಾರು ೪೦-೫೦ ಸಾವಿರ ಮಕ್ಕಳು ಕಾಣೆಯಾಗುತ್ತಿರುವುದು ಕಳವಳಕಾರಿ ಸಂಗತಿ. ವಿಶೇಷವಾಗಿ ಹೆಣ್ಣು ಮಕ್ಕ ಳು, ಹದಿಹರೆಯದ ಯುವತಿಯರು ಬಲಿಪಶು ಆಗುತ್ತಿದ್ದಾರೆ ಎಂದು ಜಿಪಂ ಮುಖ್ಯ ಯೋಜನಾಽಕಾರಿ ಸಿ.ಎಸ್. ಗಾಯತ್ರಿ ಆತಂಕ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ, ಆಕರ್ಷಣೆಗೆ ಒಳಗಾಗಿ ಅನೇಕ ಯುವತಿಯರು ಕಳ್ಳಸಾಗಾಣಿಕೆ ಜಾ ಲಕ್ಕೆ ಸಿಲುಕುವ ಅಪಾಯ ಹೆಚ್ಚಿದೆ. ಲೈಂಗಿಕ ದೌರ್ಜನ್ಯ, ಭಿಕ್ಷಾಟನೆ, ಅಂಗಾAಗ ಮಾರಾಟ ಹಾಗೂ ಜೀತ ಪದ್ಧತಿಯಂತಹ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.