ಚಿತ್ರದುರ್ಗದ ಡಯಟ್‌ನಲ್ಲಿ ಸರ್ಕಾರಿ ಪ್ರೌಢಶಾಲೆ ಆಂಗ್ಲಭಾಷಾ ಶಿಕ್ಷಕರಿಗೆ ಸೋಮವಾರ ಆಯೋಜಿಸಿದ್ದ ತರಬೇತಿ ಕರ‍್ಯಾಗಾರ ವ ನ್ನು ಡಯಟ್ ಪ್ರಾಚರ‍್ಯ ಎಂ.ನಾಸಿರುದ್ದೀನ್ ಉದ್ಘಾಟಿಸಿದರು. ಎಸ್.ನಾಗಭೂಷಣ್,ಎಸ್.ಬಸವರಾಜು,ಶಿವಲೀಲಾ ಇತರರು ಇದ್ದರು.
- ಡಯಟ್ ಪ್ರಾಚರ‍್ಯ ಎಂ.ನಾಸಿರುದ್ದೀನ್ ಅಭಿಮತ
- ಸರ್ಕಾರಿ ಪ್ರೌಢಶಾಲೆ ಶಿಕ್ಷಕರಿಗೆ ಕರ‍್ಯಾಗಾರ
- ಭಾಷಾ ಕೌಶಲ
ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ ಸಾಮರ್ಥ್ಯ ಬೆಳೆಸಬೇಕೆಂದು ಡಯಟ್ ಪ್ರಾಚರ‍್ಯ ಎಂ.ನಾಸಿರುದ್ದೀನ್ ಹೇಳಿದರು. ಸರ್ಕಾರಿ ಪ್ರೌ ಢಶಾಲೆ ಆಂಗ್ಲಭಾಷಾ ಶಿಕ್ಷಕರಿಗೆ ನಗರದ ಡಯಟ್‌ನಲ್ಲಿ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ‍್ಯಾಗಾರ ಉ ದ್ಘಾಟಿಸಿ ಅವರು ಮಾತನಾಡಿದರು.
ಭಾಷಾ ಕೌಶಲಗಳಲ್ಲಿ ಆಲಿಸುವಿಕೆ, ಮಾತುಗಾರಿಕೆ, ಓದು ಮತ್ತು ಬರಹದ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿದಾಗ ಇತರೆ ವಿಷಯಗಳ ಕಲಿಕೆ ಸುಲಭವಾಗಲಿದೆ. ಇಂಗ್ಲೀಷ್ ಸಂವಹನ ಸಾಮರ್ಥ್ಯದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ ಆಗುತ್ತದೆ. ಇದರಿಂ ದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುತ್ತದೆ ಎಂದರು.
ಉಪಪ್ರಾಚರ‍್ಯ ಎಸ್.ನಾಗಭೂಷಣï ಮಾತನಾಡಿ, ಶಿಕ್ಷಕರಿಗೆ ಕ್ರಿಯಾಶೀಲತೆ ಮುಖ್ಯ. ಇಲಾಖೆ ನಿಗದಿಪಡಿಸುವ ಹೊಸ ಕರ‍್ಯ ಕ್ರ ಮಗಳ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಹೆಚ್ಚಿದೆ. ಬೋಧನೆಯಲ್ಲಿ ನಾವಿನ್ಯಚಟುವಟಿಕೆಗಳನ್ನು ಅಳವಡಿಸಿಕೊಂಡು ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ತರಬೇತಿಗಳು ನೆರವಾಗುತ್ತವೆ ಎಂದರು.
ತರಬೇತಿ ಕರ‍್ಯಕ್ರಮದ ಸಂಯೋಜಕ ಎಸ್.ಬಸವರಾಜು ಮಾತನಾಡಿ, ಶಿಕ್ಷಕರ ವÊತ್ತಿಪರ ಸಾಮರ್ಥ್ಯದ ಬೆಳವಣಿಗೆ, ಮಕ್ಕಳ ಕ ಲಿಕಾ ಬಲವರ್ಧನೆಗೆ ತರಬೇತಿಗಳು ಅನುಕೂಲವಾಗಿವೆ. ಪಠ್ಯ ಕಲಿಕೆಯಲ್ಲಿ, ಕಲಿತ ವಿಷಯಗಳನ್ನು ಪುನರಾವರ್ತನೆ ಮಾಡಿ ಕೊಂಡು ಕಲಿಕಾ ಬಲವರ್ಧನೆ ಮಾಡಿಕೊಳ್ಳಲು ಮರುಸಿಂಚನ ಪೂರಕ ಕರ‍್ಯಕ್ರಮವಾಗಿದೆ ಎಂದರು.
ಉಪನ್ಯಾಸಕಿ ಶಿವಲೀಲಾ, ಸಂಪನ್ಮೂಲ ವ್ಯಕ್ತಿಗಳಾದ ಎನ್.ರಾಘವೇಂದ್ರ, ನಿಜಗುಣಮೂರ್ತಿ, ಶಿಕ್ಷಕರಾದ ಚಿದಾನಂದ, ಶೋಭ ಮತ್ತು ಜಿಲ್ಲೆಯ ೬ ತಾಲೂಕಿನ ಇಂಗ್ಲಿಷ್ ಭಾಷಾ ಶಿಕ್ಷಕರು ಇ ದ್ದರು. ಮರುಸಿಂಚನ,ಜ್ಞಾನಸೇತು, ಪೋಕ್ಸೋ,ಮಕ್ಕಳ ಹಕ್ಕುಗಳು, ಮೌಲ್ಯ ಶಿಕ್ಷಣ, ವÊತ್ತಿ ಮಾರ್ಗದರ್ಶನ ವಿಷಯ ಕುರಿತು ಕರ‍್ಯಾಗಾರ ಆಯೋಜಿಸಲಾಗಿತ್ತು.