ಚಿತ್ರದುರ್ಗದ ಆರ್‌ಟಿಒ ಕಚೇರಿ
- ಇತ್ಯರ್ಥವಾಗದ ಎಟಿಎಸ್ ನಿರ್ಮಾಣ
- ಕೈಗೂಡದ ಟ್ರಕ್ ಟರ್ಮಿನಲ್
- ರಾಜ್ಯ ರಸ್ತೆ ಸಾರಿಗೆ ನಿಗಮ
ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣಕ್ಕೆ ರಾಜ್ಯ ಸರ್ಕಾರ ೭. ೫೦ ಕೋಟಿ ರೂ. ಮಂಜೂರು ಮಾಡಿದೆ.
ಆರ್‌ಟಿಒ ಕಚೇರಿ ಆವರಣದಲ್ಲಿ ೪.೩೪ ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸುವ ಈ ಪಥಕ್ಕೆ ಸರ್ಕಾರದಿಂದ ಕಳೆದ ಜೂನ್‌ನಲ್ಲಿ ಅನುದಾನ ಮಂಜೂರಾಗಿದೆ. ಈ ಪೈಕಿ ೨೫ ಲಕ್ಷ ರೂ. ಬಿಡುಗಡೆಯಾಗಿದ್ದು, ನಿರ್ಮಾಣ ಹೊಣೆಯನ್ನು ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ವಹಿಸಲಾಗಿದೆ.
ಅನುದಾನ ಮಂಜೂರಾಗಿ ೮-೯ ತಿಂಗಳಾದರೂ ಕಾಮಗಾರಿ ತ್ವರಿತವಾಗಿಲ್ಲ. ಆರಂಭದಲ್ಲೇ ಅತ್ಯಂತ ಕಡಿಮೆ ಮೊತ್ತ ಬಿಡುಗಡೆ ಮಾಡಿರುವುದು ಪಥ ನಿರ್ಮಾಣವಾಗುವುದೇ ಎಂಬ ಸಂದೇಹಕ್ಕೂ ಎಡೆ ಮಾಡಿದೆ.
ದ್ವಿಚಕ್ರ ಮೋಟಾರು ವಾಹನ ಹಾಗೂ ಲಘು ಮೋಟಾರು ವಾಹನÀ ಚಾಲಕರ ಚಾಲನಾ ಸಾಮರ್ಥ್ಯ ಪರೀಕ್ಷಿಸಿ ಡ್ರೆÊವಿಂಗ್ ಲೈಸೆ ನ್ಸ್ ಕೊಡಲಾಗುತ್ತದೆ. ಲಘು ಹಾಗೂ ಭಾರೀ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕೊಡುವಂಥ ಆಟೋಮೆಟೆಡ್ ಟೆಸ್ಟಿಂಗ್ ಸ್ಟೇಷನ್ ಸೆಂಟರ್(ಎಟಿಎಸ್)ಹಾಗೂ ಭಾರೀ ವಾಹನಗಳ ಚಾಲನಾ ಪರವಾನಗಿಗೆ ಪ್ರತ್ಯೇಕ ಪರೀಕ್ಷಾ ಪಥ ನಿರ್ಮಾಣದ ಇರಾದೆ ಇಲಾಖೆಗೆ ಇದೆ.
ಆದರೆ, ಇದಕ್ಕೆ ಅಂದಾಜು ೧೦ ಎಕರೆ ಜಾಗ ಅಗತ್ಯವಿದೆ. ಇದಕ್ಕಾಗಿ ಕ್ಯಾದಿಗೆರೆ ಹಾಗೂ ಹೊಳಲ್ಕೆರೆ ರಸ್ತೆಯಲ್ಲಿ ಸ್ಥಳ ಪರಿಶೀಲನೆ ನಡೆದಿದ್ದರೂ ಎಲ್ಲಿ ನಿರ್ಮಿಸಬೇಕೆಂಬ ಗೊಂದಲ ಹಾಗೂ ಅನುದಾನದ ವಿಚಾರ ಇತ್ಯರ್ಥವಾಗದೆ ನನೆಗುದಿಗೆ ಬಿದ್ದಿದೆ. ರಾಜ್ಯದ ಬೆಂಗಳೂರಲ್ಲಿ ೮, ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ, ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ತಲಾ ಒಂದೊAದು ಆಟೋಮೆಟೆಡ್ ಟೆಸ್ಟಿಂಗ್ ಸ್ಟೇಷನ್ ಸೆಂಟರ್ ಹಾಗೂ ಭಾರೀ ವಾಹನಗಳ ಚಾಲನ ಪರವಾನಗಿ ಪರೀಕ್ಷಾ ಪಥವನ್ನು ಸಾರಿಗೆ ಇಲಾಖೆಯಿಂದಲೇ ನಿರ್ಮಿಸಲಾಗಿದೆ.
ದಾವಣಗೆರೆಯಲ್ಲೂ ಎಟಿಎಸ್ ಹಾಗೂ ಎಚ್‌ಎಂವಿ ಡ್ರೆÊವಿಂಗ್ ಟ್ರ‍್ಯಾಕ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಇನ್ನು ಮುಂದೆ ರಾಜ್ಯದಲ್ಲಿ ಎಲ್ಲೇ ಎಟಿಎಸ್ ಹಾಗೂ ಎಚ್‌ಎಂವಿ ಡ್ರೆÊವಿಂಗ್ ಟ್ರ‍್ಯಾಕ್ ನಿರ್ಮಾಣವಾದರೂ ಅದು ಪಿಪಿಪಿ ಮಾಡೆಲ್ ನಲ್ಲಿರುತ್ತವೆ.
ಭಾರೀ ವಾಹನ ಚಾಲನಾ ಪರವಾನಗಿ ನವೀಕರಣ ಸ್ಥಳೀಯವಾಗಿರಲಿ ಎಂಬ ಚಾಲಕರ ಬೇಡಿಕೆ ಈಡೇರಿಸಲು, ನಮ್ಮ ಹಂತದಲ್ಲಿ ಸಾಧ್ಯವಾಗದು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಎಚ್‌ಎಂವಿ ಡ್ರೆÊವಿಂಗ್ ಲೈಸೆನ್ಸ್ ನವೀಕರಿಸಲು ಪುನಶ್ಚೇತನ ತರಬೇತಿ ಕಡ್ಡಾಯವೆಂದು ಇಲಾಖೆ ಹೇಳಿದೆ.
ಟ್ರಕ್ ಟರ್ಮಿನಲ್: ಹಿರಿಯೂರು ತಾಲೂಕು ಜವಗೊಂಡನಹಳ್ಳಿಯಿAದ ದಾವಣಗೆರೆ ಹೆಬ್ಬಾಳ್ ಟೋಲ್ ಗೇಟ್ ನಡುವೆ ಟ್ರಕ್ ಟರ್ಮಿನಲ್ ನಿರ್ಮಿಸಬೇಕೆಂಬ ಬೇಡಿಕೆ ಈಡೇರಿಲ್ಲ. ಅಪಘಾತಗಳ ನಿಯಂತ್ರಣಕ್ಕೆ ಟರ್ಮಿನಲ್ ಅಗತ್ಯವಿದೆ. ಕೆಲವು ವರ್ಷಗಳ ಹಿಂದೆ ಚಿತ್ರದುರ್ಗ-ಹಿರಿಯೂರು ನಡುವೆ ಸ್ಥಳ ಪರಿಶೀಲನೆ ನಡೆದಿದ್ದರೂ ಕೈಗೂಡಿಲ್ಲ.
ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ
ಚಿತ್ರದುರ್ಗದಲ್ಲಿ ನಿರ್ಮಾಣವಾಗಲಿರುವ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದಲ್ಲಿ ಪ್ರವೇಶ ಮತ್ತು ನಿರ್ಗಮನ ಮಾರ್ಗ, ಸಾರ್ವಜನಿಕರ ಕಾಯುವಿಕೆಗೆ ಸುಸಜ್ಜಿತ ಶೆಲ್ಟರ್, ದ್ವಿಚಕ್ರ ಮೋಟಾರು ವಾಹನ ಟೆಸ್ಟ್ ಟ್ರ‍್ಯಾಕ್, ದ್ವಿಚಕ್ರ ಮೋಟಾರು ವಾಹನಗಳ ಕಂಟ್ರೋಲ್ ರೂಂ., ಎಲ್‌ಎಂವಿ ಹಂಪ್ ಆ್ಯಂಡ್ ಡಿಪ್, ಬೇ ಪಾರ್ಕಿಂಗ್, ಎಲ್‌ಎಂವಿ `೮' ಕರ್ವ್, ಎಎಲ್‌ಎಂವಿ ೩ ರಿವರ್ಸ್ ಪಾಯಿಂಟ್, ಎಲ್‌ಎಂವಿ ರಿವರ್ಸ್ ಪಾರ್ಕಿಂಗ್, ಎಲ್‌ಎಂವಿ ಕಂಟ್ರೋಲ್‌ರೂA, ಎಲ್‌ಎಂವಿ `ಎಸ್' ಕರ್ವ್ ಹಾಗೂ ಶೌಚಗೃಹಗಳಿರುತ್ತವೆ.
ಚಿತ್ರದುರ್ಗ ಆರ್‌ಟಿಒ ವ್ಯಾಪ್ತಿಯಲ್ಲಿ ದಿನವೊಂದಕ್ಕೆ ಸರಾಸರಿ ೬೦ ಚಾಲನಾ ಪರವಾಗಿ ಕೊಡಲಾಗುತ್ತದೆ. ಈ ಕಚೇರಿ ಕಳೆದ ಆರ್ಥಿಕ ಸಾಲಿನ ಆದಾಯ ಸಂಗ್ರಹ ಗುರಿ ೧೮೦ ಕೋಟಿ ರೂ.ಗಳ ಪೈಕಿ ೧೩೫ ಕೋಟಿ ರೂ.ಸಂಗ್ರಹವಾಗಿದೆ. ಚಳ್ಳಕೆರೆಯಲ್ಲಿ ಆರ್‌ಟಿಪಿ ಕಚೇರಿ ಆರಂಭಿಸಬೇಕೆAಬ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ಸಾರಿಗೇತರ, ಲಘು ಮೋಟಾರು, ಸಾರಿಗೆ ಮತ್ತಿತರ ಒಟ್ಟು ೫,೭೬,೪೭೬ ವಾಹನಗಳಿವೆ. ೧೮ ತರಬೇತಿ ಶಾಲೆಗಳಿದ್ದು, ಜಿಲ್ಲೆಯಲ್ಲಿ ೬೭ ವಾಹನಗಳ ಶೋರೂಂ.ಗಳಿವೆ ಹಾಗೂ ೧೭ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಿವೆ.
ಡ್ರೆÊವಿAಗ್ ಟ್ರ‍್ಯಾಕ್ ನಿರ್ಮಾಣಕ್ಕಾಗಿ ಆರ್‌ಟಿಒ ಕಚೇರಿ ಆವರಣದಲ್ಲಿರುವ ೩೦೦ಕ್ಕೂ ಹೆಚ್ಚು ದೊಡ್ಡ, ಚಿಕ್ಕ ಮರಗಳ ಪೈಕಿ ೧೬ ಮರಗಳನ್ನು ಮಾತ್ರ ತೆಗೆಯಲಾಗಿದೆ. ೩೫ ವರ್ಷಗಳ ಹಿಂದೆಯೇ ನಿರ್ಮಾಣವಾಗಿರುವ ಕಚೇರಿ ಕಟ್ಟಡ ಕುರಿತಂತೆ ಲೋಕೋಪಯೋಗಿ ಇಲಾಖೆ ಅಭಿಪ್ರಾಯ ಕೇಳಲಾಗಿದೆ. ವರದಿ ಆಧರಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.