ಚಿತ್ರದುರ್ಗದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಕವಿ ಚಂದ್ರಶೇಖರ ತಾಳ್ಯ, ಪ್ರೊ.ಜೆ.ಕರಿಯಪ್ಪ ಮಾಳಿಗೆ, ತಿಪ್ಪಣ್ಣ ಮರಿಕುಂಟೆ, ಪ್ರೊ.ಸಿ.ಇ.ಜಗನ್ನಾಥ, ಪ್ರೊ.ತಾರಿಣಿ ಶುಭದಾಯಿನಿ, ಪ್ರೊ.ಬಿ.ಸುರೇಶ್, ಕೆ.ಚಿತ್ತಯ್ಯ, ಪ್ರೊ.ಲತಾ, ಹರೀಶ್, ಬಾಬು ರೆಡ್ಡಿ ಇತರರಿದ್ದರು. 
ಚಿತ್ರದುರ್ಗ

ಕುವೆಂಪು ವೈಚಾರಿಕ ಮೌಲ್ಯಗಳು ಪ್ರಸ್ತುತ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಕವಿ ಚಂದ್ರಶೇಖರ ತಾಳ್ಯ ಹೇಳಿಕೆ
  • ದುರ್ಗದ ಸರ್ಕಾರಿ ಕಾಲೇಜಿನಲ್ಲಿ ವಿಶ್ವ ಮಾನವರ ಜನ್ಮದಿನಾಚರಣೆ
  • ವ್ಯಕ್ತಿ ಪೂಜೆ ಮತ್ತು ಶುಷ್ಕ ಆಚರಣೆ
ಚಿತ್ರದುರ್ಗ: ರಾಷ್ಟçಕವಿ ಕುವೆಂಪು ಅವರ ಸಾಹಿತ್ಯದಲ್ಲಿರುವ ವೈಚಾರಿಕ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕವಿ ಚಂದ್ರಶೇಖರ ತಾಳ್ಯ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಮಾನವ ಹಾಗೂ ಕುವೆಂಪು ಜನ್ಮದಿನಾಚರಣೆಯಲ್ಲಿ ಮಾತನಾಡಿ, ಕುವೆಂಪು ವ್ಯಕ್ತಿ ಪೂಜೆ ಮತ್ತು ಶುಷ್ಕ ಆಚರಣೆಗಳನ್ನು ಖಂಡಿಸುತ್ತಿದ್ದರು.
ಸಾಹಿತ್ಯ, ಅಧ್ಯಾತ್ಮ, ವೈಚಾರಿಕ ಚಿಂತನೆ ಅವರನ್ನು ವಿಶ್ವಮಾನವರನ್ನಾಗಿಸಿವೆ. ವಿದ್ಯಾರ್ಥಿಗಳು ಅವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡಬೇಕು ಎಂದರು.
ಪ್ರಾಚಾರ್ಯ ಪ್ರೊ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಕುವೆಂಪು ಸಾಹಿತ್ಯದ ತಿಳಿವಳಿಕೆಯಿಂದ ವ್ಯಕ್ತಿ ಸ್ವಾತಂತ್ರ‍್ಯ ಮತ್ತು ಪರಿ ಪೂರ್ಣ ಬದುಕಿನ ಮಹತ್ವ ಅರ್ಥವಾಗುತ್ತದೆ. ಪ್ರಸ್ತುತ ಜಾತಿ, ಮಾತು, ಧರ್ಮಗಳು ತಂದೊಡ್ಡಿರುವ ಬಿಕ್ಕಟ್ಟುಗಳಿಗೆ ಕುವೆಂಪು ಸಾಹಿತ್ಯದಲ್ಲಿ ಪರಿಹಾರವಿದೆ. ಕುವೆಂಪು ಸಾಹಿತ್ಯ ಸೃಜನಶೀಲತೆಯನ್ನು ಬೆಳೆಸುತ್ತದೆ. ವಿಶ್ವ ಮೈತ್ರಿ ಜೀವನ ಪ್ರೀತಿ ಮೂಡಿಸುತ್ತದೆ ಎಂದರು.
ಸಾಹಿತಿ ತಿಪ್ಪಣ್ಣ ಮರಿಕುಂಟೆ, ಪ್ರೊ.ಸಿ.ಇ.ಜಗನ್ನಾಥ ಮಾತನಾಡಿದರು. ಐಕ್ಯೂಎಸಿ ಸಂಚಾಲಕಿ ಪ್ರೊ.ತಾರಿಣಿ ಶುಭದಾಯಿನಿ, ಪರೀಕ್ಷಾ ನಿಯಂತ್ರಣಾಽಕಾರಿ ಪ್ರೊ.ಬಿ.ಸುರೇಶ್, ಕನ್ನಡ ಸಹ ಪ್ರಾಧ್ಯಾಪಕ ಕೆ.ಚಿತ್ತಯ್ಯ, ಸಮಾಜಶಾಸ್ತç ಸಹ ಪ್ರಾಧ್ಯಾಪಕಿ ಪ್ರೊ.ಲತಾ, ಕಾಲೇಜಿನ ಅಽÃಕ್ಷಕ ಹರೀಶ್, ಬಾಬುರೆಡ್ಡಿ ಇದ್ದರು.