ಸಾಂಕೇತಿಕ ಚಿತ್ರ. 
ಚಿತ್ರದುರ್ಗ

ನೆಟ್ ಜೀರೋ ಜಿಲ್ಲೆಗೆ ಕೋಲಾರ ಮಾದರಿ

ಹವಾಮಾನ ವೈಪರೀತ್ಯ ತಡೆಗೆ ರಾಜ್ಯ ಸರ್ಕಾರದ ದಿಟ್ಟ ಹೆಜ್ಜೆ

ಚಿತ್ರದುರ್ಗ: ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಕೋಲಾರ ಜಿಲ್ಲೆಯ ಮಾದರಿಯಲ್ಲೇ ಚಿತ್ರದುರ್ಗ ಜಿಲ್ಲೆಯಲ್ಲೂ ನಿವ್ವಳ ಶೂನ್ಯ ಕಾ ರ್ಬನ್ ತಟಸ್ಥತೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆ ಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಹವಾಮಾನ ರಾಯಭಾರಿ ಹಾಗೂ ನಿವ್ವಳ ಶೂನ್ಯ ರಾಜ್ಯಮಟ್ಟದ ಕಾರ್ಯಪಡೆಯು ಮೊದಲ ಹಂತದಲ್ಲಿ ರಾಜ್ಯದ ತೀವ್ರ ಬರಪೀಡಿತ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾರ್ಯಪಡೆ ಉಪಾಧ್ಯಕ್ಷ ಉಪೇಂದ್ರ ತ್ರಿಪಾಠಿ ಅವರು ಚಿತ್ರದುರ್ಗ ಜಿಲ್ಲಾಽಕಾರಿ ಹಾಗೂ ಕೃಷಿ, ತೋಟಗಾರಿಕೆ, ಅರಣ್ಯ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತಿತರ ಸಂಬAಽಸಿದ ರಾಜ್ಯಮತ್ತು ಜಿಲ್ಲಾ ಮಟ್ಟದ ಅಽಕಾರಿಗಳ ಜತೆ ಆನ್‌ಲೈನ್ ಮೂಲಕ ಮಹತ್ವದ ಸಭೆ ನಡೆಸಿ, ನೋಡಲ್ ಅಽಕಾರಿಗಳ ನೇಮಕ ಹಾಗೂ ಕ್ರಿಯಾಯೋಜನೆ ರೂಪಿಸುವ ಕುರಿತು ಚರ್ಚಿಸಿದ್ದಾರೆ.

ಮೂರು ಸಂಸ್ಥೆಗಳ ತಾಂತ್ರಿಕ ಸಾಥ್

ಕಡಿಮೆ ಇಂಗಾಲ ಹೊರಸೂಸುವಿಕೆ ಹಾಗೂ ಹವಾಮಾನ ಬದಲಾವಣೆ ತಡೆದುಕೊಳ್ಳುವ ಆರ್ಥಿಕತೆಯತ್ತ ರಾಜ್ಯವನ್ನು ಕೊಂಡೊಯ್ಯುವುದು ಕಾರ್ಯಪಡೆಯ ಮುಖ್ಯ ಗುರಿಯಾಗಿದೆ. ಈಗಾಗಲೇ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್‌ಐ), ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿ ಅಧ್ಯಯನ ಕೇಂದ್ರ (ಸಿಎಸ್‌ಟಿಇಪಿ) ಹಾಗೂ ವಸುಧಾ ಫೌಂಡೇಷನ್‌ನ ತಾಂತ್ರಿಕ ಸಹಕಾರದೊಂದಿಗೆ ಕೋಲಾರ ಜಿಲ್ಲೆಗೆ ನೆಟ್ ಜೀರೋ ಯೋಜನೆ ಸಿದ್ಧಪಡಿಸಲಾಗಿದೆ. ಇದೇ ಮಾದರಿಯಲ್ಲಿ ಚಿತ್ರದುರ್ಗದ ಪರಿಸರ, ಉದ್ಯೋಗಾವಕಾಶ ಹಾಗೂ ಹೂಡಿಕೆಗಳ ಮೇಲಾಗುವ ಪರಿಣಾಮಗಳನ್ನು ಅಧ್ಯಯನ ಮಾಡಿ ಸಮಗ್ರ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.

೨೦೭೦ರ ನೆಟ್ ಜೀರೋ ಗುರಿ, ಏನೆಲ್ಲಾ ಬದಲಾವಣೆ?

೨೦೨೧ರ ನವೆಂಬರ್‌ನಲ್ಲಿ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ ಇuP೨೬' ಹವಾಮಾನ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೨೦೭೦ರ ವೇಳೆಗೆ ಭಾರತವನ್ನು ನೆಟ್ ಜೀರೋ ಎಮಿಷನ್ (ಶೂನ್ಯ ಇಂಗಾಲ ಹೊರಸೂಸುವಿಕೆ) ರಾಷ್ಟçವನ್ನಾಗಿಸುವ ಘೋಷಣೆ ಮಾಡಿದ್ದರು. ಇದಕ್ಕೆ ಪೂರಕವಾಗಿ ೨೦೩೫ರ ವೇಳೆಗೆ ಇಂಗಾಲದ ಪ್ರಮಾಣ ತಗ್ಗಿಸಲು ಈ ಕೆಳಗಿನ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ.

* ಹಸಿರು ಸಾರಿಗೆ: ಅತಿಯಾದ ಇಂಗಾಲ ಹೊರಸೂಸುವಿಕೆಗೆ ಮೂಲವಾಗಿರುವ ರಸ್ತೆ ಸಾರಿಗೆಯಲ್ಲಿ ಇವಿಎಂ (ವಿದ್ಯುತ್ ವಾಹನ ) ಹಾಗೂ ನವೀಕರಿಸಬಹುದಾದ ಇಂಧನ ಬಳಕೆ ಮತ್ತು ಉತ್ಪಾದನೆ ವಿಸ್ತರಣೆ.

* ಕೃಷಿ ಸುಧಾರಣೆ: ಸೂಕ್ಷ÷್ಮ ನೀರಾವರಿ, ಸೌರ ಪಂಪ್‌ಸೆಟ್‌ಗಳ ಬಳಕೆ ಹಾಗೂ ಜಾನುವಾರುಗಳಿಂದ ಉತ್ಪತ್ತಿಯಾಗುವ ಮೀಥೇನ್ ಅನಿಲ ತಗ್ಗಿಸುವುದು.

* ಪರಿಸರ ರಕ್ಷಣೆ: ವ್ಯಾಪಕ ಅರಣ್ಯ ಸಂರಕ್ಷಣೆ, ವಸತಿ ಪ್ರದೇಶಗಳಲ್ಲಿ ಇಂಧನ ಬೇಡಿಕೆ ಕಡಿತಗೊಳಿಸುವುದು.

* ಶೇ.೪೫ ಕಡಿತದ ಗುರಿ: ೨೦೦೫ರ ಮಟ್ಟಕ್ಕೆ ಹೋಲಿಸಿದರೆ ಇಂಗಾಲದ ತೀವ್ರತೆಯನ್ನು ಶೇ. ೪೫ರಷ್ಟು ತಗ್ಗಿಸಲು ಸೌರಶಕ್ತಿ ಮತ್ತು ಪವನಶಕ್ತಿ ಬಳಕೆ ಹೆಚ್ಚಿಸುವ ಮೂಲಕ ಹಸಿರುಮನೆ ಅನಿಲಗಳಿಗೆ ಕಡಿವಾಣ ಹಾಕುವುದು.

ಇಂಗಾಲದ ಹೊರಸೂಸುವಿಕೆ ಕಡಿತಗೊಳಿಸಿ, ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಗ್ಗಿಸುವ ನಿಟ್ಟಿನಲ್ಲಿ ಹವಾಮಾನ ರಾಯಭಾರಿ ಹಾಗೂ ನಿವ್ವಳ ಶೂನ್ಯ ರಾಜ್ಯಮಟ್ಟದ ಕಾರ್ಯಪಡೆಯು ರಾಜ್ಯದಲ್ಲಿ ಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ಮುಂದಾಗಿದೆ. ಈ ಕುರಿತು ಕಾರ್ಯಪಡೆ ಉಪಾಧ್ಯಕ್ಷರು ಹಾಗೂ ಜಿಲ್ಲಾಽಕಾರಿ ಅವರ ನೇತೃತ್ವದಲ್ಲಿ ಅಽಕಾರಿಗಳ ಸಭೆ ನಡೆದಿದೆ.
- ಎಚ್.ವಿ. ಪಲ್ಲವಿ, ಪರಿಸರ ಅಽಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಚಿತ್ರದುರ್ಗ