ಚಿತ್ರದುರ್ಗದ ಶ್ರೀ ರಾಘವೇಂದ್ರ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ರಂಗ ಕಲೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ.ಬಿ.ಎಂ. ಗುರುನಾಥ್, ಡಾ.ಕೆ. ಮೋಹನ್, ಡಾ.ಎ.ಜಿ. ಬಸವರಾಜಪ್ಪ ಇತರರು ಇದ್ದರು. 
ಚಿತ್ರದುರ್ಗ

ಬೋಧನೆಯಲ್ಲಿ ರಂಗ ಕೌಶಲಗಳ ಅರಿವು ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಅಭಿಪ್ರಾಯ
  • ಶಿಕ್ಷಣದಲ್ಲಿ ರಂಗಕಲೆ ತರಬೇತಿ ಕಾರ್ಯಾಗಾರ
  • ರಂಗಸೌರಭ ಕಲಾ ಸಂಘ
ಚಿತ್ರದುರ್ಗ: ಬೋಧನೆಯಲ್ಲಿ ರಂಗ ಕೌಶಲಗಳ ಅರಿವು ಇರಬೇಕು ಎಂದು ಸಾಹಿತಿ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಅಭಿಪ್ರಾಯ ಪಟ್ಟರು.
ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ನಗರದ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಶಿಕ್ಷಣದಲ್ಲಿ ರಂಗಕಲೆ ತರಬೇತಿ ಕಾರ್ಯಾಗಾರ, ರಂಗಗೀತೆ, ಉಪನ್ಯಾಸ, ಕವಿಕಾವ್ಯ ಪರಿಚಯ, ನಾಟಕ ಪ್ರದರ್ಶನದಲ್ಲಿ ಅವರು ಶೈಕ್ಷಣಿಕ ರಂಗಕಲೆಯ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ದಾರ್ಶನಿಕರ ಬದುಕಿನ ಮೌಲ್ಯಗಳು ಉತ್ತಮ ಶಿಕ್ಷಕನ ಸ್ವತ್ತಾಗಿರಬೇಕು. ಶಿಕ್ಷಕರಿಗೆ ಬೋಧನಾ ಪ್ರೇರಣೆ ನೀಡುವುದರಿಂದ ಉತ್ತಮ -Àಲಿತಾಂಶ ಕಾಣಬಹುದಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ರಂಗಭೂಮಿ ನಮ್ಮ ಕನ್ನಡನಾಡಿನ ಮೂಲಸಂಸ್ಕೃತಿಯಾಗಿದೆ. ಅದು ಧಾರ್ಮಿಕ ಮತ್ತು ಜೀವನ ಕ್ರಮದಲ್ಲಿ ಹಾಸು ಹೊಕ್ಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎ.ಜಿ. ಬಸವರಾಜಪ್ಪ ಮಾತನಾಡಿದರು. ಉಪನ್ಯಾಸಕ ಡಾ.ಕೆ. ಮೋಹನ್‌ಕುಮಾರ್ ಅವರು ತರಾಸು ಅವರ ಜನ್ಮದಿನದ ಅಂಗವಾಗಿ ಪರಿಚಯ ಲೇಖನ ವಾಚಿಸಿದರು.
ಪತ್ರಕರ್ತ ವೀರೇಂದ್ರಕುಮಾರ್ ಕೋಗುಂಡೆ ಅವರನ್ನು ಸನ್ಮಾನಿಸಲಾಯಿತು. ರಂಗ ನಿರ್ದೇಶಕ ಕೆ.ಪಿ.ಎಂ. ಗಣೆÃಶಯ್ಯ, ಉಪನ್ಯಾಸಕ ಡಿ. ಸುದರ್ಶನ, ಜಿ.ಎಸ್. ರಾಘವೇಂದ್ರ, ಎಂ. ಸ್ವಾತಿ, ಎಸ್.ಟಿ.ಪದ್ಮಶ್ರೀ, ದೇ.ಶಿ. ನಿರ್ದೇಶಕ ರುದ್ರಮುನಿ, ಹಗಲುವೇಷ ಕಲಾವಿದ ಮಂಜುನಾಥ, ಗಾಯಕ ಕೆ. ಗಂಗಾಧರ ಮತ್ತಿತರರು ಮಾತನಾಡಿದರು. ಪ್ರಶಿಕ್ಷಣಾರ್ಥಿ ಗ-ÀÆರ್ ಪ್ರಾರ್ಥಿಸಿದರು. ಎಂ.ಬಿ.ಮAಜುನಾಥ ನಿರೂಪಿಸಿದರು.